Advertisement

ಕಾರ್ಮಿಕರಿಗೆ ಕುರಿ-ಮೇಕೆ ವಿತರಣೆ

05:20 PM Mar 31, 2021 | Team Udayavani |

ಚೇಳೂರು: ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನಬಡವರು ಜೀವನ ಮಾಡುವುದೇ ಕಷ್ಟವಾಗಿದೆ.ಆದ್ದರಿಂದ ಕೃಷಿ, ಕೂಲಿ ಕಾರ್ಮಿಕರಕುಟುಂಬಗಳಿಗೆ ಕುರಿ- ಮೇಕೆ ವಿತರಿಸಿ, ಅವರಬದುಕು ಹಸನುಗೊಳಿಸಲಾಗುವುದು ಎಂದುಫೌಂಡೇ ಫೌಡೇಂಶನ್‌ ಇಕಾಲಿಜಿಕಲ್‌ ಸೆಕ್ಯೂರಿಟಿಸಂಸ್ಥೆ ವಿಸ್ತರಣಾಧಿಕಾರಿ ಮುನಿರಾಜ್‌ ಹೇಳಿದರು.

Advertisement

ತಾಲೂಕಿನ ನಲ್ಲಗುಟ್ಲಪಲ್ಲಿ ಗ್ರಾಪಂ,ರಾಜುವಾಂಡ್ಲಪಲ್ಲಿ- ಬಜ್ಜಾಪುರ ಗ್ರಾಮಾಭಿವೃದ್ಧಿಸಮಿತಿ ಸಹಯೋಗದಲ್ಲಿ ನಡೆದ ಕುರಿ-ಮೇಕೆವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿ,ಗ್ರಾಮಗಳಲ್ಲಿ ಮಳೆ ಕಡಿಮೆಯಾಗಿ ಕೂಲಿ ನಂಬಿಜೀವನ ಮಾಡುವ ಜನರಿದ್ದಾರೆ.

ಅವರು ಬದುಕಿಗೆನಮ್ಮ ಸಂಸ್ಥೆಯಿಂದ ಸೌಲಭ್ಯ ನೀಡಿ, ಮಕ್ಕಳ ಉಜ್ವಲಭವಿಷ್ಯಕ್ಕೆ ನೆರವಾಗುತ್ತೇವೆ ಎಂದರು.ಗ್ರಾಪಂ ಅಧ್ಯಕ್ಷ ವೆಂಕಟಶಿವಾರೆಡ್ಡಿ ಮಾತನಾಡಿದರು.

ಸಂಸ್ಥೆಯ ಮ್ಯಾನೇಜರ್‌ ಸುನೀಲ್‌, ಸಿಆರ್‌ಪಿಬಜ್ಜಾಪುರ ರತ್ಮಮ್ಮ, ವೆಂಕಟೇಶ್‌, ಶ್ರೀನಿವಾಸ್‌,ಗ್ರಾಪಂ ಸದಸ್ಯರಾದ ಆರ್‌.ಎ.ವಿನೋದ್‌ ರೆಡ್ಡಿ,ಗ್ರಾಪಂ ಮುಖಂಡರಾದ ಆರ್‌.ಬಿ.ಮಂಜುನಾಥರೆಡ್ಡಿ, ಪಿ.ಎಸ್‌.ರಘುನಾಥರೆಡ್ಡಿ, ಮಾಜಿ ಸದಸ್ಯದೋಬಿ ನಾಗರಾಜ್‌ ಹಾಜರಿದ್ದರು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next