ದಕ್ಷಿಣ ಆಫ್ರಿಕಾ: ಮಹಿಳೆಯೊಬ್ಬಳನ್ನು ಕೊಂದ ಆರೋಪದಲ್ಲಿ ಟಗರಿಗೆ ಮೂರು ವರ್ಷಗಳ ಜೈಲುಶಿಕ್ಷೆಯನ್ನು ವಿಧಿಸಿರುವ ವಿಲಕ್ಷಣ ಘಟನೆ ದಕ್ಷಿಣ ಸುಡಾನ್ ನಲ್ಲಿ ನಡೆದಿದೆ ಎಂದು ಮಾಧ್ಯಮದ ವರದಿ ತಿಳಿಸಿದೆ.
ಇದನ್ನೂ ಓದಿ:ಪರಿಷತ್ ಅಭ್ಯರ್ಥಿ ಹೇಮಲತಾ ನಾಯಕ್ ಗೆ ಹೆಲಿಕಾಪ್ಟರ್ ವ್ಯವಸ್ಥೆ ಮಾಡಿದ ಬಿಜೆಪಿ
ಸುಡಾನ್ ನ ಐ ರೇಡಿಯೋ ಮಾಹಿತಿ ಪ್ರಕಾರ, ಮೇ ತಿಂಗಳ ಮೊದಲ ವಾರದಲ್ಲಿ 45 ವರ್ಷದ ಅಧಿಯು ಚಾಪಿಂಗ್ ಎಂಬ ಮಹಿಳೆ ಮೇಲೆ ಟಗರು ದಾಳಿ ನಡೆಸಿದ್ದು, ನಂತರ ಟಗರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ಟಗರಿನ ಬಲವಾದ ಹೊಡೆತಕ್ಕೆ ಮಹಿಳೆ ಸಾವನ್ನಪ್ಪಿದ್ದಳು ಎಂದು ವರದಿ ವಿವರಿಸಿದೆ.
ಸ್ಥಳೀಯ ಲಾಡ್ ಬಿಬಿಲ್ ಮಾಧ್ಯಮ ವರದಿಯಂತೆ, ಶಿಕ್ಷೆಯ ಹಿನ್ನೆಲೆಯಲ್ಲಿ ಸುಡಾನ್ ನ ಲೇಕ್ ಸ್ಟೇಟ್ ನ ಅಡ್ಯುಯೆಲ್ ಕೌಂಟಿಯ ಪ್ರಧಾನ ಕಚೇರಿಯ ಮಿಲಿಟರಿ ಕ್ಯಾಂಪ್ ನಲ್ಲಿ ಟಗರು ಮೂರು ವರ್ಷಗಳ ಕಾಲ ಕಳೆಯಲಿದೆ ಎಂದು ತಿಳಿಸಿದೆ.
ಅಷ್ಟೇ ಅಲ್ಲ ಟಗರು ಮಾಲೀಕ ಡುಯೋನಿ ಮಾನ್ಯಂಗ್ ಧಾಲ್ ಕೂಡಾ ಐದು ಹಸುಗಳನ್ನು ಸಂತ್ರಸ್ತ ಮಹಿಳೆಯ ಕುಟುಂಬಕ್ಕೆ ಹಸ್ತಾಂತರಿಸಬೇಕೆಂದು ಸ್ಥಳೀಯ ನ್ಯಾಯಾಲಯ ತೀರ್ಪು ನೀಡಿರುವುದಾಗಿ ವರದಿ ವಿವರಿಸಿದೆ.
ಸೂಡಾನ್ ನ ಸಾಂಪ್ರದಾಯಿಕ ಕಾನೂನು ಪ್ರಕಾರ ಯಾವುದೇ ದೇಶೀಯ ಪ್ರಾಣಿ ಯಾವುದೇ ವ್ಯಕ್ತಿ, ಮಹಿಳೆಯನ್ನು ಕೊಂದಲ್ಲಿ ಸಂತ್ರಸ್ತ ಕುಟುಂಬಕ್ಕೆ ಪರಿಹಾರ ಕೊಡಬೇಕಾಗಿದೆ. ಇದೀಗ ಸ್ಥಳೀಯ ಕೋರ್ಟ್ ಶಿಕ್ಷೆ ವಿಧಿಸಿದ ಹಿನ್ನೆಲೆಯಲ್ಲಿ ಮಾಲೀಕ ಟಗರನ್ನು ಕಳೆದುಕೊಂಡಂತಾಗಿದೆ ಎಂದು ವರದಿ ತಿಳಿಸಿದೆ.