Advertisement

ಪನಾಮಾ ಪೇಪರ್ ತನಿಖಾ ತಂಡದೆದುರು ಹಾಜರಾದ ಷರೀಫ್ ಪುತ್ರ

03:11 PM Jul 04, 2017 | Team Udayavani |

ಇಸ್ಲಾಮಾಬಾದ್‌ : ಪಾಕ್‌ ಪ್ರಧಾನಿ ನವಾಜ್‌ ಷರೀಫ್ ಅವರ ಹಿರಿಯ ಪುತ್ರ ಹುಸೇನ್‌ ನವಾಜ್‌ ಅವರು ಇಂದು ಮಂಗಳವಾರ ಪನಾಮಾ ಗೇಟ್‌ ಭ್ರಷ್ಟಾಚಾರದ ಹಗರಣಗಳಿಗೆ ಸಂಬಂಧಿಸಿ ಆರನೇ ಬಾರಿ ಜಂಟಿ ತನಿಖಾ ತಂಡದ ಮುಂದೆ ಹಾಜರಾಗಿದ್ದಾರೆ. 

Advertisement

ಹುಸೇನ್‌ ನವಾಜ್‌ ಅವರು ಇಲ್ಲಿನ ಫೆಡರಲ್‌ ಜ್ಯುಡೀಶಿಯಲ್‌ ಅಕಾಡೆಮಿಗೆ ಆಗಮಿಸಿ ಸುಪ್ರೀಂ ಕೋರ್ಟ್‌ನಿಂದ ನೇಮಕಗೊಂಡಿರುವ ಆರು ಸದಸ್ಯರ ಜೆಐಟಿ ಎದುರು ತನಿಖೆಗೆ ಆರನೇ ಬಾರಿ ಹಾಜರಾದರು.

ಕಳೆದ ಎಪ್ರಿಲ್‌ 20ರಂದು ಸುಪ್ರೀಂ ಕೋರ್ಟ್‌ ಪನಾಮಾ ಪೇಪರ್‌ ಕೇಸ್‌ನಲ್ಲಿ ತೀರ್ಪು ನೀಡುವಾಗ ಜಂಟಿ ತನಿಖಾ ತಂಡವೊಂದನ್ನು ರೂಪಿಸಿ ಪ್ರಧಾನಿ, ಅವರ ಪುತ್ರರು ಮತ್ತು ಅಗತ್ಯವಿರುವ ಇತರ ಯಾವುದೇ ವ್ಯಕ್ತಿಗೆ ಸಮನ್ಸ್‌ ನೀಡಿ ತನಿಖೆಗೆ ಒಳಪಡಿಸುವ ಅಧಿಕಾರವನ್ನು ನೀಡಿತ್ತು. 

ಪನಾಮಾ ಪೇಪರ್‌ ಲೀಕ್‌ ಮೂಲಕ ಪಾಕ್‌ ಪ್ರಧಾನಿ ನವಾಜ್‌ ಷರೀಫ್ ಮತ್ತು ಅವರ ಕುಟುಂಬ ಸದಸ್ಯರು ವಿದೇಶಗಳಲ್ಲಿ ಹಲವಾರು ಖೊಟ್ಟಿ ಕಂಪೆನಿಗಳನ್ನು ಸ್ಥಾಪಿಸಿ ಕೋಟ್ಯಂತರ ರೂ. ಮೌಲ್ಯದ ಆಸ್ತಿ ಪಾಸ್ತಿ ಮಾಡಿಟ್ಟಿರುವುದು ಬೆಳಕಿಗೆ ಬಂದಿತ್ತು. ಈ ಹಗರಣದಿಂದಾಗಿ ನವಾಜ್‌ ಷರೀಫ್ ಅವರ ರಾಜಕೀಯ ಭವಿಷ್ಯಕ್ಕೇ ಗ್ರಹಣ ಉಂಟಾಗುವುದೆಂದು ತಿಳಿಯಲಾಗಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next