Advertisement

ದೇಶದ್ರೋಹ ಪ್ರಕರಣ; ನಾಪತ್ತೆಯಾಗಿದ್ದ ಜೆಎನ್ ಯು ವಿದ್ಯಾರ್ಥಿ ಇಮಾಮ್ ಬಂಧನ

09:52 AM Jan 29, 2020 | Team Udayavani |

ನವದೆಹಲಿ/ಪಾಟ್ನಾ: ದೇಶದ್ರೋಹ ಪ್ರಕರಣ ಎದುರಿಸುತ್ತಿದ್ದು ಕಳೆದ ನಾಲ್ಕು ದಿನಗಳಿಂದ ತಲೆಮರೆಸಿಕೊಂಡಿದ್ದ ದಿಲ್ಲಿಯ ಜವಾಹರಲಾಲ್ ನೆಹರು ಯೂನಿರ್ವಸಿಟಿಯ ಸಂಶೋಧನಾ ವಿದ್ಯಾರ್ಥಿ ಶಾರ್ಜೀಲ್ ಇಮಾಮ್ ನನ್ನು ಪೊಲೀಸರು ಬಿಹಾರದ ಜೇಹೇನಾಬಾದ್ ನಲ್ಲಿ ಮಂಗಳವಾರ ಬಂಧಿಸಿದ್ದಾರೆ.

Advertisement

ದೇಶ ವಿರೋಧಿ ಹೇಳಿಕೆ ನೀಡಿದ್ದ ಇಮಾಮ್ ವೀಡಿಯೋ ಅಂತರ್ಜಾಲ ತಾಣಗಳಲ್ಲಿ ವೈರಲ್ ಆಗಿದ್ದು, ನಂತರ ಪೊಲೀಸರು ಶಾರ್ಜೀಲ್ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಿದ್ದರು. ನಮ್ಮ ಬಳಿ ಐದು ಲಕ್ಷ ಸಂಘಟಿತ ಜನರಿದ್ದರೆ ನಾವು ಈಶಾನ್ಯ ಭಾರತವನ್ನು ಶಾಶ್ವತವಾಗಿ ಇಲ್ಲವೇ ಒಂದು ತಿಂಗಳ ಮಟ್ಟಿಗಾದರು ಭಾರತದಿಂದ ಪ್ರತ್ಯೇಕವಾಗಿಸಬಹುದು. ಅಸ್ಸಾಂ ಅನ್ನು ಭಾರತದಿಂದ ಪ್ರತ್ಯೇಕಿಸುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ಇಮಾಮ್ ಪ್ರಚೋದನಕಾರಿ ಹೇಳಿಕೆ ನೀಡಿದ್ದ ಎಂದು ವರದಿ ತಿಳಿಸಿದೆ.

ಅಷ್ಟೇ ಅಲ್ಲ ಮಣಿಪುರ್, ಅರುಣಾಚಲ ಪ್ರದೇಶ ಮತ್ತು ಉತ್ತರಪ್ರದೇಶವನ್ನು ಕೂಡಾ ಭಾರತದಿಂದ ಬೇರ್ಪಡಿಸಬೇಕು ಎಂದು ಹೇಳಿಕೆ ನೀಡಿದ್ದ. ಈ ಪ್ರಕರಣದ ಹಿನ್ನೆಲೆಯಲ್ಲಿ ಇಮಾಮ್ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಾಗಿತ್ತು. ದಿಲ್ಲಿ ಪೊಲೀಸರು ಆರೋಪಿ ಪತ್ತೆಗಾಗಿ ಐದು ತಂಡಗಳನ್ನು ರಚಿಸಿತ್ತು ಎಂದು ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next