Advertisement

ಕೃಷ್ಣನ್‌ ಲವ್‌ ಸ್ಟೋರಿ! ಡಾರ್ಲಿಂಗ್‌ ಕೃಷ್ಣ ಜೊತೆ ಶಶಾಂಕ್‌ ಸಿನಿಮಾ

02:54 PM Jun 13, 2022 | Team Udayavani |

“ಲವ್‌ ಮಾಕ್ಟೇಲ್‌’ ಹಾಗೂ “ಲವ್‌ ಮಾಕ್ಟೇಲ್‌-2′ ಚಿತ್ರಗಳ ಮೂಲಕ ಪ್ರೇಕ್ಷಕರನ್ನು ತನ್ನತ್ತ ಸೆಳೆದ ಡಾರ್ಲಿಂಗ್‌ ಕೃಷ್ಣ ಕೈಯಲ್ಲಿ ಈಗ ಸಾಲು ಸಾಲು ಸಿನಿಮಾಗಳಿವೆ. ಈಗ ಅವರ ಅಕೌಂಟ್‌ಗೆ ಮತ್ತೂಂದು ಸಿನಿಮಾ ಸೇರ್ಪಡೆಯಾಗಿದೆ. ಅದು ಶಶಾಂಕ್‌ ಸಿನಿಮಾ.

Advertisement

ಹೌದು, ನಿರ್ದೇಶಕ ಶಶಾಂಕ್‌ ಹೊಸ ಸಿನಿಮಾ ಅನೌನ್ಸ್‌ ಮಾಡಿದ್ದಾರೆ. ಕೃಷ್ಣ ನಾಯಕರಾಗಿರುವ ಈ ಚಿತ್ರವನ್ನು ಶಶಾಂಕ್‌ ನಿರ್ದೇಶಿಸುವ ಜೊತೆಗೆ ನಿರ್ಮಾಣ ಕೂಡಾ ಮಾಡುತ್ತಿದ್ದಾರೆ. ಕೃಷ್ಣ ಭಾನುವಾರ (ಜೂ.12) ಹುಟ್ಟುಹಬ್ಬ ಆಚರಿಸಿದ್ದು, ಈ ವೇಳೆ ಶಶಾಂಕ್‌ ತಮ್ಮ ಹೊಸ ಸಿನಿಮಾ ಅನೌನ್ಸ್‌ ಮಾಡಿದ್ದಾರೆ. ಚಿತ್ರ ಆಗಸ್ಟ್‌ನಿಂದ ಶುರುವಾಗಲಿದೆ.

ಸದ್ಯ ಶಶಾಂಕ್‌ ನಿರ್ದೇಶನದ “ಲವ್‌ 360′ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದ್ದು, ಎಲ್ಲವೂ ಅಂದುಕೊಂಡಂತೆ ಆದರೆ, ಮುಂದಿನ ತಿಂಗಳು ಬಿಡುಗಡೆಯಾಗಲಿದೆ. ಇದು ಕೂಡಾ ಔಟ್‌ ಅಂಡ್‌ ಔಟ್‌ ಲವ್‌ಸ್ಟೋರಿಯಾಗಿದ್ದು, ಹೊಸ ನಟ-ನಟಿಯರನ್ನಿಟ್ಟುಕೊಂಡು ಈ ಸಿನಿಮಾ ಮಾಡಿದ್ದಾರೆ ಶಶಾಂಕ್‌.

ಇದನ್ನೂ ಓದಿ:ಗಾಯಕ ಮೂಸೆವಾಲಾ ಕೊಲೆ ಪ್ರಕರಣ; ಪುಣೆ ಪೊಲೀಸರಿಂದ ಶೂಟರ್ ಜಾಧವ್ ಬಂಧನ

ಇತ್ತ ಕಡೆ ಕೃಷ್ಣ ಕೂಡಾ ಸಾಲು ಸಾಲು ಸಿನಿಮಾಗಳಲ್ಲಿ ಬಿಝಿಯಾಗಿದ್ದಾರೆ. “ದಿಲ್‌ ಪಸಂದ್‌’, “ಲವ್‌ ಬರ್ಡ್ಸ್‌’, “ಶುಗರ್‌ ಫ್ಯಾಕ್ಟರಿ’,”ಲಕ್ಕಿಮ್ಯಾನ್‌’, “ಮಿಸ್ಟರ್‌ ಬ್ಯಾಚುಲರ್‌’ ಚಿತ್ರಗಳು ಕೃಷ್ಣ ಕೈಯಲ್ಲಿದೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next