Advertisement

6 ಕೋಟಿ ಸದಸ್ಯತ್ವದ ಗುರಿ: ಬಿವೈಆರ್‌

12:28 PM Jul 08, 2019 | Team Udayavani |

ಶಿಕಾರಿಪುರ: ಬಿಜೆಪಿ ವಿಶ್ವದಲ್ಲೇ ಅತೀ ಹೆಚ್ಚು ಸದಸ್ಯರನ್ನು ಹೊಂದಿರುವ ರಾಜಕೀಯ ಪಕ್ಷವಾಗಿದೆ. ಈಗ ಹನ್ನೊಂದು ಕೋಟಿ ಸದಸ್ಯತ್ವವಾಗಿದೆ . ಈ ವರ್ಷ ಆರು ಕೋಟಿ ಸದಸ್ಯತ್ವ ಮಾಡುವ ಗುರಿಯನ್ನು ಪಕ್ಷ ಹೊಂದಿದೆ. ನಾವು ಕೂಡ ತಾಲೂಕಿನಲ್ಲಿ ಇಡಿ ಜಿಲ್ಲೆಯಲ್ಲಿಯೇ ಅತೀ ಹೆಚ್ಚು ಸದಸ್ಯತ್ವ ಮಾಡಿ ದಾಖಲೆ ಮಾಡಬೇಕು. ಸದಸ್ಯರ ಬಲವೇ ಪಕ್ಷಕ್ಕೆ ಭೀಮಬಲ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.

Advertisement

ಪಟ್ಟಣದ ಮಂಗಳ ಭವನದಲ್ಲಿ ತಾಲೂಕು ಬಿಜೆಪಿ ವತಿಯಿಂದ ಹಮ್ಮಿಕೊಂಡಿದ್ದ ಸಂಘಟನ ಪರ್ವ ಸದಸ್ಯತ್ವ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಾವು ಬುದ್ಧಿಜೀವಿಗಳಿಂದ ಹಿಡಿದು ಶ್ರೀ ಸಾಮಾನ್ಯರವರೆಗೆ ಸದಸ್ಯತ್ವ ಮಾಡಬೇಕು. ಒಬ್ಬ ಕೂಲಿ ಕಾರ್ಮಿಕನಿಂದ ಹಿಡಿದು ದೊಡ್ಡ ದೊಡ್ಡ ಹುದ್ದೆಯಲ್ಲಿರುವ ಡಾಕ್ಟರ್‌, ಇಂಜಿನಿಯರ್‌ಗಳು ಮುಂತಾದವರನ್ನು ಸಂಪರ್ಕಿಸಿ ಸದಸ್ಯತ್ವ ಮಾಡಬೇಕು. ನಮಗೆ ಪಕ್ಷ ನೀಡಿದ ಅದೇಶದಂತೆ ಸದಸ್ಯತ್ವದ ಅಭಿಯಾನದಲ್ಲಿ ಪಾಲ್ಗೊಂಡು ಸಂಘಟನೆಗೆ ಮುಂದಾಗಬೇಕು ಎಂದರು.

ಸ್ವಾತಂತ್ರ್ಯ ಬಂದು 74 ವರ್ಷಗಳಾಗಿವೆ. ನೂರು ವರ್ಷ ಕಳೆದರೂ ಬಿಜೆಪಿಯೇ ಅಧಿಕಾರದಲ್ಲಿರುತ್ತದೆ. ಇಂದಿರಾ ಗಾಂಧಿ ಹತ್ಯೆಯಾದ ಸಂದರ್ಭದಲ್ಲಿ ಕಾಂಗ್ರೆಸ್‌ಗೆ ಶೇ. 63 ರಷ್ಟು ಮತಗಳು ಬಂದಿದ್ದವು. ಅದಾದ ನಂತರ ಇದೇ ಮೊದಲ ಬಾರಿಗೆ ಮೋದಿಯವರಿಗೆ ಜನ ಆಶೀರ್ವಾದ ಮಾಡಿದ್ದು ಶೇ. 62 ರಷ್ಟು ಮತಗಳು ಬಂದಿವೆ. ಈ ಸಲದ ಚುನಾವಣೆಯ ವಿಶೇಷ ಎಂದರೆ ಪುರುಷರಿಗೆ ಸರಿಸಮಾನರಾಗಿ ಮಹಿಳೆಯರು ಮತ ನೀಡಿದ್ದಾರೆ. ಪರಿಶಿಷ್ಟ ಜಾತಿ ಮೀಸಲಾತಿಯಿಂದ ಗೆದ್ದು ಬಂದ 84 ಲೋಕಸಭಾ ಸದಸ್ಯರಲ್ಲಿ 46 ಬಿಜೆಪಿ ಸದಸ್ಯರು ಗೆದ್ದಿದ್ದಾರೆ. ಎಸ್‌ಟಿ ಮೀಸಲಾತಿಯಲ್ಲಿ ಗೆದ್ದ 70 ಸ್ಥಾನಗಳಲ್ಲಿ ಬಿಜೆಪಿಯ 33 ಸಂಸದರು ಗೆದ್ದಿದ್ದಾರೆ. ಮತ್ತೂಂದು ವಿಶೇಷವೆಂದರೆ ಶೇ. 50ಕ್ಕಿಂತಲೂ ಹೆಚ್ಚು ಮತ ಪಡೆದು 220 ಸಂಸದರು ಗೆದ್ದಿರುವುದು ಗಮನಾರ್ಹ ಎಂದರು.

ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಮಂಡಿಸಿದ ಬಜೆಟ್ ಆಶಾದಾಯಕವಾಗಿದೆ. ಈ ಬಜೆಟ್‌ನಲ್ಲಿ ಮೋದಿಯವರ ದೂರದೃಷ್ಟಿ ಎದ್ದು ಕಾಣುತ್ತಿದೆ. ಅತ್ಯಂತ ಹಿಂದುಳಿದವರು, ಕೃಷಿಕರು , ಕೂಲಿ ಕಾರ್ಮಿಕರು ಮಧ್ಯಮ ವರ್ಗದವರನ್ನೇ ದೃಷ್ಟಿಯಲ್ಲಿಟ್ಟುಕೊಂಡು ಬಜೆಟ್ ತಯಾರಿಸಲಾಗಿದೆ. ಶ್ರೀಸಾಮಾನ್ಯರಿಗೆ ಹೊರೆಯಾಗದ ಈ ಬಜೆಟ್ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ. ಮಧ್ಯಮ ವರ್ಗದವರ ನಿರೀಕ್ಷೆಗೆ ಮೋದಿ ಸ್ಪಂದಿಸಿದ್ದಾರೆ ಎಂದರು.

ತಾಲೂಕು ಬಿಜೆಪಿ ಅಧ್ಯಕ್ಷ ಕೊಳಗಿ ರೇವಣಪ್ಪ ಮಾತನಾಡಿ, ಮೋದಿ ಅವರು ಪ್ರಧಾನಿಯಾದ ಮೇಲೆ ಬಿಜೆಪಿ ದಿನದಿಂದ ದಿನಕ್ಕೆ ಸದೃಢವಾಗುತ್ತಿದೆ. ಪಕ್ಷದ ಆಸ್ತಿ ಎಂದರೆ ಸಾಮಾನ್ಯ ಕಾರ್ಯಕರ್ತರು ಎಂದರು.

Advertisement

ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಎಸ್‌. ಗುರುಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸದಸ್ಯತ್ವದ ಅಭಿಯಾನದ ಬಗ್ಗೆ ಸಿದ್ದಲಿಂಗಪ್ಪ ನಿಂಬೆಗೊಂದಿ ಮಾಹಿತಿ ನೀಡಿದರು.

ಡಿಸಿಸಿ ಬ್ಯಾಂಕ್‌ ಉಪಾಧ್ಯಕ್ಷ ಎಂ.ಬಿ. ಚನ್ನವೀರಪ್ಪ, ಮುಖಂಡರಾದ ಅಗಡಿ ಅಶೋಕ, ಬಿ.ಡಿ. ಭೂಕಾಂತ್‌, ಟಿ. ರಾಮಾನಾಯ್ಕ, ಭದ್ರಾಪುರ ಹಾಲಪ್ಪ, ಸಣ್ಣಹನುಮಂತಪ್ಪ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next