ಕಲಬುರಗಿ: ನಿರುದ್ಯೋಗಿ ಯುವಕರು, ರೈತರು, ರೈತಾಪಿ ಮಹಿಳೆಯರಿಗೆ ಆರ್ಥಿಕ ಲಾಭ ತಂದುಕೊಡುವ ನಿಟ್ಟಿನಲ್ಲಿ ಕುರಿ ಸಾಕಾಣಿಕೆಯಲ್ಲಿ ವೈಜ್ಞಾನಿಕ ಪದ್ಧತಿ ಅಳವಡಿಸಿಕೊಂಡು ಸಂತಸದಾಯಕ ಬದಕು ಪಡೆಯಬೇಕು ಎಂದು ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಪಶುವೈದ್ಯಾಧಿಕಾರಿ ಡಾ| ಶಿವಕುಮಾರ ಜಂಬಲದಿನ್ನಿ ಹೇಳಿದರು.
ನಗರದ ಐವಾನ್‌ಶಾಹೀ ಸಭಾಂಗಣದಲ್ಲಿ ಸೋಮವಾರ ದಾನೇಶ್ವರಿ ಸೇವಾ ಸಂಸ್ಥೆ ಹಾಗೂ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ, ಪಶು ಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಕುರಿ ಸಾಕಾಣಿಕೆದಾರರಿಗೆ ವೈಜ್ಞಾನಿಕ ಮಾಹಿತಿ ಮಾರ್ಗದರ್ಶನ ಕಾರ್ಯಕ್ರಮ ಉದ್ಘಾಟಿಸಿ ಆವರು ಮಾತನಾಡಿದರು.
ಗ್ರಾಮೀಣ ಭಾಗದಲ್ಲಿ ಕುರಿ ಸಾಕಾಣಿಕೆ, ಕುರಿ ಹಾಲು, ಮೇಕೆ ಹಾಲು ಮಾರಾಟ ಮೂಲಕ ಆರ್ಥಿಕ ಲಾಭದ ಸ್ವ ಉದ್ಯೋಗ ಎಂದು ತಿಳಿಯಲಾಗಿದೆ. ಆದ್ದರಿಂದ ನಮ್ಮ ನಿರುದ್ಯೋಗಿ ಯುವಕರು ಇಂತಹ ಆರ್ಥಿಕ ಲಾಭದ ಉದ್ಯೋಗ ಮಾಡುವ ಮೂಲಕ ನಿರುದ್ಯೋಗ ಸಮಸ್ಯೆ ನೀಗಿಸಿಕೊಳ್ಳಬೇಕು ಎಂದು ಹೇಳಿದರು.
ಪಶು ವೈದ್ಯಕೀಯ ಜೈವಿಕಕೇಂದ್ರದ ವಿಜ್ಞಾನಿ ಡಾ| ಶೇಷರಾವ ರಾಠೊಡ ಮಾತನಾಡಿ, ಕುರಿ ಸಾಕಾಣಿಕೆ ವೈಜ್ಞಾನಿಕ ಪದ್ಧತಿ ಹಾಗೂ ಕುರಿ ಮೇಕೆ ಇತರೆ ಸಾಕು ಪ್ರಾಣಿಗಳ ಜೈವಿಕ ಆರೋಗ್ಯ ತಪಾಸಣೆಗೆ ಪಶುವೈದ್ಯಾಧಿಕಾರಿಗಳನ್ನು ಭೇಟಿ ಮಾಡಿ ಸಾಕು ಪ್ರಾಣಿಗಳ ಆರೋಗ್ಯ ಸುಧಾರಣೆಗೆ ಹಾಗೂ ದಷ್ಟ ಪುಷ್ಟ ಕುರಿ ಬೆಳವಣಿಗೆ ಹಾಗೂ ಕುರಿ ಉಣ್ಣೆ ಮಾರಾಟಕ್ಕೆ ಅನುಕೂಲ ವ್ಯಾಪಾರಿ ಜ್ಞಾನ ಪ್ರತಿಯೊಬ್ಬರು ಅಳವಡಿಸಿಕೊಂಡು ಆರ್ಥಿಕ ಲಾಭ ಮಾಡಿಕೊಳ್ಳಬೇಕು ಎಂದು ಹೇಳಿದರು.
ಆಳಂದ ಪಶುವೈದ್ಯಾಧಿಕಾರಿ ಡಾ| ಯಲ್ಲಪ್ಪ ಇಂಗಳೆ, ಶ್ರೀ ದಾನೇಶ್ವರಿ ಸೇವಾ ಸಂಸ್ಥೆ ಅಧ್ಯಕ್ಷೆ ಭಾಗ್ಯಜ್ಯೋತಿ ಆರ್. ಹಿರೇಮಠ ಮಾತನಾಡಿದರು. ಜೇವರ್ಗಿ ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಲಿಂಗಯ್ಯ ಹಿರೇಮಠ ಆಂದೋಲ, ಯಾದಗಿರಿ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ಸಹಾಯಕ ಉಪನಿರ್ದೇಶಕ ಡಾ| ಷಣ್ಮುಖ ಗೊಂಗಡಿ,
ಪಶುವೈದ್ಯಾಧಿಕಾರಿ ಡಾ| ಸುನೀಲ ಜಿರೋಬೆ, ಡಾ| ಶರಣಬಸಪ್ಪ ನಿಂಗದಳ್ಳಿ, ಡಾ| ಶಂಕರ ಕಣ್ಣಿ, ಡಾ| ಪ್ರಹ್ಲಾದ ಬೂದೂರು, ಪಶುವೈದ್ಯಾಧಿಕಾರಿ ಡಾ| ವಿಜಯಕುಮಾರ ತೇಲಗರ್, ಡಾ| ನಾನಾಗೌಡ ಹಳ್ಳಿ ಹುಸನಯ್ಯ ಗುತ್ತೇದಾರ, ಎಚ್.ಎಂ. ಹಾಜಿ, ಐಶ್ವರ್ಯ ವೇಕೆಶನ್ ನಿರ್ದೇಶಕ ಚೇತನ ಮಾತನಾಡಿದರು.