Advertisement

ಗುಡಿ ಕೈಗಾರಿಕೆಗಳಿಂದ ಗ್ರಾಮಾಭಿವೃದ್ಧಿ

04:17 PM Feb 14, 2020 | Naveen |

ಶಿಕಾರಿಪುರ: ಗಾಂಧಿಧೀಜಿ ಕನಸಿನಂತೆ ಗ್ರಾಮೀಣ ಪ್ರದೇಶದಲ್ಲಿ ಅತೀ ಸಣ್ಣ ಮತ್ತು ಗುಡಿ ಕೈಗಾರಿಕೆಗಳನ್ನು ಸ್ಥಾಪಿಸಿದರೆ ಅವು ಗ್ರಾಮಗಳ ಆತ್ಮ ಮತ್ತು ಜೀವಾಳವಾಗಿ ಹೊರಹೊಮ್ಮುತ್ತವೆ ಎಂದು ಸಿಂಡಿಕೇಟ್‌ ಬ್ಯಾಂಕ್‌ ಪ್ರಬಂಧಕ ಶಿವಶಂಕರ ಹೇಳಿದರು.

Advertisement

ತಾಲೂಕಿನ ಅಂಬಾರಗೊಪ್ಪ ಗ್ರಾಮದಲ್ಲಿ ಜ್ಞಾನಜ್ಯೋತಿ ಆರ್ಥಿಕ ಸಾಕ್ಷರತಾ ಕೇಂದ್ರ ಮತ್ತು ಸಿಂಡಿಕೇಟ್‌ ಬ್ಯಾಂಕ್‌ ಇವರ ಸಂಯುಕ್ತಾಶ್ರಯದಲ್ಲಿ ನಡೆದ ಆರ್ಥಿಕ ಸಾಕ್ಷರತಾ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪ್ರಸ್ತುತ ದಿನದಲ್ಲಿ ಗ್ರಾಮೀಣ ಭಾಗದಿಂದ ನಗರಗಳಿಗೆ ಹೋದ ಯುವಕರು ಮರಳಿ ಗ್ರಾಮಕ್ಕೆ ಬರುತ್ತಿದ್ದಾರೆ. ಹಾಗಾಗಿ ಅವರ ಅನುಭವ ಕೌಶಲ್ಯವನ್ನು ಬಳಸಿಕೊಂಡು ಅತೀ ಸಣ್ಣ ಮತ್ತು ಸಣ್ಣ ಗುಡಿ ಕೈಗಾರಿಕೆ ಸ್ಥಾಪಿಸಿದರೆ ಅವರಿಗೆ ಉದ್ಯಮದ ಅನುಭವ ಬರುತ್ತದೆ. ಜೊತೆಗೆ ಜನರಿಗೆ ಕೆಲಸ ನೀಡಿದರೆ ಗ್ರಾಮೀಣ ಭಾಗದ ಜನರು ಆರ್ಥಿಕವಾಗಿ ಮುಂದೆ ಬರಲು ಸಾಧ್ಯವಿದೆ. ಬ್ಯಾಂಕು ಕೂಡ ಅಂತವರಿಗೆ ಸಾಲ ಸೌಲಭ್ಯ ನೀಡಿ ಪ್ರೋತ್ಸಾಹಿಸುತ್ತದೆ. ರೈತರು, ಮಹಿಳೆಯರು ಕೂಡ ಈ ರೀತಿಯ ಕೈಗಾರಿಕೆಗಳನ್ನು ಸ್ಥಾಪಿಸಬಹುದು ಎಂದರು.

ನಬಾರ್ಡ್‌ ವಿಭಾಗೀಯ ಪ್ರಬಂಧಕ ಬಿ. ರವಿ ಮಾತನಾಡಿ, ಈ ಗ್ರಾಮದಲ್ಲಿ ರೈತರು ಬಹುದೊಡ್ಡ ಸಂಖ್ಯೆಯಲ್ಲಿದ್ದು ರೈತರ ಉತ್ಪಾದಕ ಗುಂಪು ರಚನೆ ಮಾಡಿದರೆ ನೀವು 500 ಜನ 1000 ರೂಪಾಯಿ ಠೇವಣಿ ಇಟ್ಟರೆ ನಬಾರ್ಡ್‌ ಕೂಡ ಪ್ರತಿಯೊಬ್ಬರಿಗೂ 1000 ರೂಪಾಯಿ ಕೊಡುತ್ತದೆ. ತೆರೆದ ಮಾರುಕಟ್ಟೆಯನ್ನು ಮಾಡಿದರೆ ಕೊಂಡುಕೊಳ್ಳುವ ಕಂಪನಿಯವರು ನಿಮ್ಮನ್ನು ಹುಡುಕಿಕೊಂಡು ಬರುತ್ತಾರೆ, ಆಗ ಮಧ್ಯವರ್ತಿಗಳು ಇಲ್ಲದಿದ್ದರೆ ನಿಮಗೆ ನಿಗದಿತ ಬೆಲೆ ಸಿಗುತ್ತದೆ. ಗೊಬ್ಬರ ಮತ್ತು ಔಷಧ ಸಂಗ್ರಹಿಸಲು ಹಾಗೂ ಬೆಳೆದ ಧ್ಯಾನವನ್ನು ಸಂಗ್ರಹಿಸಿಲು ಗೋದಾಮು ಕಟ್ಟಲು ನಬಾರ್ಡ್‌ನಿಂದ ಸಹಾಯಧನವಿದೆ. ಅರ್ಧ ಮಾಡಿ ಬಿಟ್ಟಿರುವ ಸರಕಾರಿ ಕಾಮಗಾರಿಗಳಿಗೆ ನಬಾರ್ಡ್‌ನಿಂದ ಸಹಾಯಧನವಿದೆ. ಇದನ್ನು ಬಳಕೆ ಮಾಡುವ ಮನಸ್ಸು ರೈತರಲ್ಲಿ ಬಂದು ಸ್ವಯಂ ಪ್ರೇರಣೆಯಿಂದ ರೈತ ಉತ್ಪಾದಕ ಗುಂಪು ಮತ್ತು ಜಂಟಿ ಬಾಧ್ಯತಾ ಗುಂಪು ರಚಿಸಿದರೆ ರೈತರಿಗೆ ಲಾಭವಿದೆ ಎಂದು ತಿಳಿಸಿದರು.

ಜ್ಞಾನಜ್ಯೋತಿ ಆರ್ಥಿಕ ಸಾಕ್ಷರತಾ ಕೇಂದ್ರದ ಮುಖ್ಯ ಸಮಾಲೋಚಕ ಗುಡದಯ್ಯ ಉಡುಗಣಿ ಆರ್ಥಿಕ ಸಾಕ್ಷರತೆಯ ಬಗ್ಗೆ ಮಾತನಾಡಿ, ಬೆಳಗ್ಗೆಯಿಂದ ಸಂಜೆಯವಗೆ ಹುಟ್ಟಿನಿಂದ ಸಾಯುವವರೆಗೆ ಹಣ ತುಂಬಾ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ದೊಡ್ಡ ಕಾಯಿಲೆ ಹಾಗೂ ಅಪಘಾತವಾದರೂ ಕೂಡ ಬದುಕಲು ಹವಣಿಸುವ ಮನುಷ್ಯ ಸಾಲಗಾರನಾದರೆ ಯಾರಿಗೂ ಹೇಳದೆ ಆತ್ಮಹತ್ಯೆಗೆ ಶರಣಾಗುತ್ತಾನೆ. ಹಾಗಾಗಿ ಜನರಿಗೆ ಆರ್ಥಿಕ ಸಾಕ್ಷರತೆಯ ಅರಿವು ತುಂಬಾ ಪ್ರಮುಖವಾಗಿದೆ ಎಂದರು.

ಶಿಕಾರಿಪುರ ಸಿಂಡಿಕೇಟ್‌ ಬ್ಯಾಂಕಿನ ಪ್ರಬಂಧಕ ಮುರಳಿ ಮೋಹನ್‌, ಕ್ಷೇತ್ರಿಯ ಕಚೇರಿಯ ಕೃಷಿ ಪ್ರಬಂಧಕ ರವಿ, ಗ್ರಾಮದ ಮುಖಂಡರಾದ ಶೇಖರಪ್ಪ, ಮಲ್ಲೇಶಪ್ಪ, ನಾಗಪ್ಪ, ಆರ್‌ಡಿಒ ರತ್ನ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next