Advertisement

ಗಾಂಜಾ ಸೇವನೆ ಕಾನೂನುಬದ್ಧಗೊಳಿಸಲು ಶಶಿ ತರೂರ್‌ ಸಲಹೆ

07:49 PM Jun 05, 2018 | Team Udayavani |

ಹೊಸದಿಲ್ಲಿ : ಸದಾ ಡಿಫ‌ರೆಂಟ್‌ ಆಗಿ ಆಲೋಚಿಸುವ ಆಧುನಿಕ ಚಿಂತಕ, ಕಾಂಗ್ರೆಸ್‌ ನಾಯಕ, ಶಶಿ ತರೂರ್‌ ಅವರಿಂದ ಇದೀಗ ಔಟ್‌ ಆಫ್ ದಿ ಬಾಕ್ಸ್‌ ವಿಚಾರ ಲಹರಿಯೊಂದು ಹೊರ ಬಂದಿದೆ. 

Advertisement

ಗಾಂಜಾ ಸೇವನೆಯನ್ನು ಕಾನೂನು ಬದ್ಧಗೊಳಿಸಬೇಕು; ಹಾಗೆ ಮಾಡಿದಲ್ಲಿ ದೇಶದಲ್ಲಿನ ಭ್ರಷ್ಟಾಚಾರ ಕಡಿಮೆಯಾಗುತ್ತದೆ ಎಂದು ತರೂರ್‌ ತಮ್ಮ ಅತ್ಯಾಧುನಿಕ ಚಿಂತನೆಯನ್ನು ಹರಿಯಬಿಟ್ಟಿದ್ದಾರೆ.

ಇನ್ನೂ ಒಂದು ಹೆಜ್ಜೆ ಮುಂದಿಟ್ಟಿರುವ ತರೂರ್‌, ಗಾಂಜಾ ಸೇವನೆಯಿಂದ ಮಾನವೀಯ ಮೌಲ್ಯಗಳು ಹೆಚ್ಚುತ್ತವೆ; ಇದರಿಂದ ಭ್ರಷ್ಟಾಚಾರ ನಿರ್ಮೂಲನೆ ಸಾಧ್ಯವಾಗುತ್ತದೆ ಎಂದೂ ಹೇಳಿದ್ದಾರೆ.

ತರೂರ್‌ ಅವರ ಪ್ರಕಾರ ದೇಶದಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಗಾಂಜಾ ಮಾರಾಟವಾಗುತ್ತಿದೆ; ಹಾಗಾಗಿ ಗಾಂಜಾ ಸೇವಿಸುವವರ ಸಂಖ್ಯೆಯೂ ಹೆಚ್ಚುತ್ತಿದೆ. ಗಾಂಜಾ ಸೇವನೆಯನ್ನು ಕಾನೂನುಬದ್ಧಗೊಳಿಸುವುದರಿಂದ ಸರಕಾರಕ್ಕೆ ಅತ್ಯಧಿಕ ಲಾಭ ಬರುತ್ತದೆ.

ತರೂರ್‌ ಅವರ ಚಿಂತನೆಯನ್ನು ಒಪ್ಪುವುದಾದರೆ ಎಲ್ಲ ಬಗೆಯ ಸಾಮಾಜಿಕ ಪಿಡುಗುಗಳಿಗೆ ಕಾರಣವಾಗುವ ಮತ್ತು ಸರಕಾರದ ಆದಾಯವನ್ನು ಹೆಚ್ಚಿಸಬಲ್ಲ  ಸಂಗತಿಗಳನ್ನು ಕಾನೂನುಬದ್ಧಗೊಳಿಸಬೇಕಾಗುತ್ತದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next