Advertisement

ಅನ್ಯಜಾತಿ ಯುವಕನೊಂದಿಗೆ ಮಗಳು ನಾಪತ್ತೆ; ಒಂದೇ ಕುಟುಂಬದ ಮೂವರು ಸಾಮೂಹಿಕ ಆತ್ಮಹತ್ಯೆ

10:14 AM Oct 04, 2022 | Team Udayavani |

ಶಿಡ್ಲಘಟ್ಟ: ಅನ್ಯಜಾತಿ ಯುವಕನೊಂದಿಗೆ ಮಗಳು ನಾಪತ್ತೆಯಾದ ಹಿನ್ನೆಲೆಯಲ್ಲಿ ಮನನೊಂದು ಒಂದೇ ಕುಟುಂಬದ ಮೂವರು ವಿಷಪೂರಿತ ಗುಳಿಗೆಗಳನ್ನು ಸೇವಿಸಿ ಸಾಮೂಹಿಕವಾಗಿ ಆತ್ಮಹತ್ಯೆಗೆ ಶರಣಾಗಿರುವ ಹೃದಯ ವಿದ್ರಾವಕ ಘಟನೆ ಶಿಡ್ಲಘಟ್ಟ ಗ್ರಾಮಾಂತರ ಪೋಲಿಸ್ ಠಾಣೆಯ ವ್ಯಾಪ್ತಿಯ ಹಂಡಿಗನಾಳ ಗ್ರಾಮದಲ್ಲಿ ಸಂಭವಿಸಿದೆ.

Advertisement

ಶ್ರೀರಾಮಪ್ಪ,(69) ಸರೋಜ,(55) ಹಾಗೂ ಮನೋಜ್(25) ಆತ್ಮಹತ್ಯೆಗೆ ಶರಣಾಗಿರುವವರು.

ಹಂಡಿಗನಾಳ ಗ್ರಾಮದ ಚಾಲಕ ನಾರಾಯಣಸ್ವಾಮಿ ಜೊತೆ ಮಗಳು ಅರ್ಚನಾ ಹೊರಟು ಹೋಗಿದ್ದಾಳೆ. ಇದರಿಂದ ಮನನೊಂದು ತಮ್ಮ ಸಾವಿಗೆ ಮಗಳು ಕಾರಣವೆಂದು ಡೆತ್ ನೋಟ್ ಬರೆದು ತಂದೆ ಶ್ರೀರಾಮಪ್ಪ, ತಾಯಿ ಸರೋಜಾ ಹಾಗೂ ಸಹೋದರ ಮನೋಜ್ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ,ಸಿಪಿಐ ನಂದನ್‌ಕುಮಾರ್, ಗ್ರಾಮಾಂತರ ಪೊಲೀಸ್ ಠಾಣೆಯ ಪಿ.ಎಸ್.ಐ ಸತೀಶ್ ಮತ್ತು ಸಿಬ್ಬಂದಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಶವಗಳನ್ನು ಶಿಡ್ಲಘಟ್ಟ ಸಾರ್ವಜನಿಕ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆ ಕಳುಹಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next