Advertisement

ಶಿಡ್ಲಘಟ್ಟ: ಭೂಮಿ ಕಂಪನದ ಅನುಭವ, ನಡುಗಿದ ಜನರು

10:00 PM Jun 16, 2022 | Team Udayavani |

ಶಿಡ್ಲಘಟ್ಟ: ತಾಲೂಕಿನ ದಿಬ್ಬೂರಹಳ್ಳಿಯಲ್ಲಿ ಗುರುವಾರ ರಾತ್ರಿ ಸರಿ ಸುಮಾರು 7-55 ನಿಮಿಷದ ವೇಳೆ ಭೂಮಿ ಕಂಪಿಸುವುದರ ಜೊತೆಗೆ ಜೋರಾಗಿ ಶಬ್ದ ಕೇಳಿಸಿದ್ದರಿಂದ ಜನರು ಭಯಭೀತರಾಗಿ ಮನೆಗಳಿಂದ ಹೊರಗೆ ಬಂದಿರುವ ಘಟನೆ ನಡೆದಿದೆ.

Advertisement

ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ದಿಬ್ಬೂರಹಳ್ಳಿ ಭಾಗದಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿದ್ದು ಬಹುಶಃ ನೀರು ಅಂರ್ತಜಲ ಮಟ್ಟಕ್ಕೆ ಶೇಖರಣೆಯಾಗಿದ್ದರಿಂದ ಜೋರಾಗಿ ಶಬ್ದ ಕೇಳಿರಬಹುದು ಎಂದು ಅಧಿಕಾರಿಗಳು ಸಂದೇಹ ವ್ಯಕ್ತಪಡಿಸಿದ್ದಾರೆ ಆದರೂ ಸಹ ಶುಕ್ರವಾರದಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಜಂಟಿ ಸಮೀಕ್ಷೆ ಕಾರ್ಯ ನಡೆಸಲಿದ್ದಾರೆ ಎಂದು ತಹಶೀಲ್ದಾರ್ ಬಿ.ಎಸ್.ರಾಜೀವ್ ಸ್ಪಷ್ಟಪಡಿಸಿದ್ದು, ಗ್ರಾಮಸ್ಥರು ಆತಂಕಗೊಳ್ಳುವ ಅಗತ್ಯವಿಲ್ಲ ಎಂದು ಧೈರ್ಯ ತುಂಬಿದ್ದಾರೆ.

ಕೆಳಗೆ ಬಿದ್ದ ಮನೆಯಲ್ಲಿದ್ದ ಪಾತ್ರೆಗಳು

ದಿಬ್ಬೂರಹಳ್ಳಿ ಸುತ್ತಮುತ್ತಲಿನ ಪ್ರದೇಶದಲ್ಲಿ ಭಾರಿ ಶಬ್ದ ಎರಡು ಬಾರಿ ಕೇಳಿಸಿದರಲ್ಲದೆ ಸ್ವಲ್ಪಮಟ್ಟಿಗೆ ಭೂ ಕಂಪನದ ಅನುಭವವಾಗಿದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿ ಭಯಭೀತರಾಗಿ ಮನೆಯಿಂದ ಹೊರಬಂದಿದ್ದಾರೆ. ಅನೇಕರು ಈ ವಿಚಾರದಲ್ಲಿ ಪರಸ್ಪರ ಚರ್ಚೆ ಮಾಡಿಕೊಂಡು ಭಾರಿ ಶಬ್ದ ಕೇಳಿ ಭೂ ನಡುಗಿರುವುದನ್ನು ಖಾತ್ರಿ ಮಾಡಿಕೊಂಡಿದ್ದಾರೆ. ಈ ಸಂಬಂಧ ಮಾಧ್ಯಮವರು ಅಪರ ಜಿಲ್ಲಾಧಿಕಾರಿ ಹೆಚ್.ಅರಮೇಶ್, ತಾಲೂಕು ದಂಡಾಧಿಕಾರಿ ಬಿ.ಎಸ್.ರಾಜೀವ್ ಮತ್ತು ಗಣಿ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿ ಗ್ರಾಮಸ್ಥರ ಆತಂಕವನ್ನು ದೂರ ಮಾಡಬೇಕೆಂದು ಮನವಿ ಮಾಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next