Advertisement
ಶಕ್ತಿನಗರದಲ್ಲಿರುವ ಎನಿಮಲ್ ಕೇರ್ ಟ್ರಸ್ಟ್ ಬೀದಿಬದಿಯಲ್ಲಿರುವ ಶ್ವಾನ, ಬೆಕ್ಕು ಮುಂತಾದ ಪ್ರಾಣಿಗಳನ್ನು ರಕ್ಷಿಸುವಲ್ಲಿ ತೊಡಗಿಸಿಕೊಂಡಿದೆ. ಯಾರೋ ಬಿಟ್ಟು ಹೋದ ಮರಿಗಳನ್ನು ತಂದು ಸಲಹುವ ಕೆಲಸವನ್ನು ನಡೆಸುತ್ತಿದೆ. ಇದೀಗ ಮಳೆಗಾಲ ದಲ್ಲಿ ಬೀದಿ ಬದಿ, ಚರಂಡಿ, ಮೋರಿ ಮುಂತಾದೆಡೆ ಆಶ್ರಯವಿಲ್ಲದೆ ನರಳುತ್ತಿರುವ ಶ್ವಾನ ಮರಿ ಮತ್ತು ಗರ್ಭಿಣಿ ಶ್ವಾನಗಳಿಗೆ ಬೆಚ್ಚನೆಯ ಗೂಡು ಕಟ್ಟಿಕೊಡಲು ಟ್ರಸ್ಟ್ ಮುಂದಾಗಿದೆ. ಈಗಾಗಲೇ ದೇರೆಬೈಲ್‌ನ ಪ್ರಶಾಂತ ನಗರ ಮತ್ತು ಮೂಡುಶೆಡ್ಡೆಯಲ್ಲಿ ಗೂಡು ನಿರ್ಮಾಣ ಮಾಡಲಾಗಿದೆ.
ಯಾವುದೇ ಶ್ವಾನ ಮರಿಗಳು, ಗರ್ಭಿಣಿ ಶ್ವಾನಗಳು ಕಂಡು ಬಂದಲ್ಲಿ ಅವುಗಳಿಗೆ ಅಲ್ಲೇ ಗೂಡುಗಳನ್ನು ಕಟ್ಟಿ ಆಶ್ರಯ ಕಲ್ಪಿಸುವುದು ಟ್ರಸ್ಟ್ ಉದ್ದೇಶ. ಗೂಡಿನಲ್ಲಿರುವ ಶ್ವಾನಗಳಿಗೆ ಅನ್ನಾಹಾರ ನೀಡಲು ಸನಿಹದ ಮನೆ ಅಥವಾ ಅಂಗಡಿಗಳಲ್ಲಿ ಟ್ರಸ್ಟ್ ಮನವಿ ಮಾಡಲಿದೆ. ಪ್ರತಿ ಗೂಡಿಗೆ 2,500 ರೂ. ವೆಚ್ಚ
ಪ್ರತಿ ಗೂಡಿಗೆ ಕನಿಷ್ಠ 2,500 ರೂ. ವೆಚ್ಚ ತಗಲುತ್ತದೆ. ದಾನಿಗಳ ನೆರವಿನೊಂದಿಗೆ ಟ್ರಸ್ಟ್ ಸದಸ್ಯರು ಗೂಡನ್ನು ನಿರ್ಮಿಸುತ್ತಿದ್ದಾರೆ ಎಂದು ಟ್ರಸ್ಟಿ ಸುಮಾ ನಾಯಕ್ ತಿಳಿಸಿದ್ದಾರೆ.