Advertisement

ಮುಂಬೈ ಶೇರುಪೇಟೆ ಸೂಚ್ಯಂಕ 470 ಅಂಕ ಕುಸಿತ; ಹೂಡಿಕೆದಾರರಿಗೆ ಲಕ್ಷಾಂತರ ಕೋಟಿ ರೂ. ನಷ್ಟ

09:28 AM Sep 20, 2019 | Team Udayavani |

ಮುಂಬೈ: ವಿದೇಶಿ ಬಂಡವಾಳದ ಹೊರಹರಿವು, ಬ್ಯಾಂಕಿಂಗ್, ಮೆಟಲ್ ಹಾಗೂ ಐಟಿ ಶೇರುಗಳ ವಹಿವಾಟಿನ ಕುಸಿತದಿಂದಾಗಿ ಗುರುವಾರ ದೇಶಿಯ ಶೇರುಪೇಟೆಯ ಸೆನ್ಸೆಕ್ಸ್ ಸೂಚ್ಯಂಕ 470 ಅಂಕಗಳ ಭಾರೀ ಕುಸಿತದೊಂದಿಗೆ 36,093 ಅಂಕಗಳೊಂದಿಗೆ ವಹಿವಾಟು ಅಂತ್ಯಕಂಡಿದೆ.

Advertisement

ಅದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆ ನಿಫ್ಟಿ ಸೂಚ್ಯಂಕ ಕೂಡಾ 136 ಅಂಕಗಳ ಕುಸಿತದೊಂದಿಗೆ 10,705 ಅಂಕಗಳೊಂದಿಗೆ ವಹಿವಾಟು ಮುಕ್ತಾಯವಾಗಿದೆ. ಇದು ಕಳೆದ ಫೆಬ್ರುವರಿ ತಿಂಗಳ ನಂತರ ಕಂಡ ಭಾರೀ ಕುಸಿತವಾಗಿದೆ.

ಶೇರು ಸೂಚ್ಯಂಕ ಕುಸಿತದಿಂದಾಗಿ ರಿಯಯನ್ಸ್ ಇಂಡಸ್ಟ್ರೀಸ್, ಐಸಿಐಸಿಐ ಬ್ಯಾಂಕ್, ಇನ್ಫೋಸಿಸ್, ಟಾಟಾ ಕನ್ಸಲ್ ಟೆನ್ಸಿ ಸರ್ವೀಸಸ್ ಮತ್ತು ಇಂಡಸ್ ಲ್ಯಾಂಡ್ ಬ್ಯಾಂಕ್ ನ ಶೇರುಗಳ ಮಾರಾಟದಲ್ಲಿ ಭಾರೀ ಕುಸಿತ ಕಂಡಿದೆ.

ಇಂದಿನ ವಹಿವಾಟಿನಲ್ಲಿ ಟಾಟಾ ಮೋಟಾರ್ಸ್, ಎಚ್ ಡಿಎಫ್ ಸಿ ಬ್ಯಾಂಕ್, ಭಾರ್ತಿ ಏರ್ ಟೆಲ್ ಮತ್ತು ಏಷಿಯನ್ ಪೆಯಿಂಟ್ಸ್ ಶೇರುಗಳು ಲಾಭ ಕಂಡಿವೆ. ಗುರುವಾರದ ಶೇರುಪೇಟೆ ಸೂಚ್ಯಂಕ ಕುಸಿತದಿಂದ ಹೂಡಿಕೆದಾರರಿಗೆ ಒಟ್ಟು 1.65 ಲಕ್ಷ ಕೋಟಿ ರೂಪಾಯಿಯಷ್ಟು ನಷ್ಟ ಸಂಭವಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next