ಹಾಗೆ ಓಡಿ ಬಂದ ಹುಡುಗಿಯನ್ನು ಮಡಿಲಿಗೆ ಸೇರಿಸಿಕೊಂಡು ಅವಳು ತಂದಿದ್ದ ಪುಸ್ತಕದ ಹಾಳೆ ತಿರುವುತ್ತ ಹೋದೆ. ಅವಳು ಒಂದು ಬದುಕಿನ ಕಥೆ ಹೆಕ್ಕಬೇಕಿತ್ತು. ಶಾಲೆಯ ಪುಸ್ತಕದಲ್ಲಿದ್ದ ಒಂದು ಪಾಠವನ್ನು ತನ್ನ ಕಣ್ಣುಗಳ ಮೂಲಕ ಕಟ್ಟಿಕೊಡಬೇಕಿತ್ತು. ಸರಿ ದೋಸೆ ಮಗುಚಿ ಹಾಕುವ ಕೆಲಸ ಅಷ್ಟೇ ತಾನೇ. ಅವರು ಹಾಗೆ ಬರೆದದ್ದನ್ನು ಹೀಗೆ ಬರೆದರೆ ಅವಳ ಹೋಮ್‌ವರ್ಕ್ ರೆಡಿ ಅಂದುಕೊಂಡವನೇ ಆ ಪಾಠ ಓದತೊಡಗಿದೆ.
Advertisement
ಓಹ್ ! ನಿಜಕ್ಕೂ ಅದು ಪಾಠ. ಬದುಕಿನ ಪಾಠ. ನನ್ನೊಳಗೆ ಇದ್ದ ಕತ್ತಲೆಯನ್ನು ಒಂದಿಷ್ಟು ಸರಿಸಿ ಹಾಕಿದ ಪಾಠ. ಆಕೆ- ರೋಸಾ ಪಾರ್ಕ್ಸ್ . ಅಮೆರಿಕಾದ ಅಲಬಾಮಾದ ಮಹಿಳೆ.
Related Articles
Advertisement
ಬಸ್‌ನಲ್ಲಿದ್ದ ಬಿಳಿಯರೆಲ್ಲ ಒಟ್ಟಾಗಿ ಕೂಗಿದರು. ರೋಸಾ ಒಂದಿನಿತೂ ಅಲುಗಲಿಲ್ಲ. ಕುಳಿತೇಬಿಟ್ಟಳು. ಅಷ್ಟೇ ಆದದ್ದು. ಆದರೆ ಅದು ಬಿಳಿಯರ ಕಣ್ಣಿಗೆ ಮಾತ್ರ “ಅಷ್ಟೇ’ ಆಗಿರಲಿಲ್ಲ. ಪೊಲೀಸರನ್ನು ಕರೆಸಿದರು. ಎಲ್ಲರ ಕಣ್ಣೆದುರಿಗೆ ರೋಸಾಗೆ ಕೈಕೋಳ ತೊಡಿಸಿ ಜೈಲಿಗೆ ದೂಕಿದರು.
ದೂಕಿದ್ದು ಕತ್ತಲ ಕೋಣೆಗೆ. ಆದರೆ, ಅದೇ ಬೆಳಕಿಗೆ ದಾರಿಯಾಗಿ ಹೋಯಿತು. ಯಾವಾಗ ರೋಸಾ ಕೂತÇÉೇ ಕೂತುಬಿಟ್ಟಳ್ಳೋ, ಅದೇ ಮಹಾಪರಾಧವಾಗಿ ಹೋಯಿತೋ, ಇಡೀ ದೇಶದ ಕರಿಯರು ಒಂದಾದರು.
ಮನುಷ್ಯರಾಗಿದ್ದವರೆಲ್ಲರೂ ಅವರ ಜೊತೆಗೂಡಿದರು. ನಾಗರಿಕ ಹಕ್ಕುಗಳ ಚಳವಳಿ ಆರಂಭವಾಗಿ ಹೋಯಿತು. ನೋಡ ನೋಡುತ್ತಿದ್ದಂತೆಯೇ ಒಂದು ಪುಟ್ಟ , ಹೆಸರೇ ಕೇಳಿರದಿದ್ದ ಊರಿನಲ್ಲಿ ನಡೆದ ಘಟನೆ ದೇಶದ ಗಡಿ ದಾಟಿ ಸುದ್ದಿ ಮಾಡುತ್ತ ಹೋಯಿತು. ಜಗತ್ತಿಗೆ ಜಗತ್ತೇ ಈ ಹೋರಾಟದ ಬೆನ್ನಿಗೆ ನಿಂತುಬಿಟ್ಟಿತು.
ಚರಿತ್ರೆಯ ಪುಟಗಳಲ್ಲಿ ಏನು ಬರೆದಿ¨ªಾರೋ ಗೊತ್ತಿಲ್ಲ. ಏಕೆಂದರೆ, ಚರಿತ್ರೆಯ ಪುಟಗಳು ಸೃಷ್ಟಿಯಾಗಿರುವುದು ಬೇಟೆ ಆಡಿದವನ ಕಣ್ಣುಗಳಿಂದ ಮಾತ್ರ ಅಲ್ಲವೆ? ಆದರೆ, ಹೀಗಾಗಿ ಹೋಯಿತು-ಆಕೆ ಕುಳಿತಳು.
ಇಡೀ ಜಗತ್ತು ಎದ್ದು ನಿಂತಿತು.
.
ಇದಾಗಿ ಒಂದೆರಡು ವರ್ಷವಾಗಿತ್ತು. ನಾನು ವಾಷಿಂಗ್ಟನ್‌ನ ಪ್ರಸಿಡೆಂಟ್ ಕಚೇರಿಯ ಎದುರು ಇ¨ªೆ. ಎದ್ದೇನೋ ಬಿ¨ªೆನೋ ಎಂದು ಅಲ್ಲಿಗೆ ಓಡಿ ಬರುವ ವೇಳೆಗೆ ಜನಸಾಗರ. ದೊಡ್ಡ ಕ್ಯೂ… ಕಣ್ಣು ಆಯಾಸಗೊಳ್ಳುವವರೆಗೂ ಸಾಗಿ ಹೋಗಿತ್ತು. ನನಗೋ ಆತಂಕ. ಇನ್ನಿದ್ದದ್ದು ಒಂದು ಗಂಟೆಯಷ್ಟು ಸಮಯ ಮಾತ್ರ. ಈ “ಕ್ಯೂ’ನಲ್ಲಿ ನಿಂತರೆ ಶತಾಯ ಗತಾಯ ನಾನು ಅಧ್ಯಕ್ಷರ ಸಭಾಂಗಣ ಸೇರುವುದು ಸಾಧ್ಯವೇ ಇರಲಿಲ್ಲ. ತಕ್ಷಣ ನೆನೆಪಿಗೆ ಬಂತು. ಸೀದಾ ಮುಖ್ಯ ಗೇಟಿಗೆ ಹೋದವನೇ ನನ್ನ “ಐಡಿ’ ಝಳಪಿಸಿದೆ. ನಾನು ಆಗ “ಸಿಎನ್ ಎನ್’ನಲ್ಲಿ¨ªೆ. ಸಿಎನ್‌ಎನ್ ಎಂದರೇನು ಸುಮ್ಮನೆಯೆ? ಅದು ಇಡೀ ಅಮೆರಿಕದ ಕಣ್ಣು ಕಿವಿ ನಾಲಿಗೆ ಎÇÉಾ! ಹಾಗಾಗಿ, ಗೇಟು ತನ್ನಿಂದ ತಾನೇ ತೆರೆದುಕೊಂಡುಬಿಟ್ಟಿತ್ತು. ಅಕಸ್ಮಾತ್ ತೆರೆಯದಿದ್ದರೆ ನೇರಾ ಜಾರ್ಜ್ ಬುಷ್ ಬಳಿಗೆ ಕರೆದೊಯ್ಯಿರಿ ಎಂದು ಹೇಳುವಷ್ಟು ಧೈರ್ಯವನ್ನು ಆ ಒಂದು ಪುಟ್ಟ ಐಡಿ ಕಾರ್ಡ್ ನನಗೆ ಕೊಟ್ಟುಬಿಟ್ಟಿತ್ತು
ಹಾಗೆ ನಾನು ಒಳಗೆ ನುಗ್ಗಿದ್ದು ಇನ್ನಾರಿಗೂ ಅಲ್ಲ. ಅದೇ ಆ ನಾಲ್ಕನೆಯ ಕ್ಲಾಸಿನ ಪಠ್ಯಪುಸ್ತಕದಲ್ಲಿ ಒಂದು ಪಾಠವಾಗಿದ್ದ, ನಾಲ್ಕು ದಿನಗಳ ಕಾಲ ನಾನೂ ನನ್ನ ಮಗಳೂ ಗೂಗಲ್ ಎÇÉಾ ತಡಕಾಡಿ ಸಂಗ್ರಹಿಸಿದ್ದ ಫೋಟೋ, ಚಿತ್ರಗಳನ್ನೆÇÉಾ ಕತ್ತರಿಸಿ ಹೊಸ ಸ್ಕೆಚ್ ಪೆನ್ ತಂದು ಡ್ರಾಯಿಂಗ್ ಹಾಳೆಯ ಮೇಲೆ ನೀಟಾಗಿ ಕತ್ತರಿಸಿ ಒಂದು ಬದುಕು ಕಟ್ಟಿ ಕೊಟ್ಟಿ¨ªೆವÇÉಾ ಅದೇ ರೋಸಾ ಪಾರ್ಕ್ಸ್ಗಾಗಿ. ರೋಸಾ ತಮ್ಮ 92ನೆಯ ವಯಸ್ಸಿನಲ್ಲಿ ಕಣ್ಣು ಮುಚ್ಚಿದ್ದರು. ಮೈಲುಗಟ್ಟಲೆ ದೂರದಲ್ಲಿದ್ದ ನನಗೇ, ಖಂಡಗಳ ಆಚೆ ಇದ್ದ ನನಗೇ ದೇಶ ಗೊತ್ತಿರದಿದ್ದ, ಭಾಷೆ ಗೊತ್ತಿರದಿದ್ದ ನನಗೇ ಒಮ್ಮೆಯೂ ನೋಡಿರದ ನನಗೇ ಆ ಘಟನೆ ನಡೆದಾಗ ಹುಟ್ಟಿಯೂ ಇರದ ನನಗೇ ರೋಸಾ ಅಷ್ಟು ದೊಡ್ಡದಾಗಿ ಕಾಡಿ¨ªಾಗ… ಇನ್ನು ಅಮೆರಿಕಾಗೆ ! ರೋಸಾ ಪಾರ್ಕ್ಸ್ ಎನ್ನುವುದು ತಮ್ಮ ಬದುಕಿಗೆ ಏನು ಎನ್ನುವುದು ಎಲ್ಲರಿಗೂ ಗೊತ್ತಿತ್ತು- ಅಂತೆಯೇ ಸರ್ಕಾರಕ್ಕೂ. ಹಾಗಾಗಿಯೇ ಮೊತ್ತಮೊದಲ ಬಾರಿಗೆ ಅಧ್ಯಕ್ಷರ ಕಚೇರಿಯಲ್ಲಿ ಅಧ್ಯಕ್ಷರಲ್ಲದವರ ದೇಹವನ್ನು ಸಾರ್ವಜನಿಕ ದರ್ಶನಕ್ಕೆ ಇಡಲಾಗಿತ್ತು. ಯಾಕೆಂದರೆ, ರೋಸಾ ಪಾರ್ಕ್ಸ್ ಅಧ್ಯಕ್ಷರಿಗಿಂತಲೂ ಒಂದು ಸಾಸಿವೆ ಕಾಳು ಹೆಚ್ಚು ತೂಗಿದವರೇ. ನಾನು ಕ್ಯಾಮೆರಾ ಕೈಗೆತ್ತಿಕೊಂಡವನೇ ಕ್ಲಿಕ್ಕಿಸುತ್ತ¤ ಹೋದೆ. ಒಳಗೆ, ಹೊರಗೆ… ರೋಸಾ ಎಂಬ ಬೆಳಕು ನನ್ನ ಕ್ಯಾಮೆರಾದೊಳಗೆ ಅಡಗಿದ್ದ ಕತ್ತಲನ್ನೂ ಹೊರಗೆ ತಳ್ಳುತ್ತ ಕುಳಿತಿತ್ತು. ಇದಾಗಿ ಸ್ವಲ್ಪ ದಿನ ಹಿಂದಷ್ಟೇ… ನನ್ನೊಡನೆ ಸಿಎನ್‌ಎನ್‌ನಲ್ಲಿದ್ದ ಕೆನ್ಯಾದ ಮಾರ್ಕ್ “ಬರ್ತೀಯಾ ನನ್ನ ಜೊತೆ’ ಎಂದ. “ಎಲ್ಲಿಗೆ’ ಎಂದೆ. “ಅಲಬಾಮಾ’ ಅಂದ. ಅಲಬಾಮಾ. ತಕ್ಷಣ ನನ್ನ ಕಿವಿ, ಬುದ್ಧಿ ಎರಡೂ ಚುರುಕಾದವು.
ಮತ್ತೆ ಅದೇ ಪುಟ್ಟ ಹುಡುಗಿಯ ಜೊತೆ ಮಾಡಿದ ಹೋಮ್ ವರ್ಕ್ ನೆನಪಿಗೆ ಬಂತು. ಅಲಬಾಮಾ- ಅಲ್ಲಿಯೇ ಆ ಘಟನೆ ನಡೆದದ್ದು- ರೋಸಾ ಬಸ್‌ನಲ್ಲಿ ಜಗ್ಗದೆಯೇ, ಕುಗ್ಗದೆಯೇ ಕುಳಿತದ್ದು. “ಸರಿ’ ಎಂದು ನಾನು ಅವನ ಜೊತೆಯಾಗಿ ನಡೆದೆ. ಟ್ರೇನ್ ಹಿಡಿಯಲು ಸ್ಟೇಷನ್ ತಲುಪಿದೆವು. ಒಳಗೆ ಹೋಗಬೇಕು ಎನ್ನುವಾಗ ನನ್ನ ಮುಖ ಅವನೂ, ಅವನ ಮುಖ ನಾನೂ ಇಬ್ಬರೂ ನೋಡಿಕೊಂಡೆವು. ಮನಸ್ಸುಗಳೇ ಮಾತಾಡಿಬಿಟ್ಟಿತ್ತು. ಯಾವ ಬಸ್ ಘಟನೆಯಿಂದಾಗಿ ಜಗತ್ತು ಎಚ್ಚೆತ್ತುಕೊಂಡಿತೋ, ಯಾವ ಬಸ್ ಘಟನೆಯಿಂದಾಗಿ ವರ್ಣಬೇಧದ ಬಗ್ಗೆ ಆಕ್ರೋಶ ಭುಗಿಲೆದ್ದಿತ್ತೋ, ಯಾವ ಬಸ್ ಘಟನೆಯಿಂದಾಗಿ ಮನಸ್ಸುಗಳು ನರಳಿ ಹೋಗಿದ್ದವೋ, ಯಾವ ಬಸ್ ಘಟನೆಯಿಂದಾಗಿ ಹೋರಾಟಗಳು ಅರಳಿ ನಿಂತವೋ- ಅಂತಹ ಆ ಊರಿಗೆ ಟ್ರೇನ್‌ನಲ್ಲಿ… “ಊಹೂಂ’ ಎಂದುಕೊಂಡವರೇ ನಾವಿಬ್ಬರೂ ಬಸ್ ಹತ್ತಿದೆವು. ಹಾಗೇ ಅನಿಸಿತೇನೋ ಆ ಒಬಾಮನಿಗೂ… ಥೇಟ್ ನಮ್ಮಂತೆಯೇ… ಅಧ್ಯಕ್ಷನಾದರೇನು, ತನ್ನದೇ ವಿಮಾನ ಇದ್ದರೇನು, ಆಳುಕಾಳು ಜೊತೆಗಿದ್ದರೇನು ಅಂತ ಒಂದು ದಿನ ಸೀದಾ ಹೆನ್ರಿ ಫೋರ್ಡ್ ಮ್ಯೂಸಿಯಂ ಬಾಗಿಲು ತಲುಪಿಕೊಂಡವರೇ ಅಲ್ಲಿ ಇರಿಸಿದ್ದ, ರೋಸಾ ಪಾರ್ಕ್ಸ್ ಸಂಚರಿಸಿದ್ದ ಅದೇ ಬಸ್ ಅನ್ನು ಹುಡುಕಿದರು. ಬಸ್ ಏರಿದವರೇ ಅದೇ ಸೀಟನ್ನು ಹುಡುಕಿದರು. ಅಲ್ಲಿ ಅದೇ ಸೀಟ್‌ನಲ್ಲಿ ಕುಳಿತು ಹೊರ ಜಗತ್ತು ನೋಡಿದರು. ಬೆಳಕಿನ ಕಿರಣಗಳು ಅವರಿಗೂ ಕಂಡಿರಬೇಕು. ಎದ್ದು ನಡೆದರು.
ಇದು ಕುಳಿತ ಕಥೆ ಆಯಿತು. ಆದರೆ, ಅವರು ನಿಂತರು. ಇಡೀ ಬಿಳಿಯ ಜಗತ್ತು ನುಂಗಿಹಾಕುವಂತೆ ನೋಡುತ್ತಿ¨ªಾಗಲೂ ಅವರು ನಿಂತೇ ನಿಂತರು. ಕಪ್ಪು ಬಿಳಿ ಎನ್ನುವ ನೀಚ ಮನಸ್ಸನ್ನು ಬಯಲಿಗಿಟ್ಟುಬಿಡಬೇಕು ಎಂದುಕೊಂಡವರೇ ಹಲ್ಲುಕಚ್ಚಿ ನಿಂತರು.
.
ಇದು ಆಗಿದ್ದು ಬಸ್‌ನಲ್ಲಿ ಅಲ್ಲ, ಕ್ರೀಡಾಂಗಣದಲ್ಲಿ. ಅಂತಿಂಥ ಕ್ರೀಡಾಂಗಣದಲ್ಲಿ ಅಲ್ಲ. ಒಲಂಪಿಕÕ…ನ ಕ್ರೀಡಾಂಗಣದಲ್ಲಿ. 1968 ಮೆಕ್ಸಿಕೋದಲ್ಲಿ ಜರುಗಿದ ಓಲಂಪಿಕ್ಸ್ ಕ್ರೀಡಾಕೂಟ ಒಂದು ಇತಿಹಾಸಕ್ಕೆ ನಾಂದಿ ಹಾಡಿತು. ಓಲಂಪಿಕ್ಸ್‌ನ ಇತರೆ ಎÇÉಾ ಕ್ರೀಡಾಕೂಟಗಳದ್ದೇ ಒಂದು ತೂಕವಾದರೆ ಈ ಕ್ರೀಡಾಕೂಟದ್ದೇ ಇನ್ನೊಂದು ತೂಕ. ಈ ಕ್ರೀಡಾಕೂಟ ಅಂದಿಗೂ ಇಂದಿಗೂ “ಬ್ಲ್ಯಾಕ್ ಸಲ್ಯೂಟ್’ ಕ್ರೀಡಾ ಕೂಟ ಎಂದೇ ಹೆಸರುವಾಸಿ. ಆ ಕೂಟದ 200 ಮೀ. ಓಟದಲ್ಲಿ ಮೊದಲನೆಯ ಹಾಗೂ ಮೂರನೆಯ ಸ್ಥಾನ ಗೆದ್ದಿದ್ದು ಇಬ್ಬರು ಅಮೆರಿಕನ್ನರು. ಎರಡನೆಯ ಸ್ಥಾನ ಆಸ್ಟ್ರೇಲಿಯಾದ ಪಾಲು. ಇನ್ನೇನು ಪದಕ ಸ್ವೀಕಾರಕ್ಕೆ ಕೊರಳು ಒಡ್ಡಲು ಹೋಗಬೇಕು ಆಗ ಅಮೆರಿಕಾದ ಕಪ್ಪು ವರ್ಣೀಯರಾದ ಇಬ್ಬರು ಆಟಗಾರರಿಗೂ ತಮ್ಮ ಬದುಕಿನ ನೋವಿನ ಗಾಥೆ ಬಿಚ್ಚಿಟ್ಟುಬಿಡಬೇಕು ಅನಿಸಿತು. ಇಬ್ಬರೂ ತೀರ್ಮಾನಿಸಿದರು. ರಾಷ್ಟ್ರಗೀತೆ ಮೊಳಗುವಾಗ ನಾವು ಕಪ್ಪು ಪಟ್ಟಿ ಧರಿಸಿ ತಲೆಬಾಗಿಸಿ ನಿಂತುಬಿಡಬೇಕು ಎಂದು. ಇದು ಆಸ್ಟ್ರೇಲಿಯಾದ ಬಿಳಿಯ ಜನಾಂಗದ ಪೀಟರ್ ನಾರ್ಮನ್‌ಗೂ ಗೊತ್ತಾಗಿ ಹೋಯಿತು. ಆತ ಹೇಳಿದ- “ಬರೀ ನೀವೇನು, ನಾನೂ ಹಾಗೆ ಮಾಡಲು ಸಿದ್ಧ’. ಕಪ್ಪು ಜನಾಂಗದ ಆ ಇಬ್ಬರಲ್ಲೂ ಸಂತೋಷದ ಕಣ್ಣೀರು. ಪದಕ ಸಮಾರಂಭಕ್ಕೆ ವೇದಿಕೆ ಸಜ್ಜಾಯಿತು. ಮೊದಲ ಸ್ಥಾನ ಪಡೆದಿದ್ದ ಟಾಮಿ ಸ್ಮಿಥ್ ಕಪ್ಪು ಗ್ಲೋವ್ ಹಾಕಿದ್ದ ಬಲಗೈ ಎತ್ತಿ ಹಿಡಿದ. ಮೂರನೆಯ ಸ್ಥಾನ ಪಡೆದ ಜಾನ್ ಕಾರ್ಲೋಸ್ ಕಪ್ಪು ಪಟ್ಟಿ ಹಾಕಿದ್ದ ಎಡಗೈ ಎತ್ತಿ ಹಿಡಿದ. ಎರಡನೆಯ ಸ್ಥಾನ ಪಡೆದಿದ್ದ ಬಿಳಿಯ ಪೀಟರ್ ನಾರ್ಮನ್ ಎದೆಗೆ ಪ್ರತಿಭಟನೆಯ ಪದಕ ಸಿಕ್ಕಿಸಿಕೊಂಡಿದ್ದ. ಪದಕ ನೀಡಲು ಹೋದ ಗಣ್ಯರಿರಲಿ, ಇಡೀ ಓಲಂಪಿಕ್ ಕ್ರೀಡಾಂಗಣ ಬೆಚ್ಚಿ ಬಿತ್ತು. ಇಡೀ ಕ್ರೀಡಾಂಗಣವಿರಲಿ, ದೇಶಕ್ಕೆ ದೇಶವೇ ಬೆಚ್ಚಿಬಿತ್ತು. ಇಡೀ ದೇಶವಿರಲಿ, ಜಗತ್ತೇ ನಿಬ್ಬೆರಗಾಗಿ ನಿಂತಿತು. ಅಮೆರಿಕದಲ್ಲಿ ಜನಾಂಗ ನಿಂದನೆ, ತಾರತಮ್ಯ ಮಿತಿ ಮೀರಿತ್ತು. ಈಗಲ್ಲದೆ ಯಾವಾಗ? ಎಂದು ನಿರ್ಧರಿಸಿದ ಅಮೆರಿಕಾದ ಕ್ರೀಡಾಳುಗಳಿಗೆ ಇದೇ ಸಮಯ ಜಗತ್ತು ತಮ್ಮ ನೋವು ಕೇಳಲು ಅನಿಸಿತು. ಆದರೆ, ಹಾಗೆ ನಿರ್ಧಾರ ಮಾಡುವಾಗ ಅವರ ಬಳಿ ಇದ್ದದ್ದು ಒಂದೇ ಜೊತೆ ಕೈಗವುಸು. ಹಾಗಾಗಿ, ಅದನ್ನೇ ಇಬ್ಬರೂ ಹಂಚಿಕೊಂಡರು. ಹಾಗಾಗಿಯೇ ಇಬ್ಬರೂ ಬಲಗೈ ಎತ್ತಿ ಹಿಡಿಯಲು ಆಗಲಿಲ್ಲ. ಮೂರನೆಯ ಕ್ರೀಡಾಳುವಿಗೆ ಕೈ ಗವುಸು ಇಲ್ಲದ ಕಾರಣ ಆತ ಕೈ ಎತ್ತಲು ಆಗಲಿಲ್ಲ. ಆದರೆ, ಪ್ರತಿಭಟನೆಯ ಪದಕ ಹೊತ್ತಿದ್ದ. ಈ ಮೂವರೂ ಕ್ರೀಡಾಂಗಣದಿಂದ ಹೊರ ಬರುತ್ತಿದ್ದಂತೆಯೇ ಬಿಳಿ ಜಗತ್ತು ಅವರ ವಿರುದ್ಧ ಮುಗಿಬಿದ್ದಿತು. ಇನ್ನೆಂದೂ ಒಲಂಪಿಕ್ ಬೆಳಕು ಕಾಣಲಿಲ್ಲ. ಅವರ ಕ್ರೀಡಾ ಬದುಕನ್ನು ಹೊಸಕಿಹಾಕಲಾಯಿತು. ಟಾಮಿ ಸ್ಮಿಥ್ ಹೇಳಿದ- “ನಾವು ಪದಕ ಗೆದ್ದರೆ ಅಮೆರಿಕನ್, ಅಲ್ಲದೆ ಹೋದರೆ ಕಪ್ಪು ಅಮೆರಿಕನ್ ಇದ್ಯಾವ ನ್ಯಾಯ?’ ಜಗತ್ತು ಮತ್ತೆ ವರ್ಣಭೇದವನ್ನು ಚರ್ಚೆಗೆತ್ತಿಕೊಂಡಿತು. ನೋಡನೋಡುತ್ತಿದ್ದಂತೆಯೇ ಹಲವು ದೇಶಗಳು ಈ ಕ್ರೀಡಾಳುಗಳ ಬೆನ್ನಿಗೆ ನಿಂತರು.
ಇದೆÇÉಾ ನೆನಪಾಗಿದ್ದು ಗೆಳೆಯ ಸುದೇಶ್ ಮಹಾನ್‌ನಿಂದ. ದೇಶದ ಎÇÉೆಲ್ಲೂ ಆದಾಯ ತೆರಿಗೆ ಕಟ್ಟಲು ಸರ್ಕಾರ ಜಾಹಿರಾತುಗಳ ಫಲಕಗಳನ್ನು ನಿಲ್ಲಿಸಿತ್ತು. ಕೂಗಿ ಹೇಳುತ್ತಿತ್ತು- ನಿಮ್ಮ ಕಪ್ಪು ಹಣ ಬಿಳಿ ಮಾಡಿಕೊಳ್ಳಲು ಇದು ಕೊನೆಯ ಅವಕಾಶ. ಸುದೇಶ್ ಕೇಳಿದ, “”ಎಂಥ ನೀಚರಪ್ಪ.. ಕಪ್ಪು ಬಿಳಿ ಆಗುವುದು ಎಂದರೇನು ಬಿಳಿ ಮಾತ್ರ ಸರಿ ಎಂದೆ? ಶ್ರೇಷ್ಠವೆಂದೆ?”
ಹಾಗಾಗಿ, ನಾನು ಇಷ್ಟೆÇÉಾ ಹೇಳಬೇಕಾಯಿತು. – ಜಿ. ಎನ್. ಮೋಹನ್