Advertisement

ಫೇಸ್‌ಬುಕ್‌ ದಾನಿಗಳ ಉತ್ಸವ!

02:55 PM Oct 06, 2018 | |

ಲೈಕ್‌, ಕಾಮೆಂಟುಗಳಷ್ಟೇ ಫೇಸ್‌ಬುಕ್‌ ಅಲ್ಲ. ನಗುವಿನ ಮೂಲಕ ಮಾನವೀಯ ಪರಿಮಳವನ್ನು ಪಸರಿಸುವ ಪುಟ್ಟ ಪ್ರಪಂಚವೊಂದು ಅಲ್ಲಿದೆ. “ಶೇರ್‌ ಎ ಸ್ಮೈಲ್‌ ‘ ಎಂಬ ತಂಡವು ಹಾಗೆ ನಗುತ್ತಲೇ, ಫೇಸ್‌ಬುಕ್‌ ದಾನಿಗಳು ಹಂಚಿದ ವಸ್ತುಗಳನ್ನು “ದಾನ್‌ ಉತ್ಸವ್‌’ ಎಂಬ ಹೆಸರಿನಲ್ಲಿ ಅಸಹಾಯಕರಿಗೆ ಮುಟ್ಟಿಸುತ್ತಿದೆ!

Advertisement

  “ಶೇರ್‌ ಎ ಸ್ಮೈಲ್‌ ‘! ಇದು ಫೇಸ್‌ಬುಕ್‌ ಮೂಲಕ ಪರಿಚಯವಾದ ಸಹೃದಯರ ಗುಂಪು. 2016ರಿಂದ ಈ ತಂಡ, ತನ್ನದೇ ರೀತಿಯಲ್ಲಿ ನಗುವನ್ನು ಪಸರಿಸುವ ಕೈಂಕರ್ಯದಲ್ಲಿದೆ. ಈ ತಂಡದ ರೂವಾರಿ, ಸಮೀರ್‌ ಹಸನ್‌ ವೃತ್ತಿಯಲ್ಲಿ ಎಂಜಿನಿಯರ್‌. ಇತರ ಯುವಕರಂತೆ ಸಮೀರ್‌, ವೀಕೆಂಡ್‌ಗಳನ್ನು ಮೋಜು- ಮಸ್ತಿಯಲ್ಲಿ ಕಳೆಯುತ್ತಿರಲಿಲ್ಲ. ರಜೆ ಬಂದರೆ ಸಾಕು, ಅನಾಥಾಶ್ರಮ, ಕ್ಯಾನ್ಸರ್‌ ಸೆಂಟರ್‌, ವೃದ್ಧಾಶ್ರಮಗಳಿಗೆ ಹೋಗಿ, ಅಲ್ಲಿನವರೊಂದಿಗೆ ಸಮಯ ಕಳೆಯುತ್ತಿದ್ದರು. ಅಷ್ಟೇ ಅಲ್ಲದೆ, ತಮ್ಮ ವೀಕೆಂಡ್‌ ದಿನಚರಿಯನ್ನು ಎಫ್ಬಿಯಲ್ಲಿ ಹಂಚಿಕೊಳ್ಳುತ್ತಿದ್ದರು. ಅದನ್ನು ನೋಡಿ ಪ್ರೇರಿತರಾದ ಕೆಲವರು ಇವರ ಜೊತೆಗೆ ಸೇರಿಕೊಂಡರು. ಹಾಗೆ ಶುರುವಾಗಿದ್ದೇ “ಶೇರ್‌ ಎ ಸೆ¾„ಲ್‌’ ತಂಡ. ಸದ್ಯ ಬೆಂಗಳೂರಿನಲ್ಲಿ 65 ಸದಸ್ಯರಿದ್ದರೆ, ಇವರಿಂದ ಪ್ರೇರಣೆ ಪಡೆದ ಮತ್ತಷ್ಟು ಮಂದಿ, ಪುಣೆ, ಹೈದರಾಬಾದ್‌, ಕೋಲ್ಕತ್ತಾ, ದೆಹಲಿಯಲ್ಲಿಯೂ ಖುಷಿ ಹಂಚುವ ಕೆಲಸ ಮಾಡುತ್ತಿದ್ದಾರೆ. 

ದಾನ್‌ ಉತ್ಸವ್‌
ದಸರಾ, ದೀಪಾವಳಿ,ರಂಜಾನ್‌ನಂತೆಯೇ ದೇಶಾದ್ಯಂತ, ಅಕ್ಟೋಬರ್‌ 2-8ರವರೆಗೆ “ದಾನ ಉತ್ಸವ’ ಆಚರಿಸಲಾಗುತ್ತದೆ. ಈ ಮೊದಲು ಚಾಲ್ತಿಯಲ್ಲಿದ್ದ “ಜಾಯ್‌ ಆಫ್ ಗಿವಿಂಗ್‌ ವೀಕ್‌’ಗೆ ಎನ್‌ಜಿಓಗಳು, ಕಾರ್ಪೋರೇಟ್‌ ಕಂಪನಿಗಳು ಅಭೂತಪೂರ್ವವಾಗಿ ಬೆಂಬಲಿಸಿದ ಮೇಲೆ, ಅದರ ಮುಂದುವರಿದ ಭಾಗವಾಗಿ “#ದಾನ್‌ ಉತ್ಸವ್‌’ ಆರಂಭಿಸಲಾಗಿದೆ. ಕಳೆದ 10 ವರ್ಷಗಳಿಂದ ಲಕ್ಷಾಂತರ ಜನ ಈ ಉತ್ಸವದಲ್ಲಿ ಪಾಲ್ಗೊಂಡಿದ್ದಾರೆ. “ಶೇರ್‌ ಎ ಸೆ¾„ಲ್‌’ ತಂಡವೂ ಈ ಉತ್ಸವದಲ್ಲಿ ಭಾಗಿಯಾಗಿದೆ.

1 ತಿಂಗಳ ದಿನಸಿ, ಬಟ್ಟೆ ವಿತರಣೆ
ಸಮೀರ್‌ ಮತ್ತು ತಂಡ, ಜೆ.ಪಿ.ನಗರದ 7ನೇ ಫೇಸ್‌ನಲ್ಲಿ ವಾಸವಾಗಿರೋ ಸುಮಾರು 40 ಕಟ್ಟಡ ಕಾರ್ಮಿಕ ಕುಟುಂಬಗಳಿಗೆ ಒಂದು ತಿಂಗಳಿಗೆ ಬೇಕಾಗುವ ಅಡುಗೆ ಸಾಮಗ್ರಿ, ಹೊಸ ಬಟ್ಟೆ, ಬೆಡ್‌ಶೀಟ್‌, ಸ್ಯಾನಿಟರಿ ಪ್ಯಾಡ್‌ಗಳನ್ನು ದಾನವಾಗಿ ನೀಡುತ್ತಿದೆ. ಈ ಎಲ್ಲವೂ ಸಾಮಗ್ರಿಗಳನ್ನು ಫೇಸ್‌ಬುಕ್‌ ದಾನಿಗಳಿಂದ ಸಂಗ್ರಹಿಸಲಾಗಿದೆ. ದಾನ್‌ ಉತ್ಸವದ ವಿಷಯವನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಾಗ, ನಿರೀಕ್ಷೆಗೂ ಮೀರಿದ ಸ್ಪಂದನೆ ಸಿಕ್ಕಿತು. ಸಮೀರ್‌ ಮನೆಯ ವಿಳಾಸಕ್ಕೆ ಆನ್‌ಲೈನ್‌ ಮೂಲಕ ವಸ್ತುಗಳನ್ನು ಕಳುಹಿಸಿದರು. ಈ ವಸ್ತುಗಳನ್ನು ಕಾರ್ಮಿಕ ಕುಟುಂಬಕ್ಕೆ ಹಸ್ತಾಂತರಿಸುವ ಹಾಗೂ ದಾನಿಗಳಿಗೆ ಧನ್ಯವಾದ ಹೇಳಲು ಈ ಕಾರ್ಯಕ್ರಮ ನಡೆಯುತ್ತಿದೆ.

ನಾವು ಯಾರಿಂದಲೂ ನೇರವಾಗಿ ಹಣ ಪಡೆಯುವುದಿಲ್ಲ. ದಾನಿಗಳಿಂದ ಸಂಗ್ರಹವಾದ ವಸ್ತುಗಳನ್ನು ನಾವು ಖುದ್ದಾಗಿ ಹೋಗಿ ಅಶಕ್ತರಿಗೆ ನೀಡಿ, ಅವರೊಂದಿಗೆ ಸಮಯ ಕಳೆದು ಬರುತ್ತೇವೆ. ಯಾರಿಗೆ ತಲುಪಿಸಿದ್ದೇವೆ ಎಂದು ಮಾಹಿತಿಯನ್ನು ದಾನಿಗಳಿಗೆ ತಿಳಿಸುತ್ತೇವೆ. 
– ಸಮೀರ್‌ ಹಸನ್‌, “ಶೇರ್‌ ಎ ಸ್ಮೈಲ್‌’ ರೂವಾರಿ

Advertisement

ಎಲ್ಲಿ?: ಅ.6, ಶನಿವಾರ ಬೆಳಗ್ಗೆ 10-12
ಯಾವಾಗ?: ಕೀರ್ತಿ ಕನ್ವೆನ್ಷನ್‌ ಹಾಲ್‌, ನಂ.16/23, ಕೊತೂ°ರು ದಿಣ್ಣೆ ಮುಖ್ಯರಸ್ತೆ, ಜೆ.ಪಿ.ನಗರ 8ನೇ ಫೇಸ್‌

ಪ್ರಿಯಾಂಕ
 

Advertisement

Udayavani is now on Telegram. Click here to join our channel and stay updated with the latest news.

Next