Advertisement

Kannada Cinema; ಶಶಿ ಹುಟ್ಟುಹಬ್ಬಕ್ಕೆ ‘ಮೆಹಬೂಬ’ ಪೋಸ್ಟರ್ ಬಿಡುಗಡೆ

03:23 PM Jan 10, 2024 | Team Udayavani |

ಬಿಗ್‌ ಬಾಸ್‌ ಖ್ಯಾತಿಯ ಶಶಿ ಅವರ ಹುಟ್ಟುಹಬ್ಬದ ವಿಶೇಷ ಉಡುಗೊರೆಯಾಗಿ “ಮೆಹಬೂಬ’ ಚಿತ್ರತಂಡ ಸಿನಿಮಾದ ಸ್ಪೆಷಲ್‌ ಪೋಸ್ಟರ್‌ ಬಿಡುಗಡೆ ಮಾಡಿದೆ. ಕೃಷಿ ಸಚಿವ ಚಲುವರಾಯಸ್ವಾಮಿ “ಮೆಹಬೂಬ’ ಸಿನಿಮಾದ ಈ ಸ್ಪೆಷಲ್‌ ಪೋಸ್ಟರ್‌ ಬಿಡುಗಡೆ ಮಾಡಿ ಇಡೀ ಚಿತ್ರತಂಡಕ್ಕೆ ಶುಭಾಶಯ ಕೋರಿದರು.

Advertisement

ಇದೇ ವೇಳೆ ಮಾತನಾಡಿದ ಸಿನಿಮಾದ ನಾಯಕ ನಟ ಶಶಿ, “”ಮೆಹಬೂಬ’ ನನಗೆ ಒಂದು ಎಮೋಷನಲ್‌ ಜರ್ನಿ. ಒಂದು ವಿಷಯವನ್ನು ಜನರಿಗೆ ತಲುಪಬೇಕು ಎನ್ನುವುದು ನಮ್ಮ ಸಿನಿಮಾ ಅಜೆಂಡವಾಗಿರುತ್ತದೆ. ವರ್ಷಕ್ಕೆ 200 ಸಿನಿಮಾಗಳು ಬಂದರೂ, ಹೆಸರು ಮಾಡೋದು 10 ರಿಂದ 15 ಸಿನಿಮಾಗಳು. ಆ 10-15 ಸಿನಿಮಾಗಳಲ್ಲಿ ನಮ್ಮೊಂದು ಒಂದು ಆಗಲಿ ಅನ್ನೋದು ನಮ್ಮ ಕನಸು. “ಮೆಹಬೂಬ’ ತುಂಬ ಖುಷಿ ತಂದುಕೊಟ್ಟ ಸಿನಿಮಾ. ಈಗಾಗಲೇ ಸಿನಿಮಾ ಬಹುತೇಕ ಕೆಲಸಗಳು ಪೂರ್ಣಗೊಂಡಿದ್ದು, ಇದೇ ಫೆಬ್ರವರಿ ವೇಳೆಗೆ ಸಿನಿಮಾವನ್ನು ಬಿಡುಗಡೆ ಮಾಡುವ ಯೋಚನೆಯಿದೆ’ ಎಂದರು.

ಕೇರಳದಲ್ಲಿ ನಡೆದ ನೈಜಘಟನೆಯೊಂದನ್ನು ಆಧರಿಸಿ “ಮೆಹಬೂಬ’ ಸಿನಿಮಾ ಸಿದ್ಧವಾಗುತ್ತಿದ್ದು, ಅನೂಪ್‌ ಆಂಟೊನಿ ನಿರ್ದೇಶನ ಮಾಡಿದ್ದಾರೆ. ಪಾವನಾ ಗೌಡ ಸಿನಿಮಾದಲ್ಲಿ ನಾಯಕಿಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next