ಕನ್ನಡತಿ ಶರ್ಮಿಳಾ ಮಾಂಡ್ರೆ “ಮಿರತ್ತಲ್’ ಎಂಬ ತಮಿಳು ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದರು. ಈಗ 10 ವರ್‌ಷಗಳ ನಂತರ ‘ಮರ್ಡರ್ ಲೈವ್’ ಎಂಬ ಹಾಲಿವುಡ್ ಶೈಲಿಯ ಕನ್ನಡ ಮತ್ತು ತಮಿಳು ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ.
“ಮರ್ಡರ್ ಲೈವ್’ ಒಂದು ಸೈಕಲಾಜಿಕಲ್ ಕ್ರೆ„ಮ್ ಥ್ರಿಲ್ಲರ್ ಚಿತ್ರವಾಗಿದ್ದು, “ಬ್ಲೈಂಡ್ ಡೇಟ್’, “ಸ್ಕೈ ಹೈ’, “ಗ್ಲಿಚ್’ ಮುಂತಾದ ಹಾಲಿವುಡ್ ಚಿತ್ರಗಳನ್ನು ನಿರ್ದೇಶಿಸಿರುವ ನಿಕೋ ಮಾಸ್ತೋರಾಕಿಸ್ ಅವರ ಕಥೆಯನ್ನು ಆಧರಿಸಿದೆ.
ಸೈಕೋ ಕಿಲ್ಲರ್ ಮತ್ತು ನಾಲ್ವರು ಮಹಿಳೆಯರ ಸುತ್ತ ಸುತ್ತುವ ಈ ಚಿತ್ರದಲ್ಲಿ, ಕಷ್ಟದ ಪರಿಸ್ಥಿಯಲ್ಲಿ ಸಾಮಾನ್ಯ ಮನುಷ್ಯರೂ ಹೇಗೆ ಸಿಡಿದೆದ್ದು ಹೀರೋಗಳಾಗುತ್ತಾರೆ ಎಂದು ಹೇಳಲಾಗಿದೆ.
ಇದನ್ನೂ ಓದಿ:ಚಾಲಕ ರಹಿತ ಮೆಟ್ರೋಗೆ ಬೇಕು ಇನ್ನೊಂದು ವರ್ಷ
ಡಾಟ್‌ಕಾಮ್ ಎಂಟರ್ಟೈನ್ಮೆಂಟ್ ಸಂಸ್ಥೆಯಡಿ ಈ ಚಿತ್ರ ನಿರ್ಮಾಣವಾಗಿದ್ದು, ಮುರುಗೈಶ್ ನಿರ್ದೇಶನ ಮಾಡಿದ್ದಾರೆ.