Advertisement
ಈಶ್ವರನು ಹೆಂಡತಿಯನ್ನು ಕಳೆದುಕೊಂಡ ವಿಷಯವನ್ನು ಅರಿತುಕೊಂಡ ತಾರಕಾಸುರನೆಂಬ ದೈತ್ಯನು ಉಗ್ರವಾದ ತಪಸ್ಸಿನಲ್ಲಿ ಬ್ರಹ್ಮನನ್ನು ಮೆಚ್ಚಿಸಿ, ಈಶ್ವರನಿಗೆ ಇನ್ನು ಮುಂದೆ ಜನಿಸುವ ಪುತ್ರನಿಂದಲ್ಲದೇ ಅನ್ಯರಿಂದ ತನಗೆ ಮರಣ ಇಲ್ಲದಂತಹ ವರ ಪಡೆಯುತ್ತಾನೆ. ಅನಂತರ ಆ ವರಬಲದಿಂದ ಕೊಬ್ಬಿ ದೇವತೆಗಳನ್ನೆಲ್ಲ ಸೋಲಿಸಿ ಲೋಕಕಂಟಕನಾಗಿ ಮೆರೆಯುತ್ತಿರುತ್ತಾನೆ.
Related Articles
Advertisement
ತಾರಕಾಸುರನ ವಧೆಯಾದ ಅನಂ ತರ ದೇವೇಂದ್ರನು ತನ್ನ ಮಗಳಾದ ದೇವಸೇನೆ ಎಂಬವಳನ್ನು ಸುಬ್ರಹ್ಮಣ್ಯನಿಗೆ ಕೊಟ್ಟು ವಿವಾಹ ಮಾಡುತ್ತಾನೆ. ಅವರಿ ಬ್ಬರ ವಿವಾಹ ಮಹೋತ್ಸವವೂ ಕೂಡ ಮಾರ್ಗಶಿರ ಮಾಸದ ಶುಕ್ಲಪಕ್ಷದ ಷಷ್ಠಿ ತಿಥಿಯಂದೇ ನೆರವೇರುತ್ತದೆ. ಅನಂತರ ಸುಬ್ರಹ್ಮಣ್ಯನು ಪತ್ನಿಯೊಂದಿಗೆ ಕುಮಾರ ಧಾರಾ ನದಿಯ ಪಕ್ಕದಲ್ಲಿಯೇ ನೆಲೆ ನಿಲ್ಲುತ್ತಾನೆ. ಆ ಸ್ಥಳವೇ “ಸುಬ್ರಹ್ಮಣ್ಯ ಕ್ಷೇತ್ರ’ ಎಂದು ಪ್ರಸಿದ್ಧವಾಗುತ್ತದೆ.
ಸುಬ್ರಹ್ಮಣ್ಯನು ತಾರಕಾಸುರನನ್ನು ಕೊಂದ ಆ ಮಾರ್ಗಶಿರ ಮಾಸದ ಶುಕ್ಲ ಪಕ್ಷದ ಷಷ್ಠಿ ತಿಥಿಯಂದು “ಚಂಪಾ’ ಎಂಬ ಒಂದು ವಿಶೇಷ ಯೋಗ ಇದ್ದಿತ್ತು. ಹೀಗಾಗಿ ಅದನ್ನು “ಚಂಪಾಷಷ್ಠಿ’ ಎಂಬು ದಾಗಿ ಕರೆಯುತ್ತಾರೆ. ಜನರು ಇದನ್ನೇ “ಕುಕ್ಕೆ ಶ್ರೀ ಸುಬ್ರಹ್ಮಣ್ಯ ಷಷ್ಠಿà’ ಅಥವಾ “ಕುಕ್ಕೆ ಷಷ್ಠಿ’ ಅಥವಾ “ಸುಬ್ರಹ್ಮಣ್ಯ ಷಷ್ಠಿ’ ಅಥವಾ “ಸ್ಕಂದ ಷಷ್ಠಿ’ ಎಂದು ಕರೆಯುತ್ತಾರೆ.
“ಚಂಪಾ’ ಎಂಬುದು ಮಾಮೂಲಿ ಯಾಗಿ ನಾವು ಹೇಳುವ ವಿಷ್ಕಂಭವೇ ಮೊದಲಾದ 27 ಯೋಗಗಳ ಪಟ್ಟಿಯಲ್ಲಿ ಇಲ್ಲದ ಒಂದು ವಿಶೇಷ ಯೋಗ ಸಂಯೋಗವಾಗಿದೆ. ಹಿಂದೂಗಳ ತಿಥಿ ನಿರ್ಣಯ ಗ್ರಂಥಗಳಲ್ಲಿ “ಚಂಪಾ’ ಎಂಬ ವಿಶೇಷ ಯೋಗದ ಕುರಿತು ಹೀಗೆ ಬರೆಯಲಾಗಿದೆ. ಮಾರ್ಗಶಿರ ಮಾಸದ ಶುಕ್ಲ ಪಕ್ಷದ ಷಷ್ಠಿಯಂದು ರವಿವಾರ ವಾಗಿದ್ದು ವೈಧೃತಿ ಯೋಗ ಸಹಿತ ವಾಗಿದ್ದರೆ ಅದನ್ನು ಚಂಪಾಷಷ್ಠಿ ಎನ್ನು ತ್ತಾರೆ ಅಥವಾ ಮಾರ್ಗಶಿರ ಮಾಸದ ಶುಕ್ಲ ಪಕ್ಷದ ಷಷ್ಠಿಯಂದು ಮಂಗಳ ವಾರವಾಗಿದ್ದು ವಿಶಾಖಾ ನಕ್ಷತ್ರ ಸಹಿತವಾಗಿದ್ದರೆ ಅದನ್ನು ಚಂಪಾಷಷ್ಠಿ ಎನ್ನುತ್ತಾರೆ ಅಥವಾ ಮಾರ್ಗಶಿರ ಮಾಸದ ಶುಕ್ಲ ಪಕ್ಷದ ಷಷ್ಠಿಯಂದು ರವಿವಾರವಾಗಿದ್ದು ಶತಭಿಷಾ ನಕ್ಷತ್ರ ಸಹಿತವಾಗಿದ್ದರೆ ಅದನ್ನು ಚಂಪಾಷಷ್ಠಿ ಎನ್ನುತ್ತಾರೆ.
ಹೀಗೆ “ಚಂಪಾ’ ಎಂಬುದು ಅಂದು ಸುಬ್ರಹ್ಮಣ್ಯನು ತಾರಕಾಸುರನನ್ನು ಕೊಂದ ಆ “ಷಷ್ಠಿ’ ತಿಥಿಯಂದು ಇದ್ದ ಒಂದು “ಯೋಗವಿಶೇಷ’ಕ್ಕೆ ಇಟ್ಟ ಹೆಸರಾ ಗಿದೆ. ಅಂದು ಘಟಿಸಿದ ಅದೇ “ಚಂಪಾ’ ಯೋಗವು ಮರಳಿ ಬರುವುದು ಅಸಾಧ್ಯವೇ ಆಗಿದೆ. ಹೀಗಾಗಿ ಮಾರ್ಗ ಶಿರ ಮಾಸದ ಶುಕ್ಲಪಕ್ಷದ ಷಷ್ಠಿà ತಿಥಿಯನ್ನೇ “ಚಂಪಾಷಷ್ಠಿ’ ಎಂಬುದಾಗಿ ಪರಿಗಣಿಸುತ್ತೇವೆ. ಷಷ್ಠಿಯಂದು ಸುಬ್ರಹ್ಮಣ್ಯನಿಗೆ ವಿಶೇಷ ಪೂಜಾರ್ಚನೆ, ಹರಕೆಗಳನ್ನು ಸಲ್ಲಿಸಿದರೆ ನಮ್ಮನ್ನು ಕಾಡುವ ಸರ್ವ ದುರಿತ, ದೋಷ, ಸಂಕಷ್ಟಗಳೆಲ್ಲವೂ ನಿವಾರಣೆಯಾಗುತ್ತವೆ. ಅಲ್ಲದೆ ಸುಬ್ರಹ್ಮಣ್ಯನ ಆರಾಧನೆಯಿಂದ ವಿವಾಹ, ಸಂತಾನ ಭಾಗ್ಯ ಲಭಿಸುತ್ತದೆ ಎಂಬ ನಂಬಿಕೆ ಭಕ್ತರದ್ದಾಗಿದೆ.
ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಪರಶಿವನ ಪುತ್ರನಾದ ಷಣ್ಮುಖ ದೇವರನ್ನು ಸುಬ್ರಹ್ಮಣ್ಯ ಎಂಬ ಹೆಸರಿನಲ್ಲಿ ನಾಗ ರೂಪದಲ್ಲಿಯೇ ಆರಾಧಿಸಲಾಗುತ್ತದೆ. ಷಣ್ಮುಖ ದೇವರ ಪೂಜೆಗಿಂತ ಇಲ್ಲಿ ನಾಗಾರಾಧನೆಯೇ ಹೆಚ್ಚು ಮಹತ್ವವನ್ನು ಪಡೆದುಕೊಂಡಿದೆ. ಈ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರವು ನಾಗಗಳ ವಾಸಸ್ಥಾನವಾಗಿದೆ. ಇಲ್ಲಿ ಶ್ರೀ ಸುಬ್ರಹ್ಮಣ್ಯನಿಗೆ ಸಲ್ಲಿಸಿದ ಪೂಜೆಯು ಸರ್ಪರಾಜನಾದ ವಾಸುಕಿಗೆ ಸಲ್ಲುತ್ತದೆ. ಹಾಗಾಗಿ ಈ ಸ್ಥಳವು ಎಲ್ಲ ತರಹದ ನಾಗದೋಷಗಳ ಪರಿಹಾರದ ಸ್ಥಳವಾಗಿದೆ. ದೇಶದ ನಾನಾ ಕಡೆಗಳಿಂದ ಹರಕೆ ಹೊತ್ತ ಜನರು ಸರ್ಪಸಂಸ್ಕಾರ, ನಾಗಪ್ರತಿಷ್ಠೆ, ಆಶ್ಲೇಷಾ ಬಲಿ ಹಾಗೂ ಇತರ ಪೂಜೆಗಳನ್ನು ಸಲ್ಲಿಸಲು ಇಲ್ಲಿಗೆ ಬರುತ್ತಾರೆ.