Advertisement

ಸಾಮಾಜಿಕ ಕಳಕಳಿ ಮೆರೆಯಲು ವಿದ್ಯಾರ್ಥಿಗಳಿಗೆ ಜಿಲ್ಲಾಧಿಕಾರಿ ಕರೆ

11:58 PM Jun 23, 2019 | sudhir |

ಮಡಿಕೇರಿ: ವಿದ್ಯಾರ್ಥಿಗಳು ಶೈಕ್ಷಣಿಕ ಹಂತದಲ್ಲಿ ವಿದ್ಯಾರ್ಜನೆಯ ಜೊತೆ ಜತೆಯಲ್ಲೆ ಸಾಮಾಜಿಕ ಕಳಕಳಿಯನ್ನು ಹೊಂದುವುದು ಅತ್ಯವಶ್ಯಕವೆಂದು ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌ ಅವರು ಹೇಳಿದರು.

Advertisement

ಕೊಡಗು ಗ್ರೀನ್‌ ಸಿಟಿ ಫೋರಂ ಹಾಗೂ ಕೊಡಗು ಫಾರ್‌ ಟುಮಾರೋ ಸಂಘಟನೆಗಳ ವತಿಯಿಂದ ರಚನೆ ಗೊಂಡಿರುವ ಹಸಿರು ಪಡೆಗೆ ನಗರದ ಕ್ರೆಸೆಂಟ್ ವಿದ್ಯಾಸಂಸ್ಥೆಯಲ್ಲಿ ಚಾಲನೆ ನೀಡಿ ಜಿಲ್ಲಾಧಿಕಾರಿ ಮಾತನಾಡಿದರು.

ವಿದ್ಯಾರ್ಥಿಗಳು ಶೈಕ್ಷಣಿಕ ಸಾಧ ನೆಯ ಭಾಗವಾದ ಅಂಕಗಳಿಕೆಗೆ ಮಾತ್ರ ಸಿಮೀತವಾಗದೆ, ಸಮಾಜದ ಸುತ್ತಮುತ್ತಲಿನ ವಿಚಾರಧಾರೆಗಳಿಗೆ ಸ್ಪಂದಿ ಸುವಂತೆ ಕಿವಿ ಮಾತು ಹೇಳಿದರು.

ಕೊಡಗು ಜಿಲ್ಲೆಯಲ್ಲಿ ಕಳೆದ ಸಾಲಿನ ಮುಂಗಾರಿನ ಅವಧಿಯಲ್ಲಿ ಉಂಟಾದ ಪ್ರಾಕೃತಿಕ ವಿಕೋಪದ ಸಂದರ್ಭ ಅನೇಕ ಸಂಘ, ಸಂಸ್ಥೆಗಳು ಸಂಕಷ್ಟದಲ್ಲಿದ್ದವರಿಗೆ ನೆರವಿನ ಹಸ್ತ ಚಾಚಿರುವುದು ಶ್ಲಾಘನೀಯ. ಇದೇ ರೀತಿ ವಿದ್ಯಾರ್ಥಿಗಳ ಸರ್ವಾಂಗೀಣ ಅಭ್ಯುದಯಕ್ಕೂ ಸಂಘ ಸಂಸ್ಥೆಗಳು ಸಹಕಾರ ನೀಡುವಂತಾಗಬೇಕು. ಪರಿಸರಕ್ಕೆ ಪೂರಕವಾದ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡು ಸ್ವಚ್ಛತೆಗೆ ಆದ್ಯತೆ ನೀಡಬೇಕೆಂದು ಜಿಲ್ಲಾಧಿಕಾರಿ ಕರೆ ನೀಡಿದರು.

ಗ್ರೀನ್‌ ಸಿಟಿ ಫೋರಂನ ಅಧ್ಯಕ್ಷ ಜಯಾಚಿಣ್ಣಪ್ಪ ಅವರು ಮಾತನಾಡಿ, ಮಡಿಕೇರಿ ನಗರವನ್ನು ಸ್ವಚ್ಛವಾಗಿಡುವ ನಿಟ್ಟಿನಲ್ಲಿ ಜಿಲ್ಲಾಡಳಿತದ ಸಹಕಾರದೊಂದಿಗೆ ಫೆ‌ೂೕರಂ ಹಾಗೂ ಕೊಡಗು ಫಾರ್‌ ಟುಮಾರೋ ಸಂಘ‌ಟನೆಗಳು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಸರ್ವ ಜನತೆಯ ಸಹಕಾರದಿಂದ ಮಡಿ ಕೇರಿಯನ್ನು ಮಾದರಿ ನಗರವನ್ನಾಗಿ ರೂಪಿಸಲು ಮುಂದಾಗಿರುವುದಾಗಿ ತಿಳಿಸಿದರು.

Advertisement

ಮೊದಲು ಮನೆಯಿಂದಲೇ ಕಸವನ್ನು ವಿಂಗಡಣೆ ಮಾಡುವ ಮಾನೋ ಭಾವನೆಯನ್ನು ಪ್ರತಿಯೊಬ್ಬರು ಬೆಳೆಸಿ ಕೊಳ್ಳಬೇಕು. ಮನೆಯ ಸುತ್ತಮುತ್ತಲ ಪ್ರದೇಶವನ್ನು ಶುಚಿಯಾಗಿಟ್ಟುಕೊಳ್ಳುವ ಮೂಲಕ ನಗರದ ಶುಚಿತ್ವಕ್ಕೆ ಮಹತ್ವ ನೀಡಬೇಕೆಂದು ಜಯಾಚಿಣ್ಣಪ್ಪ ಕರೆ ನೀಡಿದರು.

ಸಭಾ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳು ವಿವಿಧ ಬಡಾವಣೆಗಳ ಮನೆ ಮನೆಗಳಿಗೆ ತೆರಳಿ ಸ್ವಚ್ಛತೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದರು.

ಸಂದರ್ಭ ಗ್ರೀನ್‌ ಸಿಟಿ ಫೋರಂನ ಸ್ಥಾಪಕ ಅಧ್ಯಕ್ಷ ಚೆಯ್ಯಂಡ ಸತ್ಯ, ನಗರಸಭಾ ಆಯುಕ್ತ ರಮೇಶ್‌, ಕ್ರೆಸೆಂಟ್ ವಿದ್ಯಾಸಂಸ್ಥೆಯ ಪ್ರಾಂಶು ಪಾಲರಾದ ಜೈಸಿ ವಿನಯ, ಕಾರ್ಯ ದರ್ಶಿ ಹನೀಫ್, ಕೊಡಗು ಫಾರ್‌ ಟುಮಾರೋ ಸಂಘಟನೆಯ , ಫೋರಂನ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next