Advertisement

ಟಿಕೆಟ್‌ ಬಿಟ್ಟುಕೊಡಲು 30 ಕೋಟಿ ಆಮಿಷ

03:22 PM Nov 30, 2022 | Team Udayavani |

ಶಿಡ್ಲಘಟ್ಟ: ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಟಿಕೆಟ್‌ ಬಯಸಿ ಈಗಾಗಲೇ 4 ಜನ ಕೆಪಿಸಿಸಿಗೆ ಅರ್ಜಿ ಸಲ್ಲಿಸಿದ್ದಾರೆ. ಈ ಮಧ್ಯೆ ಕ್ಷೇತ್ರದಲ್ಲಿ ಟಿಕೆಟ್‌ ಬಿಟ್ಟುಕೊಡುವಂತೆ ಎಬಿಡಿ ಸಂಸ್ಥೆಯ ಕಡೆಯವರಿಂದ ನನಗೆ 30 ಕೋಟಿ ರೂ.ಗಳ ಆಮಿಷವೊಡ್ಡಿದರು ಎಂದು ಕ್ಷೇತ್ರದ ಶಾಸಕ ವಿ. ಮುನಿಯಪ್ಪ ಗಂಭೀರ ಆರೋಪ ಮಾಡಿದ್ದು ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಸಿದೆ.

Advertisement

ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕಾಂಗ್ರೆಸ್‌ನ ಹಿರಿಯ ಹಾಗೂ ಅನುಭವ ರಾಜಕಾರಣಿ ಶಾಸಕ ವಿ.ಮುನಿಯಪ್ಪ ಅವರ ನ್ಪೋಟಕ ರಾಜಕೀಯ ಕ್ಷೇತ್ರ ಮಾತ್ರವಲ್ಲದೇ ಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿ ಚರ್ಚೆಗೆ ಗ್ರಾಸವಾಗಿದೆ.

ಕ್ಷೇತ್ರದಲ್ಲಿ ಶಾಸಕ ವಿ.ಮುನಿಯಪ್ಪ ಅವರು ತಮ್ಮದೇ ಆದ ವರ್ಚಸ್ಸನ್ನು ಹೊಂದಿದ್ದು ಕಾಂಗ್ರೆಸ್‌ ಪಾಲಿಗೆ ಸದ್ಯಕ್ಕೆ ಅವರೇ ಹೈ ಕಮಾಂಡ್‌. ಆರು ಭಾರಿ ಕ್ಷೇತ್ರವನ್ನು ಪ್ರತಿನಿಧಿಸಿರುವ ಅವರು ಕ್ಷೇತ್ರದ ಮೇಲೆ ಸಾಕಷ್ಟು ಹಿಡಿತ ಸಾಧಿಸಿದ್ದಾರೆ. ಆದರೆ, ಇತ್ತೀಚೆಗೆ ಎಬಿಡಿ ಸಂಸ್ಥೆಯ ಅಧ್ಯಕ್ಷ ರಾಜೀವ್‌ಗೌಡ, ಎಸ್‌. ಎನ್‌.ಕ್ರಿಯಾ ಟ್ರಸ್ಟ್‌ನ ಅಧ್ಯಕ್ಷ ಆಂಜಿನಪ್ಪ(ಪುಟ್ಟು) ಅವರು ಕಾಂಗ್ರೆಸ್‌ ಟಿಕೆಟ್‌ ಮೇಲೆ ಕಣ್ಣಿಟ್ಟು ತಮ್ಮದೇ ಆದ ಸಮಾಜ ಸೇವೆ ಮೂಲಕ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ. ಶಿಡ್ಲಘಟ್ಟ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಯಾರಿಗೆ ಟಿಕೆಟ್‌ ಸಿಗುತ್ತದೆ ಎಂದು ಸ್ವತಃ ಕಾಂಗ್ರೆಸ್‌ ಕಾರ್ಯಕರ್ತರಲ್ಲಿ ಗೊಂದಲದ ವಾತಾವರಣ ಉಂಟಾಗಿದೆ.

ಈ ಮಧ್ಯೆ ಶಾಸಕ ವಿ.ಮುನಿಯಪ್ಪ ಕಾಂಗ್ರೆಸ್‌ ಪಕ್ಷದ ಟಿಕೆಟ್‌ ಬಿಟ್ಟುಕೊಡಲು ಎಬಿಡಿ ಸಂಸ್ಥೆಯ ಅಧ್ಯಕ್ಷ ರಾಜೀವ್‌ಗೌಡ ಅವರ ಕಡೆಯವರು 30 ಕೋಟಿ ರೂ.ಗಳ ಆಮಿಷವನ್ನು ಒಡ್ಡಿದ್ದಾರೆ ಎಂದು ಗಂಭೀರ ಆರೋಪ ಮಾಡಿ ಈ ಸಂಬಂಧ ಕೆಪಿಸಿಸಿಗೆ ದೂರು ದಾಖಲಿಸಿರುವುದಾಗಿ ತಿಳಿಸಿದ್ದಾರೆ. ಕ್ಷೇತ್ರದಲ್ಲಿ ಕೊರೊನಾ ವೇಳೆ ಸಮಾಜಸೇವೆಯ ಹೆಸರಿನಲ್ಲಿ ಬಂದ ರಾಜೀವ್‌ಗೌಡ ಸಹಾಯ ಮಾಡುವ ನೆಪದಲ್ಲಿ 500-1000 ರೂಗಳನ್ನು ನೀಡಿದ್ದಾರೆ ಅದರ ಜತೆಗೆ ಅವರ ಮೇಲೆ ಎಫ್‌ಐಆರ್‌ ದಾಖಲಾಗಿದೆ

ಮತ್ತೂಂದಡೆ ಅದ್ಯಾರೋ ಟ್ಟು ಪುಟ್ಟು ಅವರ ಬಗ್ಗೆಯೂ ಪ್ರಸ್ತಾಪ ಮಾಡಿದ್ದಾರೆ ಒಟ್ಟಾರೇ ಹಾಲಿ ಶಾಸಕ ವಿ.ಮುನಿಯಪ್ಪ ಅವರ ಹೇಳಿಕೆಯ ಸಹಜವಾಗಿ ಬಹಳ ಮಹತ್ವ ಪಡೆದುಕೊಂಡಿದ್ದು, ಕುತೂಹಲಕ್ಕೆ ಕಾರಣವಾಗಿದೆ.

Advertisement

ಆಮಿಷದ ವಿರುದ್ಧ ಕೆಪಿಸಿಸಿಗೆ ದೂರು: ಕ್ಷೇತ್ರದ ಜನರ ಆಶೀರ್ವಾದದಿಂದ ಶಾಸಕನಾಗಿ ಮತ್ತು ಸಚಿವನಾಗಿ ಸೇವೆ ಸಲ್ಲಿಸಿದ್ದೇನೆ. ಕೊರೊನಾ ಸೋಂಕಿನ ಪ್ರಭಾವದಿಂದ ಆರೋಗ್ಯದಲ್ಲಿ ಸಮಸ್ಯೆ ಕಂಡುಬಂದಿದ್ದರಿಂದ ತೊಂದರೆ ಆಯಿತು. ಈ ಮಧ್ಯೆ ಕೆಲವರು ಸಮಾಜಸೇವೆಯ ಮೂಲಕ ರಾಜಕಾರಣ ಮಾಡಲು ಮುಂದಾಗಿದ್ದಾರೆ. ಅದ್ಯಾರೋ ರಾಜೀವ್‌ಗೌಡ ನನಗೆ ಗೊತ್ತಿಲ್ಲ. ನಾನು 40 ವರ್ಷಗಳ ಕಾಲ ರಾಜಕೀಯವನ್ನು ಕಾಂಗ್ರೆಸ್‌ನಲ್ಲಿ ಮಾಡಿಕೊಂಡು ಬಂದಿದ್ದು, ಅಂತಹದರಲ್ಲಿ ನನಗೆ ಟಿಕೆಟ್‌ ಬಿಟ್ಟುಕೊಡಲು ರಾಜೀವ್‌ ಗೌಡ ಅವರ ಕಡೆಯವರು 30 ಕೋಟಿ ರೂಗಳ ಆಮಿಷ ನೀಡಿದ್ದಾರೆ. ಈ ಸಂಬಂಧ ಕೆಪಿಸಿಸಿಗೆ ದೂರು ನೀಡಿದ್ದೇನೆ ಎಂದು ಶಾಸಕ ವಿ. ಮುನಿಯಪ್ಪ ತಿಳಿಸಿದರು.

ನನ್ನ ಹೆಸರಲ್ಲಿ ಕಾಣದ ಕೈಗಳ ಷಡ್ಯಂತ್ರ: ಕ್ಷೇತ್ರದ ಶಾಸಕರು ಹಿರಿಯರಿದ್ದಾರೆ. ಅವರ ಮಾರ್ಗದರ್ಶನ ನಮಗೆ ಬೇಕಾಗಿದೆ. ಕ್ಷೇತ್ರದಲ್ಲಿ ಕಾಂಗ್ರೆಸ್‌ ಸಂಘಟನೆ ಮಾಡುವ ಕೆಲಸವನ್ನು ಮಾಡುತ್ತಿದ್ದೇನೆ. ನಾನು ಮಾಡುತ್ತಿರುವ ಸಮಾಜಸೇವಾ ಕಾರ್ಯವನ್ನು ಸಹಿಸಲಾರದೆ ಕೆಲವರು ನನ್ನ ವಿರುದ್ಧ ಪಿತೂರಿ ಮತ್ತು ಷಡ್ಯಂತರ ಮಾಡುತ್ತಿದ್ದಾರೆ. ಹಿರಿಯರು ಮತ್ತು ಅನುಭವಿ ಶಾಸಕರಿಗೆ ನನ್ನ ಕಡೆಯವರು ಆಮಿಷ ಒಡ್ಡಿದ್ದಾರೆ ಎಂಬುದು ಸತ್ಯಕ್ಕೆ ದೂರವಾದ ವಿಚಾರ. ಇದರಲ್ಲಿ ಕಾಣದ ಕೈಗಳ ಷಡ್ಯಂತ್ರ ನಡೆದಿರುವುದು ಸ್ಪಷ್ಟವಾಗಿ ಕಂಡು ಬರುತ್ತಿದೆ ಎಂದು ಎಬಿಡಿ ಸಂಸ್ಥೆಯ ಅಧ್ಯಕ್ಷರು ಹಾಗೂ ಭಾರತ್‌ ಜೋಡೋ ಅಭಿಯಾನದ ಸಂಯೋಜಕ ರಾಜೀವ್‌ಗೌಡ ಸ್ಪಷ್ಟಪಡಿಸಿದ್ದಾರೆ.

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next