Advertisement

ವಿಘ್ನನಿವಾರಕ ಗಣೇಶನನ್ನು ಮನೆಗೆ ಬರಮಾಡಿಕೊಂಡ ಸಚಿವೆ ಶಶಿಕಲಾ ಜೊಲ್ಲೆ

05:05 PM Sep 10, 2021 | Team Udayavani |

ಚಿಕ್ಕೋಡಿ: ಗೌರಿ ಸುತನಾದ ಶ್ರೀ ಗಣೇಶ ಚತುರ್ಥಿಯ ಪ್ರಯಕ್ತವಾಗಿ ಸಚಿವೆ ಶಶಿಕಲಾ ಜೊಲ್ಲೆ ಕುಟುಂಬದವರು ಗಜಮುಖನಿಗೆ ಪೂಜೆ ಸಲ್ಲಿಸಿ ಮನೆಗೆ ಬರಮಾಡಿಕೊಂಡರು.

Advertisement

ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಪಟ್ಟಣದ ನಿವಾಸದಲ್ಲಿ ಸರಳವಾಗಿ ಗಣಪತಿಯನ್ನು ಸ್ವಾಗತಿಸಿಕೊಂಡರು.

ಆಡಂಬರದ ಬಾಹ್ಯ ಭಕ್ತಿಗಿಂತ ಅಂತರಂಗದ ಶೃಂಗಾರ ಭಕ್ತಿಯೇ ಶ್ರೇಷ್ಠ’ ಎಂಬಂತೆ ಸರಳ ರೀತಿಯಲ್ಲಿ ಹಬ್ಬ ಆಚರಿಸಿದ್ದೇವೆ. ಸರ್ವರೂ ಕೋವಿಡ್ ನಿಯಮಗಳನ್ನು ತಪ್ಪದೇ ಪಾಲಿಸಿ, ಸರಳವಾಗಿ ಹಬ್ಬ ಆಚರಿಸಿ, ಆರೋಗ್ಯವಾಗಿರಿ ಎಂದು ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.

ವಿಘ್ನವಿನಾಶಕನ ಆಶೀರ್ವಾದಿಂದ ಸರ್ವರ ಸಂಕಷ್ಟಗಳು ದೂರವಾಗಿ, ಆರೋಗ್ಯ, ಯಶಸ್ಸು, ಸಂತೋಷ, ಸಮೃದ್ಧಿ ದಯಪಾಲಿಸಲಿ ಎಂದು ಪ್ರಾರ್ಥಿಸಿದರು.

ಸಂಸದರಾದ ಅಣ್ಣಾಸಾಹೇಬ ಜೊಲ್ಲೆ. ಆಶಾಜ್ಯೋತಿ ವಿಶೇಷ ಮಕ್ಕಳ ಶಾಲೆಯ ಅಧ್ಯಕ್ಷರಾದ ಕು. ಜ್ಯೋತಿಪ್ರಸಾದ ಜೊಲ್ಲೆ. ಬಸವಜ್ಯೋತಿ ಯೂಥ ಫೌಂಡೇಶನ ಅಧ್ಯಕ್ಷ್ಯರಾದ ಕು. ಬಸವಪ್ರಸಾದ ಜೊಲ್ಲೆ ಮುಂತಾದವರು ಇದ್ದರು.

Advertisement

ಇದನ್ನೂ ಓದಿ :ಬೆಳೆಗಳಿಗೆ ಇಲಿಗಳ ಕಾಟ ನಿವಾರಿಸುವಂತೆ ಗಣೇಶನಿಗೆ ಇಲಿ ಅರ್ಪಿಸಿ ಬೇಡಿಕೊಂಡ ಭಕ್ತ

Advertisement

Udayavani is now on Telegram. Click here to join our channel and stay updated with the latest news.

Next