Advertisement
ರಾಜ್ಯದ ಸರಕಾರಿ ಶಾಲೆಗಳಿಗೆ ಭೇಟಿ ನೀಡುವ ಶಿಕ್ಷಣ ಇಲಾಖೆ ಅಧಿಕಾರಿಗಳು ಪರಿಶೀಲಿಸಿದ ವಿಷಯಗಳು, ಶಾಲೆಯಲ್ಲಿರುವ ಕುಂದು-ಕೊರತೆ, ಮೂಲ ಸೌಕರ್ಯ ಸಮಸ್ಯೆ, ಭೇಟಿ ನೀಡಿದ ಶಾಲೆಯ ಹೆಸರು ಸೇರಿದಂತೆ ಇನ್ನಿತರ ವಿಷಯಗಳ ಮಾಹಿತಿಯನ್ನು ಸ್ಥಳದಲ್ಲಿಯೇ ಆ್ಯಪ್‌ಗೆ ಅಪ್‌ಲೋಡ್ ಮಾಡಲಾಗುತ್ತದೆ.
ಸದ್ಯ ಇಲಾಖೆ ಅಧಿಕಾರಿಗಳು ತಾವು ಭೇಟಿ ನೀಡುವ ಶಾಲೆಗಳ ಮಾಹಿತಿ, ಅಲ್ಲಿ ಕಂಡು ಬರುವ ಮೂಲ ಸೌಕರ್ಯ ಸಮಸ್ಯೆ, ಶಿಕ್ಷಕರ ಕೊರತೆ, ಕಲಿಕಾ ಪರಿಕರಗಳ ಕೊರತೆ ಮುಂತಾದ ವಿಷಯಗಳನ್ನು ಅರ್ಜಿಯಲ್ಲಿ ದಾಖಲಿಸಿಕೊಳ್ಳುತ್ತಿದ್ದಾರೆ. ಅದನ್ನು ಇಲಾಖೆ ವಿವಿಧ ಹಂತದಲ್ಲಿ ಗಮನಕ್ಕೆ ತರಲು ತಿಂಗಳುಗಟ್ಟಲೆ ಬೇಕಾಗಿದೆ. ಅದರ ಬದಲು ಆ್ಯಪ್ ಮೂಲಕವಾದರೆ ಅಧಿಕಾರಿಗಳು ಭೇಟಿ ನೀಡುವ ದಿನವೇ ಇಲಾಖೆಯ ಗಮನಕ್ಕೆ ಬರಲಿದೆ. ಇದರಿಂದ ತತ್‌ಕ್ಷ ಣವೇ ಶಾಲೆಯಲ್ಲಿರುವ ಸಮಸ್ಯೆಗಳು, ಶಾಲೆಯಲ್ಲಿ ಶಿಕ್ಷ ಕರ ಮಾದರಿ ಕೆಲಸಗಳು, ವಿದ್ಯಾರ್ಥಿಗಳ ನೂತನ ಪ್ರಯೋಗ ಗಳು, ವಿದ್ಯಾರ್ಥಿಗಳ ಕೌಶಲ ಮುಂತಾದ ವಿಷಯಗಳು ಇಲಾಖೆ ಗಮನಕ್ಕೆ ಬರಲಿವೆ. ಉನ್ನತ ಅಧಿಕಾರಿಗಳ ಸಭೆ ಯಲ್ಲಿ ಬೇಕಾದ ದತ್ತಾಂಶವನ್ನು ಕ್ಷಣಾರ್ಧದಲ್ಲಿ ಪಡೆ ಯಲು ಸಹ ಅನುಕೂಲವಾಗಲಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.
Related Articles
Advertisement
ಚುರುಕು ಮುಟ್ಟಿಸುವ ಉದ್ದೇಶಕೆಳ ಹಂತದಲ್ಲಿ ಕೆಲವು ಅಧಿಕಾರಿಗಳು ಶಾಲೆಗಳಿಗೆ ಭೌತಿಕ ಭೇಟಿ ನೀಡದೆ ಕಚೇರಿಯಲ್ಲಿಯೇ ಕುಳಿತು ನಿರ್ವಹಣೆ ಮಾಡುತ್ತಿರುತ್ತಾರೆ. ಆ್ಯಪ್ ಜಿಪಿಎಸ್ ಆಧಾರಿತವಾಗಿದ್ದು, ಅಧಿಕಾರಿಗಳು ಯಾವ ಶಾಲೆಗೆ ಎಷ್ಟು ಗಂಟೆಗೆ ಭೇಟಿ ನೀಡಿದ್ದಾರೆ, ತಿಂಗಳಲ್ಲಿ ಎಷ್ಟು ಶಾಲೆಗಳಿಗೆ ಭೇಟಿ ನೀಡಿದ್ದಾರೆ ಮುಂತಾದ ಎಲ್ಲ ವಿಷಯಗಳ ಬಗ್ಗೆ ವಿವರವಾದ ಮಾಹಿತಿಗಳು ಮತ್ತು ದತ್ತಾಂಶಗಳು ನಿಖರವಾಗಿ ಲಭ್ಯವಾಗಲಿದೆ.