Advertisement

ಪಡಿತರ ದಲ್ಲಾಳಿ ಪಾಲು –ಆಡಳಿತ ವೈಫ‌ಲ್ಯ: ಕೋಟ ಶ್ರೀನಿವಾಸ ಪೂಜಾರಿ

12:46 PM Feb 28, 2017 | Team Udayavani |

ಸುಳ್ಯ: ಬಡವರ ಪಡಿತರ ದುರ್ಬಳಕೆ ಆಗುತ್ತಿದೆ.ಇದನ್ನು ಕಂಡೂ ಸರಕಾರ ಸುಮ್ಮನಿದೆ. ಸರಕಾರ ರಾಜೀನಾಮೆ ಕೊಡಲಿ ಎಂದು ನಾನು ಕೇಳುತ್ತಿಲ್ಲ. ಯಾಕೆಂದರೆ ದುರಾಡಳಿತದಿಂದ ಸರಕಾರ ಬಹುದಿನಗಳ ಕಾಲ ಉಳಿಯಲಿಕ್ಕಿಲ್ಲ ಎಂದು ವಿಧಾನಪರಿಷತ್‌ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಪತ್ರಿಕಾಗೋಷ್ಠಿಯಲ್ಲಿ ಟೀಕಿಸಿದರು.

Advertisement

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಹಿಂದೂ ಕಾರ್ಯಕರ್ತರನ್ನು ಹುಡುಕಿ ಹುಡುಕಿ ಕೊಚ್ಚಿ ಕೊಲೆ ಮಾಡಲಾಗುತ್ತಿದೆ. ಪ್ರಜಾಪ್ರಭುತ್ವ ರೀತಿಯಲ್ಲಿ ಪ್ರಶ್ನಿಸಲು ಹರತಾಳ ಮಾಡಲು ಹೊರಟರೆ ಅವರಿಗೆ ಚಪ್ಪಲಿಯಲ್ಲಿ ಹೊಡೆಯಬೇಕು ಎಂದು ಸಚಿವ ಖಾದರ್‌ ಹೇಳಿರುವುದು ಈ ಜಿಲ್ಲೆಯ ದುರಂತ ಎಂದು ಟೀಕಿಸಿ ಜಿಲ್ಲೆಯಲ್ಲಿ ಈಗಾಗಲೇ ಹತ್ಯೆಗೀಡಾದವರನ್ನು ಉಲ್ಲೇಖೀಸಿದರು.

ಕರಾವಳಿಯ 7 ಶಾಸಕರು ಹಿಂದೂಗಳ ಓಟಿನಿಂದಲೇ ಗೆದ್ದು ಬಂದಿದ್ದೇವೆ ಎಂಬುದನ್ನು ಮರೆತಿದ್ದಾರೆ. ಆಹಾರ ಸಚಿವ ಯು.ಟಿ. ಖಾದರ್‌ ಅವರು ತಮ್ಮ ನಿಲುವೇನು ಎಂಬುದನ್ನು ಸ್ಪಷ್ಟಪಡಿಸಬೇಕೆಂದು ಆಗ್ರಹಿಸಿದರು.

ರಾಜ್ಯದಲ್ಲಿ 12 ಲಕ್ಷ ಮಂದಿ ಬಿಪಿಎಲ್‌ ಕಾರ್ಡ್‌ನಿಂದ ವಂಚಿತರಾಗಿದ್ದಾರೆ. ದ.ಕ. ಜಿಲ್ಲೆಯಲ್ಲಿ 13,200 ಮಂದಿಯ ಕಾರ್ಡು ಬ್ಲಾಕ್‌ ಆಗಿದೆ. 8,160 ಕಾರ್ಡುಗಳು ಆಧಾರ್‌ ಲಿಂಕ್‌ ಇಲ್ಲದೆ ತಡೆಹಿಡಿಯಲ್ಪಟ್ಟಿವೆ ಎಂದು ಕೋಟ ಅವರು ಆರೋಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next