Advertisement

ಇಂಟರ್‌ನ್ಯಾಶನಲ್‌ ಲೀಗ್‌ ಟಿ20: ಶಾರ್ಜಾ ವಾರಿಯರ್ ತಂಡದಲ್ಲಿ ಸ್ಟಾರ್‌ ಆಟಗಾರರು

10:46 PM Aug 19, 2022 | Team Udayavani |

ಶಾರ್ಜಾ: ಚೊಚ್ಚಲ ಇಂಟರ್‌ನ್ಯಾಶನಲ್‌ ಲೀಗ್‌ ಟಿ20 (ಐಎಲ್‌ಟಿ20) ಪಂದ್ಯಾವಳಿಗಾಗಿ ಪ್ರಕಟ ಗೊಂಡ ಶಾರ್ಜಾ ವಾರಿಯರ್ ತಂಡದಲ್ಲಿ ಸ್ಟಾರ್‌ ಕ್ರಿಕೆಟಿಗರನೇಕರು ಸ್ಥಾನ ಸಂಪಾದಿಸಿದ್ದಾರೆ.

Advertisement

ಮೊಯಿನ್‌ ಅಲಿ, ಡೇವಿಡ್‌ ಮಲಾನ್‌, ಎವಿನ್‌ ಲೂಯಿಸ್‌, ಮೊಹಮ್ಮದ್‌ ನಬಿ, ಕ್ರಿಸ್‌ ವೋಕ್ಸ್‌ ಮೊದಲಾದವರು ಈ ತಂಡದಲ್ಲಿದ್ದಾರೆ.

ಇವರಲ್ಲಿ ಮೊಯಿನ್‌ ಅಲಿ ಇತ್ತೀಚೆಗೆ ದಕ್ಷಿಣ ಆಫ್ರಿಕಾದ ನೂತನ ಟಿ20 ಲೀಗ್‌ನಲ್ಲಿ ಜೊಹಾನ್ಸ್‌ಬರ್ಗ್‌ ಸೂಪರ್‌ ಕಿಂಗ್ಸ್‌ ತಂಡಕ್ಕೂ ಸೇರ್ಪಡೆಯಾಗಿದ್ದಾರೆ.

ಈ ಎರಡೂ ಕೂಟಗಳು ಏಕಕಾಲದಲ್ಲಿ ನಡೆಯುವುದರಿಂದ (ಮುಂದಿನ ಜನವರಿ-ಫೆಬ್ರವರಿ) ಅಲಿ ಸೇರಿದಂತೆ ಕೆಲವು ಆಟಗಾರರಿಗೆ ಸಮಸ್ಯೆ ಎದುರಾಗಬಹುದು.

ಶಾರ್ಜಾ ವಾರಿಯರ್ ತಂಡ: ಮೊಯಿನ್‌ ಅಲಿ, ಡೇವಿಡ್‌ ಮಲಾನ್‌, ಎವಿನ್‌ ಲೂಯಿಸ್‌, ಮೊಹಮ್ಮದ್‌ ನಬಿ, ಕ್ರಿಸ್‌ ವೋಕ್ಸ್‌, ನೂರ್‌ ಅಹ್ಮದ್‌, ರೆಹಮಾನುಲ್ಲ ಗುರ್ಬಜ್‌, ನವೀನ್‌ ಉಲ್‌ ಹಕ್‌, ಟಾಮ್‌ ಕ್ಯಾಡ್‌ಮೋರ್‌, ಕ್ರಿಸ್‌ ಬೆಂಜಮಿನ್‌, ಡ್ಯಾನಿ ಬ್ರಿಗ್ಸ್‌, ಮಾರ್ಕ್‌ ಡೇಯಲ್‌, ಬಿಲಾಲ್‌ ಖಾನ್‌, ಜೆಜೆ ಸ್ಮಿಟ್‌.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next