Advertisement

ಶಾರ್ದೂಲ್ ಠಾಕೂರ್ ಗೆ ಗೇಟ್ ಪಾಸ್ ಕೊಟ್ಟಿತೆ ಡೆಲ್ಲಿ ಕ್ಯಾಪಿಟಲ್ಸ್?

09:42 AM Oct 27, 2022 | Team Udayavani |

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ ಮಿನಿ ಹರಾಜು ಪ್ರಕ್ರಿಯೆಗೆ ತಯಾರಿ ನಡೆಯುತ್ತಿದೆ. ಈ ನಡುವೆ ಫ್ರಾಂಚೈಸಿಗಳು ತಮಗೆ ಬೇಡವಾದ ಆಟಗಾರರನ್ನು ಬಿಡುಗಡೆ ಮಾಡಲು ಸುಮಾರು 20 ದಿನಗಳು ಉಳಿದಿದೆ. ರಿಲೀಸ್ ಆಗಲಿರುವ ಆಟಗಾರರ ಬಗ್ಗೆ ಹಲವು ಊಹಾಪೋಹಗಳು ಕೇಳಿಬರುತ್ತಿದ್ದು, ಈ ಪೈಕಿ ಪ್ರಮುಖವಾಗಿ ಶಾರ್ದೂಲ್ ಠಾಕೂರ್ ಹೆಸರು ಮುನ್ನಲೆಯಲ್ಲಿದೆ.

Advertisement

ಪ್ರಸ್ತುತ ವಿಶ್ವಕಪ್ ತಂಡದೊಂದಿಗೆ ಆಸ್ಟ್ರೇಲಿಯಾದಲ್ಲಿರುವ ಭಾರತೀಯ ಆಲ್‌ರೌಂಡರ್ ದೆಹಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯಿಂದ ಬಿಡುಗಡೆಯಾಗುವ ಸಾಧ್ಯತೆಯಿದೆ.

ಶಾರ್ದೂಲ್ ಠಾಕೂರ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡವು 10.75 ಕೋಟಿ ರೂ ಗೆ ಖರೀದಿ ಮಾಡಿತ್ತು. ಅವರು ಕಳೆದ ಋತುವಿನಲ್ಲಿ ಆಡಿದ 14 ಪಂದ್ಯಗಳಲ್ಲಿ ಕೇವಲ 120 ರನ್ ಗಳನ್ನು ಗಳಿಸಿದರೆ, 15 ವಿಕೆಟ್ ಗಳನ್ನು ಕಿತ್ತಿದ್ದಾರೆ.

ಇದನ್ನೂ ಓದಿ:ರಾಮ್ ರಹೀಮ್ ಸಿಂಗ್ ಗೆ ಪೆರೋಲ್ : ದೆಹಲಿ ಮಹಿಳಾ ಆಯೋಗ ಆಕ್ರೋಶ

ಠಾಕೂರ್ ಅವರನ್ನು ದೆಹಲಿ ಫ್ರಾಂಚೈಸಿ ಬಿಡುಗಡೆ ಮಾಡಬಹುದೆಂದು ವರದಿಯಾಗಿದೆ. ಅಲ್ಲದೆ ಹರಾಜಿನಲ್ಲಿ ಅವರನ್ನು ಕಡಿಮೆ ಬೆಲೆಗೆ ಮರಳಿ ಖರೀದಿಸಲು ಪ್ರಯತ್ನಿಸಬಹುದು. ಠಾಕೂರ್ ಜೊತೆಗೆ ವಿಕೆಟ್‌ ಕೀಪರ್-ಬ್ಯಾಟರ್ ಕೆಎಸ್ ಭರತ್ ಮತ್ತು ಬ್ಯಾಟರ್ ಮಂದೀಪ್ ಸಿಂಗ್ ಕೂಡ ಬಿಡುಗಡೆಯಾಗಬಹುದು ಎನ್ನಲಾಗಿದೆ. ಕಳೆದ ಹರಾಜಿನಲ್ಲಿ ಇವರಿಬ್ಬರನ್ನು ಕ್ರಮವಾಗಿ 2 ಕೋಟಿ ಮತ್ತು 1.10 ಕೋಟಿಗೆ ಖರೀದಿಸಲಾಗಿತ್ತು.

Advertisement

ನಾಯಕ ರಿಷಭ್ ಪಂತ್ ಅವರೇ ವಿಕೆಟ್ ಕೀಪಿಂಗ್‌ ಜವಾಬ್ದಾರಿ ನಿಭಾಯಿಸುವಾಗ, ದೇಶದ ಅತ್ಯುತ್ತಮ ಕೀಪರ್‌ಗಳಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿರುವ ಆಂಧ್ರದ ಭರತ್ ಅವರು ಆಡುವ ಬಳಗದಲ್ಲಿ ಸ್ಥಾನ ಪಡೆಯಲು ಸಾಧ್ಯವಾಗುತ್ತಿಲ್ಲ. ಈತನ್ಮಧ್ಯೆ, ಮೂರು ಪಂದ್ಯಗಳಲ್ಲಿ ಕೇವಲ 18 ರನ್‌ ಮಾಡಿರುವ ಮಂದೀಪ್ ಅವರನ್ನೂ ಕೈಬಿಡಬಹುದು.

Advertisement

Udayavani is now on Telegram. Click here to join our channel and stay updated with the latest news.

Next