Advertisement

ಮತ್ತೊಮ್ಮೆ ಟವರ್‌ ಏರಿ ಪ್ರತಿಭಟಿಸಿದ ಶಿಗ್ಲಿ ಬಸ್ಯಾ !

12:29 PM Oct 25, 2017 | |

ಹಾವೇರಿ: ಟವರ್‌ ಏರಿ ಪ್ರತಿಭಟಿಸುವ ಖಯಾಲಿ ಹೊಂದಿರುವ ಶಿಗ್ಲಿ ಬಸ್ಯಾ ಬುಧವಾರ ಮತ್ತೊಮ್ಮೆ  ಟವರ್‌ ಏರಿ ಪ್ರತಿಭಟನೆ ನಡೆಸಿ ಸುದ್ದಿಯಾಗಿದ್ದಾನೆ. 

Advertisement

2011 ರಲ್ಲಿ ನಗರದ ನ್ಯಾಯಾಲಯದ ಆವರಣದಲ್ಲಿ ವಕೀಲರೊಬ್ಬರ ಕೈ ಕಚ್ಚಿದ ಪ್ರಕರಣದಲ್ಲಿ ನನಗೆ ತುಂಬಾ ಅನ್ಯಾಯ ಆಗಿದೆ. ಆ ಪ್ರಕರಣವನ್ನು ನಾಲ್ಕು ಗೋಡೆಗಳ ನಡುವೆ ಇತ್ಯರ್ಥ ಮಾಡುವುದು ಬೇಡ,ಬಹಿರಂಗ ಚರ್ಚೆ ನಡೆಸಬೇಕು ಎಂದು ಆಗ್ರಹಿಸಿ ಪ್ರತಿಭಟನೆಗಿಳಿದಿದ್ದ. 

ಸುಮಾರು 1 ಗಂಟೆಗಳ ಕಾಲ ಟವರ್‌ನಿಂದ ಕೆಳಗಿಳಿಯದೇ ಹಠಕ್ಕೆ ಬಿದ್ದಿದ್ದ ಬಸ್ಯಾನನ್ನು ಪೊಲೀಸರು ಸ್ಥಳಕ್ಕಾಗಮಿಸಿ ಮನವೊಲಿಸಿ ಕೆಳಗಿಳಿಯುವಂತೆ ಮಾಡಿ ಠಾಣೆಗೆ ಕರೆದೊಯ್ದಿದ್ದಾರೆ. 

ಹಲವೆಡೆ ಕಳ್ಳತನ ನಡೆಸಿದ ಆರೋಪಗಳು ಬಸ್ಯಾನ ಮೇಲಿದ್ದು, ಅನೇಕ ಬಾರಿ ಧ್ವಜ ಹೀಡಿದು ವಿಭಿನ್ನವಾಗಿ ಪ್ರತಿಭಟಿಸುವುದೇ ಈತನ ಕಾಯಕ. 

Advertisement

Udayavani is now on Telegram. Click here to join our channel and stay updated with the latest news.

Next