Advertisement

ಸಿದ್ದು-ಡಿಕೆಶಿಗೆ ಮುಂದಿನ ಜನ್ಮದಲ್ಲೂಬುದ್ಧಿ ಬರಲ್ಲ

07:06 PM Apr 16, 2021 | Shreeraj Acharya |

ಶಿವಮೊಗ್ಗ: ಮುಖ್ಯಮಂತ್ರಿ ಬಿ.ಎಸ್‌ .ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್‌ ಅವರನ್ನು ಏಕವಚನದಲ್ಲಿ ಕರೆಯುವ ಸಿದ್ದರಾಮಯ್ಯ ಅವರಿಗೆ ಮಾನ, ಮಾರ್ಯದೆಯೇ ಇಲ್ಲ. ಇಂತಹ ವರ್ತನೆ ಅವರಿಗೆ ಶೋಭೆ ತರುವುದಿಲ್ಲ ಎಂದು ಸಚಿವ ಈಶ್ವರಪ್ಪ ಹೇಳಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ನಳಿನ್‌ ಕುಮಾರ್‌ ಕಟೀಲ್‌ರನ್ನು ವಿದೂಷಕ ಎಂದು ಕರೆಯುತ್ತಾರೆ. ಮುಖ್ಯಮಂತ್ರಿ ಬಿ.ಎಸ್‌ .ಯಡಿಯೂರಪ್ಪ ಅವರನ್ನು ಏಕವಚನದಲ್ಲಿ ಕರೆಯುತ್ತಾರೆ. ಈ ಹಿಂದೆ ಸಿದ್ದರಾಮಯ್ಯ ಅವರಿಗೆ ಹೀಗೆ ಕರೆಯುವುದು ನಿಮ್ಮ ವ್ಯಕ್ತಿತ್ವಕ್ಕೆ ಶೋಭೆ ತರುವುದಿಲ್ಲ ಎಂದು ಹೇಳಿದ್ದೆ. ಈಗಲೂ ಅದನ್ನೇ ಹೇಳುತ್ತೇನೆ. ಲೇ ಸಿದ್ಧರಾಮಯ್ಯ ಎಂದು ಕರೆಯಲು ನನಗೇನು ಬರುವುದಿಲ್ಲವೆ ಎಂದು ಪ್ರಶ್ನಿಸಿದರು.

ಮುಂದಿನ ಸಿಎಂ ನಾನೇ ಎಂದು ಸಿದ್ದರಾಮಯ್ಯ ಹೇಳುತ್ತಿದ್ರು.. ಅದ್ರೇ, ಚಾಮುಂಡೇಶ್ವರಿ ಕ್ಷೇತ್ರದಲ್ಲೇ ಸೋತರು. ಸಿಎಂ ಸ್ಥಾನ ಕಳೆದುಕೊಂಡ್ರು. ಮಾನ, ಮಾರ್ಯಾದೆನೇ ಇಲ್ಲ.. ಸೋತಿದ್ದೇವೆ ಎಂಬ ಜ್ಞಾನವಿಲ್ಲದೇ ಮಾತನಾಡ್ತಾರೆ ಎಂದು ವಾಗ್ಧಾಳಿ ನಡೆಸಿದರು. ತಾವು ರಾಜ್ಯಪಾಲರಿಗೆ ಬರೆದ ಪತ್ರದ ಬಗ್ಗೆ ಅಪಾರ್ಥ ಮಾಡಿಕೊಂಡಿರುವ ವಿಪಕ್ಷಗಳು ಮುಖ್ಯಮಂತ್ರಿ ಮತ್ತು ನಾನು ಬೇರೆ ಬೇರೆ ಎಂಬ ಅರ್ಥದಲ್ಲಿ ಮಾತನಾಡುತ್ತಿದ್ದಾರೆ. ರಾಜ್ಯಪಾಲರಿಗೆ ನಾನು ನಿಯಮದ ಬಗ್ಗೆ ಮನವಿ ಮಾಡಿದ್ದೇನೆ ಹೊರತು ಬೇರೆ ಏನೂ ಅಲ್ಲ. ನಮ್ಮ ಪಕ್ಷದ ವಿರುದ್ಧವೇ ನಾನೇಕೆ ದೂರು ನೀಡಲಿ ಎಂದರು. ಕೋವಿಡ್‌ ಬಗ್ಗೆ ಸಭೆ ಯಾಕೇ ಕರೀತೀರಾ.? ಅದ್ರಿಂದ ಏನು ಲಾಭ ಎಂದು ಡಿಕೆಶಿ ಕೇಳಿದ್ದಾರೆ. ರಾಷ್ಟಪತಿ ಆಳ್ವಿಕೆ ಹೇರಿಬಿಡಿ. ವಿಧಾನಸಭೆಯನ್ನೇ ವಿಸರ್ಜಿಸಿ ಎಂದು ಹೇಳಿದ್ದಾರೆ. ಅವರು ಅಜೆಂìಟಾಗಿ ಅ ಧಿಕಾರಕ್ಕೆ ಬಬೇìಕಾಗಿದೆ. ಇದು ಬಿಟ್ರೇ ಬೇರೆ ಇಲ್ಲ. ಜನರ ಹಿತದೃಷ್ಟಿಯಿಂದ ಸಲಹೆ- ಸೂಚನೆ ನೀಡಿ, ಸಹಕಾರ ಕೊಡೋದು ಬಿಟ್ಟು ಹೀಗೆ ಹೇಳಿದ್ದಾರೆ.

ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್‌ ಅವರಿಗೆ ಮುಂದಿನ ಜನ್ಮದಲ್ಲೂ ಬುದ್ಧಿ ಬರಲ್ಲ. ಅರ್ಥವಿಲ್ಲದ ಹೇಳಿಕೆ ಕೊಡುತ್ತಲೇ ಇರುತ್ತಾರೆ ಎಂದರು.

ಲಸಿಕೆ ಬೇರೆ ರಾಷ್ಟಕ್ಕೆ ರಫ್ತು ಮಾಡುವ ವಿಚಾರವಾಗಿಯೂ ಸಿದ್ದರಾಮಯ್ಯ, ಡಿಕೆಶಿ ಮಾತನಾಡಿದ್ದಾರೆ. ಹಂಚಿಕೊಂಡು ತಿನ್ನೋದು ಭಾರತೀಯ ಸಂಸ್ಕೃತಿ. ಇದು ಇಟಲಿ ಸಂಸ್ಕೃತಿಯಲ್ಲ. ಇಟಲಿ ಸಂಸ್ಕೃತಿಯಂತೆಯೇ ಆ ಇಬ್ಬರು ನಾಯಕರು ಹೇಳಿಕೆ ನೀಡುತ್ತಿದ್ದಾರೆ. ಸೋನಿಯಾ ಗಾಂಧಿ  ಸಂತೃಪ್ತಿ ಪಡಿಸಲು ಸಿದ್ದರಾಮಯ್ಯ, ಡಿಕೆಶಿ ಮಾತನಾಡುತ್ತಿದ್ದಾರೆ. ನಮ್ಮ ರಾಷ್ಟ್ರದಲ್ಲಿ ಬಳಸಿಕೊಂಡೇ ಬೇರೆ ರಾಷ್ಟ್ರಕ್ಕೇ ಲಸಿಕೆ ಕಳುಹಿಸಲಾಗುತ್ತಿದೆ. ಈ ಭಾರತೀಯ ಸಂಸ್ಕೃತಿಗೆ ಒಗ್ಗುವಂತ ಅಭ್ಯಾಸವೇ ಕಾಂಗ್ರೆಸ್ಸಿಗರಿಗೆ ಇಲ್ಲ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next