Advertisement

ರಾಸಾಯನಿಕ ದುರಂತ ತಡೆಗೆ ಅಣುಕು ಪ್ರದರ್ಶನ

06:14 PM Jul 30, 2022 | Team Udayavani |

ಶಿಡ್ಲಘಟ್ಟ: ರಾಸಾಯನಿಕ ವಿಪತ್ತು ಘಟನೆಗಳು ಆಕಸ್ಮಿಕವಾಗಿ ಜರುಗಿದಾಗ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ತಾಲೂಕಿನಜಂಗಮಕೋಟೆಯ ಬಳಿ ಇರುವ ಯುಎಸ್‌ಕೆ, ಎಲ್‌ಪಿಜಿ ಪ್ರೈ ಲಿಮಿಟೆಡ್‌ ಆವರಣದಲ್ಲಿ ಅಣಕು ಪ್ರದರ್ಶನದ ಮೂಲಕ ಪ್ರಾಯೋಗಿಕವಾಗಿ ತಿಳಿಸಿಕೊಡಲಾಯಿತು.

Advertisement

ತಹಶೀಲ್ದಾರ್‌ ಬಿಎಸ್‌ ರಾಜೀವ್‌ ಡಿ ಕಾರ್ಖಾನೆಗಳಲ್ಲಿ ಆಕಸ್ಮಿಕವಾಗಿ ಉಂಟಾಗುವ ರಾಸಾಯನಿಕ ದುರಂತ ಗಳನ್ನುತಡೆಗಟ್ಟಲು ಅಧಿಕಾರಿಗಳು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಆಕಸ್ಮಿಕ ದುರಂತ ದಿಂದ ಸಂಭವಿಸುವ ಸಾವು ನೋವು ಗಳು ಮತ್ತು ನಷ್ಟಗಳನ್ನು ಕನಿಷ್ಠಗೊಳಿಸುವ ನಿಟ್ಟಿನಲ್ಲಿ ಹಾಗೂ ಪರಿಣಾಮಕಾರಿಯಾಗಿ ತುರ್ತು ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಕೆಲಸಗಾರರನ್ನು ಸಿದ್ಧಗೊಳಿಸುವುದು. ವಿಪತ್ತುಗಳನ್ನು ನಿಯಂತ್ರಿಸುವಲ್ಲಿಆಡಳಿತ ವರ್ಗದವರಿಗೆ, ಕೆಲಸಗಾರರಿಗೆ ಮತ್ತುಸಾರ್ವಜನಿಕರಿಗೆ ಅರಿವು ಮೂಡಿಸುವುದು ಅಣಕು ಪ್ರದರ್ಶನದ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು.

ಸಾರ್ವಜನಿಕರು ಯಾವುದೇ ರೀತಿಯ ಭಯಭೀತರಾಗದೇ ರಾಸಾಯನಿಕ ಸೋರಿಕೆ ಸಂದರ್ಭದಲ್ಲಿ ಧೃತಿಗೆಡದೇ ಆ ಸನ್ನಿವೇಶದಲ್ಲಿ ಕೈಗೊಳ್ಳಬೇಕಾದ ಮುನ್ನೇಚ್ಚರಿಕೆ ಗಳ ಬಗ್ಗೆ ಗಮನ ಹರಿಸಿ ತಮ್ಮ ತಮ್ಮ ಪಾತ್ರಗಳನ್ನು ನಿರ್ವಹಿಸಲು ಮಾಹಿತಿ ನೀಡಲಾಯಿತು. ಪ್ಯಾಕ್ಟ್ರೀಸ್‌ ಅಂಡ್‌ ಬಾಯ್ಲರ್ಸ್‌ನ ಉಪನಿರ್ದೇಶಕ ಸೋಮಶೇಖರ್‌ ಮಾತನಾಡಿ ಇದು ಒಂದು ಅಣಕು ಪ್ರದರ್ಶನವಾಗಿದ್ದು, ಯಾವುದೇ ವಿಪತ್ತುಆಕಸ್ಮಿಕವಾಗಿ ಸಂಭವಿಸಿದಾಗ ಅಂತಹ ಸಂದರ್ಭದಲ್ಲಿಸುರಕ್ಷಿತವಾಗಿ ಪಾರಾಗುವುದು ಹೇಗೆ ಎಂಬ ಬಗ್ಗೆಅರಿವು ಮೂಡಿಸುವುದಕ್ಕಾಗಿ ಇದನ್ನು ಏರ್ಪಡಿಸಲಾಗಿದೆ ಎಂದರು.

ಸುಮಾರು ಅರ್ಧ ಗಂಟೆಯ ಅಣಕು ಪ್ರದರ್ಶನದಲ್ಲಿ 3 ಆ್ಯಂಬುಲೆನ್ಸ್‌, ಪೋಲಿಸ್‌ ಅಧಿಕಾರಿಗಳ ಹಾಗೂ 25 ಸಿಬ್ಬಂದಿ, ಜಿಲ್ಲಾ ತಾಲೂಕು ಆಡಳಿತ ಹಾಗೂಆರೋಗ್ಯ ಇಲಾಖೆ ಸೇರಿದಂತೆ ಪರೋಕ್ಷವಾಗಿ ಹಾಗೂ ಪ್ರತ್ಯಕ್ಷವಾಗಿ 200 ಜನ ಪಾಲ್ಗೊಳ್ಳುವ ಮೂಲಕ ಅಣಕು ಪ್ರದರ್ಶನ ಯಶಸ್ವಿಯಾಯಿತು.

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತ ನಾಗೇಶ್‌, ಆರೋಗ್ಯಾಧಿಕಾರಿ ಡಾ.ಎಸ್‌.ಎಸ್‌.ಮಹೇಶ್‌ ಕುಮಾರ್‌, ತಾಪಂ ಇಒ ಮುನಿರಾಜು, ನಗರಸಭೆ ಪೌರಾಯುಕ್ತಶ್ರೀಕಾಂತ್‌, ಸಿಪಿಐ ಧರ್ಮೇಗೌಡ, ಅಗ್ನಿಶಾಮಕ ಅಧಿಕಾರಿ ಬಸವರಾಜು, ಜಿಲ್ಲಾ ಕಾರ್ಮಿಕಾಧಿಕಾರಿ ವರಲಕ್ಷ್ಮೀ, ಗ್ರಾಹಕರ ವ್ಯವಹಾರಗಳ ಇಲಾಖೆ ಉಪನಿರ್ದೇಶಕಿ ಸವಿತಾ ಇತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next