Advertisement

ಶಿಡ್ಲಘಟ್ಟ: ಸೀಕಲ್ ರಾಮಚಂದ್ರ ಗೌಡ ಪರ ಜೆಪಿ ನಡ್ಡಾ ಪ್ರಚಾರ

10:49 PM Apr 24, 2023 | Team Udayavani |

ಶಿಡ್ಲಘಟ್ಟ: ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದಲ್ಲಿ ಮಾತ್ರ ಕರ್ನಾಟಕದ ಅಭಿವೃಧ್ಧಿಯಾಗಿದ್ದು ಹೀಗಾಗಿ ಮತ್ತೊಮ್ಮೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನೇತೃತ್ವದ ಡಬಲ್ ಎಂಜಿನ್ ಸರ್ಕಾರವನ್ನು ಡಬಲ್ ವೇಗದಿಂದ ಅಧಿಕಾರಕ್ಕೆ ತರಲು ಬಿಜೆಪಿಯನ್ನು ಬೆಂಬಲಿಸಬೇಕೆಂದು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಕರೆ ನೀಡಿದರು.

Advertisement

ನಗರದಲ್ಲಿ ಬಿಜೆಪಿ ಅಭ್ಯರ್ಥಿ ಸೀಕಲ್ ರಾಮಚಂದ್ರಗೌಡ ಅವರ ಪರವಾಗಿ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿ ರೋಡ್‍ಶೋ ನಡೆಸಿ ನಂತರ ಮಾತನಾಡಿದ ಅವರು ಈ ಚುನಾವಣೆ ಕರ್ನಾಟಕದ ಅಭಿವೃದ್ಧಿಯ ವೇಗವನ್ನು ನಿರ್ಣಯಿಸುವ ಚುನಾವಣೆ ಆಗಿದೆ ಡಬಲ್ ಎಂಜಿನ್ ಸರ್ಕಾರವನ್ನ ಮತ್ತಷ್ಟು ಡಬಲ್ ಸ್ಪೀಡ್‍ನಲ್ಲಿ ಮತ್ತೆ ಚಲಾಯಿಸಬೇಕಾದ ಅನಿವಾರ್ಯತೆ ಇದೆ ಬಿಜೆಪಿಯನ್ನು ಬೆಂಬಲಿಸಿ ಅಭಿವೃದ್ದಿಯ ವೇಗವನ್ನು ಹೆಚ್ಚಿಸಬೇಕೆಂದು ಮನವಿ ಮಾಡಿದರು.

ಕೇಂದ್ರದಲ್ಲಿ ಮೋದಿ ಸರ್ಕಾರ ಇದ್ದಾಗ ಎಲ್ಲಾ ಬಾರಿ ಕರ್ನಾಟಕದ ಅಭಿವೃದ್ಧಿ ಹೆಚ್ಚಾಗಿದೆ ಹಾಗಾಗಿ ಡಬಲ್ ಇಂಜಿನ್ ಸರ್ಕಾರದ ಅವಶ್ಯಕತೆ ಇದೆ ಕರ್ನಾಟದ ರಾಜ್ಯ ಅಭಿವೃಧ್ಧಿಯಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸರ್ಕಾರ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದೆ ರಾಜ್ಯದ ಅಭಿವೃಧ್ಧಿ ವಿಷಯದಲ್ಲಿ ಇಬ್ಬರು ನಾಯಕರ ಪಾತ್ರ ಪ್ರಮುಖವಾಗಿದೆ ಎಂದರು.

ರಾಜ್ಯದಲ್ಲಿ ಕುಮಾರಸ್ವಾಮಿ ಅವರೊಂದಿಗೆ ರಚಿಸಲಾಗಿದ್ದ ಸಮಿಶ್ರ ಸರ್ಕಾರ ಕೇಂದ್ರ ಸರ್ಕಾರದ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಸಹಕಾರ ನೀಡಿಲ್ಲ ಜನರ ಆರೋಗ್ಯಕ್ಕಾಗಿ ಜಾರಿಯಲ್ಲಿದ್ದ ಯಶಸ್ವಿನಿ ಯೋಜನೆಯನ್ನು ರದ್ದುಗೊಳಿಸಲಾಗಿತ್ತು ಆದರೇ ನಮ್ಮ ಬಿಜೆಪಿ ಸರ್ಕಾರ ಜನರ ಆರೋಗ್ಯದ ದೃಷ್ಠಿಯಿಂದ ಯಶಸ್ವಿನಿ ಯೋಜನೆಯನ್ನು ಮತ್ತೊಮ್ಮೆ ಜಾರಿಗೊಳಿಸಲಾಗಿದೆ ಅದೇ ಮಾಜಿ ಸಿಎಂ ಸಿದ್ದರಾಮಯ್ಯ ಸಹ ಮೋದಿ ಸರ್ಕಾರದ ಯೋಜನೆಗಳನ್ನು ಮರೆಮಾಚುವ ಕೆಲಸವನ್ನು ಮಾಡಿದರು ಎರಡು ಪಕ್ಷಗಳು ಕರ್ನಾಟದ ಅಭಿವೃಧ್ಧಿ ವಿರೋಧಿ ಪಕ್ಷಗಳಾಗಿವೆ ಎರಡು ಪಕ್ಷಗಳನ್ನು ತಿರಸ್ಕರಿಸಿ ಅಭಿವೃದ್ಧಿಗಾಗಿ ಕೇಂದ್ರದಲ್ಲಿ ಮೋದಿ ಹಾಗೂ ರಾಜ್ಯದಲ್ಲಿ ಬೊಮ್ಮಾಯಿ ಸರ್ಕಾರವನ್ನು ಮತ್ತೆ ಅಧಿಕಾರಿಕ್ಕೆ ತನ್ನಿ ಎಂದು ಮನವಿ ಮಾಡಿದರು.

ಪಿಎಫ್‍ಐ ಮೇಲೆ ಕಾಂಗ್ರೆಸ್‍ಗೆ ಪ್ರೀತಿ
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಕಾರ್ಯಕರ್ತರು ದೇಶಕ್ಕೆ ತೊಂದರೆ ಕೊಡುವ ಕೆಲಸ ಮಾಡುತ್ತಿದ್ದರು ಜನಸಾಮಾನ್ಯರ ಪ್ರಾಣ ಮತ್ತು ಆಸ್ತಿಗೆ ಅಪಾಯವನ್ನು ತಂದಿಟ್ಟಿದ್ದರು ಕಾಂಗ್ರೆಸ್ ಪಕ್ಷದ ನಾಯಕರು ಈ ಸಂಘಟನೆಯನ್ನು ಬೆಂಬಲಿಸುತ್ತಿದ್ದರು ಆದರೆ ಬಿಜೆಪಿ ಎಲ್ಲಾ ಪುರಾವೆಗಳನ್ನು ಆಧರಿಸಿಕೊಂಡು ಪಿಎಫ್‍ಐ ಸಂಘಟನೆಯನ್ನು ರಾಷ್ಟ್ರವಿರೋಧಿ ಸಂಘಟನೆ ಎಂದು ಘೋಷಿಸಿ ಕೇಂದ್ರ ಸರ್ಕಾರ ನಿಷೇಧ ಹೇರಿದೆ ಆದರೇ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಸರ್ಕಾರ ಪಿಎಫ್‍ಐ ಸಂಘಟನೆಯ ಮೇಲೆ ದಾಖಲಾಗಿದ್ದ 170 ಪ್ರಕರಣಗಳನ್ನು ರದ್ದುಗೊಳಿಸಿದೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೇ ಪಿಎಫ್‍ಐ ಸಂಘಟನೆ ಮೇಲೆ ಹೇರಿದ್ದ ನಿಷೇಧವನ್ನು ವಾಪಸ್ಸು ಪಡೆದುಕೊಳ್ಳುತ್ತಾರೆ ಜನರ ನೆಮ್ಮದಿಯನ್ನು ಭಂಗ ಮಾಡುವ ಸಂಘಟನೆಯನ್ನು ಬೆಂಬಲಿಸುವ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ನೀಡಬೇಕಾ? ಎಂಬುದನ್ನು ಆಲೋಚನೆ ಮಾಡಿ ಅಭಿವೃಧ್ಧಿಗಾಗಿ ಬಿಜೆಪಿಯನ್ನು ಬೆಂಬಲಿಸಬೇಕೆಂದು ಕರೆ ನೀಡಿದರು.

Advertisement

ಕಾಂಗ್ರೆಸ್ ಅಧಿಕಾರಕ್ಕೆ ಬಂದರೇ ಒಕ್ಕಲಿಗರ-ಲಿಂಗಾಯತರ ಮೀಸಲಾತಿ ರದ್ದು
ಸಮಾಜದಲ್ಲಿರುವ ಎಲ್ಲಾ ವರ್ಗಗಳ ಕಲ್ಯಾಣದ ದೃಷ್ಠಿಕೋನದಿಂದ ರಾಜ್ಯ ಬಿಜೆಪಿ ಸರ್ಕಾರವೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ, ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯಗಳ ಮೀಸಲಾತಿ ಹೆಚ್ಚಳ ಮಾಡಿದೆ ಆದರೆ ಡಿ ಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅಧಿಕಾರಕ್ಕೆಬಂದ್ರೆ ಮೀಸಲಾತಿ ವಾಪಾಸ್ ಪಡಿತಿವೆ ಅಂತಾರೆ ಇಂತಹವರು ಅಧಿಕಾರಕ್ಕೆ ಬರಬೇಕಾ? ತಾವು ಆಲೋಚಿಸಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಅಭಿವೃಧ್ಧಿ ವಿರೋಧಿ ಪಕ್ಷಗಳಾಗಿದ್ದು ಎರಡು ಪಕ್ಷಗಳಿಗೆ ತಿರಸ್ಕರಿಸಿ ಬಿಜೆಪಿಯನ್ನು ಬೆಂಬಲಿಸಬೇಕೆಂದರು.

ಸೀಕಲ್ ರಾಮಚಂದ್ರಗೌಡಗೆ ವಿಧಾನಸೌಧಕ್ಕೆ ಕಳುಹಿಸಿ
ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರವನ್ನು ಮಾದರಿ ಮಾಡಲು ಸಂಕಲ್ಪ ಮಾಡಿರುವ ಬಿಜೆಪಿ ಅಭ್ಯರ್ಥಿ ಸೀಕಲ್ ರಾಮಚಂದ್ರಗೌಡ ಹಾಗೂ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರನ್ನು ಮತ್ತೊಮ್ಮೆ ಗೆಲ್ಲಿಸಿ ವಿಧಾನಸೌಧಕ್ಕೆ ಕಳುಹಿಸಬೇಕೆಂದು ಮನವಿ ಮಾಡಿದರು ತಮ್ಮ ಶಿಳ್ಳೆ ಮತ್ತು ಚಪ್ಪಾಳೆಗಳನ್ನು ನೋಡುತ್ತಿದ್ದರೇ ಸೀಕಲ್ ರಾಮಚಂದ್ರಗೌಡ ಅವರನ್ನು ಶತಾಯಗತಾಯ ಶಾಸಕರನ್ನು ಮಾಡಲು ಸಂಕಲ್ಪ ಮಾಡಿದ್ದೀರಿ ಎಂದು ಕಾಣುತ್ತದೆ ಎಂದ ರಾಷ್ಟ್ರೀಯ ಅಧ್ಯಕ್ಷರು ಈ ಚುನಾವಣೆ ಸಚಿವ ಡಾ.ಕೆ.ಸುಧಾಕರ್., ನಳಿನ್ ಕುಮಾರ್ ಕಟೀಲ್ ಮತ್ತು ರಾಮಚಂದ್ರಗೌಡ ಅವರ ಚುನಾವಣೆ ಅಲ್ಲ, ಕರ್ನಾಟಕವನ್ನು ಅಭಿವೃಧ್ಧಿಯ ದೀರ್ಘ ಜಿಗಿತವನ್ನು ತೆಗೆದುಕೊಳ್ಳಲು ನಿರ್ಧಾರವನ್ನು ತೆಗೆದುಕೊಳ್ಳುವ ಚುನಾವಣೆ ಆಗಲಿದೆ ಸಮಯದ ಅವಶ್ಯಕತಾ ಇದೇ ಕರ್ನಾಟಕದಲ್ಲಿ ಡಬಲ್ ಇಂಜಿನ್ ಸರ್ಕಾರವನ್ನು ರಚಿಸಲು ಸಂಕಲ್ಪ ಮಾಡಬೇಕೆಂದರು.

ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್‍ಸಿಂಗ್, ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಂಸದ ಎಸ್.ಮುನಿಸ್ವಾಮಿ, ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ಮಾಜಿ ಶಾಸಕ ಎಂ.ರಾಜಣ್ಣ, ಬಿಜೆಪಿ ಅಭ್ಯರ್ಥಿ ಸೀಕಲ್ ರಾಮಚಂದ್ರಗೌಡ, ಜಿಲ್ಲಾ ಬಿಜೆಪಿ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿ ರಂಜೀತ್ ಕುಮಾರ್,ಯುವ ಮುಖಂಡ ಸೀಕಲ್ ರಾಮಚಂದ್ರಗೌಡ, ರಮೇಶ್ ಬಾಯಿರಿ, ಸುರೇಂದ್ರಗೌಡ, ಆಂಜಿನೇಯಗೌಡ, ನಂದೀಶ್, ಸ್ಕೂಲ್ ದೇವರಾಜ್, ನರ್ಮದಾ ರೆಡ್ಡಿ, ದೇವರಾಜ್ ಮತ್ತಿತರರು ಉಪಸ್ಥಿತರಿದ್ದರು.

ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ಹೆಲಿಕಾಪ್ಟರ್ ಮೂಲಕ ಆಗಮಿಸಿದರು ಇಲ್ಲಿನ ನೆಹರು ಕ್ರೀಡಾಂಗಣದಲ್ಲಿ ಸಿದ್ದಪಡಿಸಿದ ಹೆಲಿಪ್ಯಾಡ್‍ನಲ್ಲಿ ಬಂದುಳಿದ ಅವರನ್ನು ಬಿಜೆಪಿ ಅಭ್ಯರ್ಥಿ ಸೀಕಲ್ ರಾಮಚಂದ್ರಗೌಡ, ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಮತ್ತಿತರರು ಸ್ವಾಗತಿಸಿದರು ನಂತರ ಕಾರು ಮೂಲಕ ಬಿಜೆಪಿಯ ಸೇವಾ ಸೌಧ ಕಚೇರಿಗೆ ಕರೆದುಕೊಂಡು ಹೋದರು ಅಲ್ಲಿಂದ ತೆರೆದ ವಾಹನದಲ್ಲಿ ಬಿಜೆಪಿ ಅಭ್ಯರ್ಥಿ ಸೀಕಲ್ ರಾಮಚಂದ್ರಗೌಡ ಅವರ ಪರವಾಗಿ ರೋಡ್‍ಶೋ ನಡೆಸಿ ಮತಯಾಚಿಸಿದರು ದಾರಿಯುದ್ದಕ್ಕೂ ಜನಸಾಗರವೇ ಹರಿದು ಬಂದಿತ್ತು ಇಡೀ ನಗರವನ್ನು ಕೇಸರಿ ಬಣ್ಣದ ಬಂಟಿಂಗ್ ಮತ್ತು ಬ್ಯಾನರ್ಸ್‍ಗಳಿಂದ ಶೃಂಗರಿಸಿಲಾಗಿತ್ತು ಬಿಜೆಪಿಯ ಅಧ್ಯಕ್ಷರಿಗೆ ಪೂರ್ಣಕುಂಭದಿಂದ ಅದ್ದೂರಿಯಾಗಿ ಸ್ವಾಗತಿಸಲಾಯಿತು.

ಶಿಡ್ಲಘಟ್ಟದಲ್ಲಿ ಅಂತಿಮವಾಗಿ 14 ಜನ ಕಣದಲ್ಲಿ

ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ ಉಮೇದುವಾರಿಯನ್ನು ವಾಪಸ್ ಪಡೆಯಲು ಕೊನೆಯ ದಿನವಾದ ಇಂದು ಐದು ಜನರು ತಮ್ಮ ನಾಮಪತ್ರವನ್ನು ವಾಪಸ್ಸು ಪಡೆದಿದ್ದು ಇನ್ನೂಳಿದಂತೆ 14 ಜನ ಅಂತಿಮವಾಗಿ ಕಣದಲ್ಲಿ ಉಳಿದುಕೊಂಡಿದ್ದಾರೆ.

ನಗರದ ತಾಲೂಕು ಕಚೇರಿಯಲ್ಲಿ ಚುನಾವಣಾಧಿಕಾರಿ ಜಾವೀದಾ ನಸೀಮಾ ಖಾನಂ ಅವರ ಸಮ್ಮುಖದಲ್ಲಿ ಕೆಲ ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆಯನ್ನು ವಾಪಸ್ಸು ಪಡೆದುಕೊಂಡರು ಹೀಗಾಗಿ 14 ಜನ ಅಂತಿಮವಾಗಿ ಕಣದಲ್ಲಿ ಉಳಿದುಕೊಂಡಿದ್ದಾರೆ.

ಆಮ್ ಆದ್ಮಿ ಪಾರ್ಟಿ ಅಭ್ಯರ್ಥಿ ಮೌಲಾಜಾನ್, JDS ಅಭ್ಯರ್ಥಿ ಎನ್. ರವಿ ಕುಮಾರ್, ಕಾಂಗ್ರೆಸ್ ಅಭ್ಯರ್ಥಿ ಬಿ.ವಿ.ರಾಜೀವ್ ಗೌಡ, BJP ಅಭ್ಯರ್ಥಿ ಸೀಕಲ್ ರಾಮಚಂದ್ರಗೌಡ, BSP ಅಭ್ಯರ್ಥಿ ಮಳ್ಳೂರು ವೆಂಕಟರಮಣಪ್ಪ, ಕರ್ನಾಟಕ ರಾಷ್ಟ್ರ ಸಮಿತಿ ಅಭ್ಯರ್ಥಿ ಕೆಂಪೇಗೌಡ ಸುಂಡ್ರಹಳ್ಳಿ,ರಾಷ್ಟ್ರೀಯ ಸಮಾಜ ದಳ (ನೋಂ) ಪಕ್ಷದ ಅಭ್ಯರ್ಥಿ ದೇವಪ್ಪ.ಸ್ವತಂತ್ರ ಅಭ್ಯರ್ಥಿಗಳಾದ  ಪುಟ್ಟು ಆಂಜಿನಪ್ಪ, ನಂಜಪ್ಪ, ಬಾಲ ಮುರಳಿಕೃಷ್ಣ, ಬೈರೇಗೌಡ ವೆಂಕಟಶಾಮಪ್ಪ, ಶ್ರೀನಾಥ, ಎಸ್.ಎ.ಸೈಯದ್ ಗೌಸ್, ಸಂದೀಪ್ ರೆಡ್ಡಿ ಹೆಚ್.ಆರ್ ಅಂತಿಮವಾಗಿ ಕಣದಲ್ಲಿ ಉಳಿದುಕೊಂಡಿದ್ದಾರೆ.

ಉಮೇದುವಾರಿಕೆಯನ್ನು ಹಿಂಪಡೆದ ಅಭ್ಯರ್ಥಿಗಳು: ಸ್ವತಂತ್ರ ಅಭ್ಯರ್ಥಿಗಳಾದ ಸಿ.ಎಂ. ಬೈರೇಗೌಡ, ಸಹನಾ .ಕೆ, ಡಿ.ಮುನಿರಾಜು, ವೆಂಕಟೇಶಪ್ಪ.ಎನ್, ವೆಂಕಟರಾಜ್ ಕೆ.ಆರ್ ಅವರು ನಾಮಪತ್ರಗಳನ್ನು ವಾಪಸ್ಸು ಪಡೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next