ಕಲಬುರಗಿ: ಈ ಭಾಗದ ಪ್ರಸಿದ್ಧ ಶರಣಬಸವೇಶ್ವರ ಮಹಾದಾಸೋಹ ಸಂಸ್ಥಾನದ 9ನೇ ಪೀಠಾಧಿಪತಿಗಳಾಗಿ ಚಿರಂಜೀವಿ ದೊಡ್ಡಪ್ಪ ಅಪ್ಪ ಕಾರ್ಯಭಾರ ವಹಿಸಿಕೊಂಡರು.
ಸಂಸ್ಥಾನದ ಮಹಾಮನೆಯಲ್ಲಿಂದು ನಾಡಿನ ವಿವಿಧ ಮಠಾಧೀಶರ ಸಾನ್ನಿಧ್ಯ ಹಾಗೂ ಸಮ್ಮುಖದಲ್ಲಿ ಸಂಸ್ಥಾನದ ವಿಧಿ ವಿಧಾನಗಳ ಮೂಲಕ ಪಟ್ಟಾಧಿಕಾರ ಮಹೋತ್ಸವ ನಡೆಯಿತು.
ಮಹಾದಾಸೋಹ ಸಂಸ್ಥಾನದ ಎಂಟನೇ ಪೀಠಾಧಿಪತಿ ಪೂಜ್ಯ ಡಾ. ಶರಣಬಸವಪ್ಪ ಅಪ್ಪ ಅವರು, ಚಿರಂಜೀವಿ ದೊಡ್ಡಪ್ಪ ಅಪ್ಪ ಅವರಿಗೆ ಪರುಷ ಬಟ್ಟಲು, ಲಿಂಗ ಸಜ್ಜಿಕೆ ನೀಡಿಕೆ ಹಾಗೂ ಪೇಠ ತೊಡಿಸುವ ಮೂಲಕ ಡಾ. ಶರಣಬಸವಪ್ಪ ಅಪ್ಪ ಅವರಿಂದ ಪಟ್ಟಾಧಿಕಾರ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಾತೋಶ್ರೀ ಡಾ. ದಾಕ್ಷಾಯಣಿ ಅವ್ವಾಜೀ ಅವರು, ಡಾ. ಶರಣಬಸವಪ್ಪ ಅಪ್ಪಾಜಿ ಹಾಗೂ ತಾವು ಚಿರಂಜೀವಿ ದೊಡ್ಡಪ್ಪ ಅಪ್ಪ ಅವರಿಗೆ ಸಂಸ್ಥಾನದ ಸಂಪ್ರದಾಯ, ಅನ್ನ ದಾಸೋಹ ಸೇರಿದಂತೆ ಎಲ್ಲ ನಿಯಮಿತ ಕಾರ್ಯನಿರ್ವಹಣೆ ಮಾಡಲು ಸಾಂಪ್ರದಾಯಿಕ ಹಾಗೂ ಮೇಲ್ವಿಚಾರಣೆ ಮಾಡಲಾಗುವುದು ಎಂದು ಪ್ರಕಟಿಸಿದರು.
ಇದನ್ನೂ ಓದಿ:ಹಿಜಾಬ್ ವಿವಾದದ ಹಿಂದೆ ಯಾವುದೋ ಕಾಣದ ಶಕ್ತಿ ಕೆಲಸ ಮಾಡುತ್ತಿದೆ: ಆರಗ ಜ್ಞಾನೇಂದ್ರ
ಡಾ. ಶರಣಬಸವಪ್ಪ ಅಪ್ಪ ಅವರು ಆಶೀರ್ವಚನ ನೀಡುತ್ತಾ, ಸಂಸ್ಥಾನದ ಎಲ್ಲ ಸಂಪ್ರದಾಯಗಳನ್ನು ನೂತನ ಪೀಠಾಧಿಪತಿಗಳು ಮುನ್ನಡೆಸಿಕೊಂಡು ಹೋಗಲು ಸೂಕ್ತ ಮಾರ್ಗದರ್ಶನ ಮಾಡಲಾಗುವುದು ಎಂದರು.
ಹಾರಕೂಡ ಸಂಸ್ಥಾನದ ಹಿರೇಮಠದ ಪೂಜ್ಯ ಡಾ. ಚೆನ್ನವೀರ ಶಿವಾಚಾರ್ಯರು, ಸಾರಂಗಮಠದ ಡಾ. ಸಾರಂಗಧರ ದೇಶಿಕೇಂದ್ರ ಮಹಾಸ್ವಾಮಿಗಳು, ಮಹಾರಾಷ್ಟ್ರದ ಹೌಸಾದ ಗುರುಬಾಬಾ, ಚವದಾಪುರಿ ಹಿರೇಮಠ ದ ಡಾ. ರಾಜಶೇಖರ ಶಿವಾಚಾರ್ಯರು ಸೇರಿದಂತೆ ಮುಂತಾದ ಹರಗುರು ಚರಮೂರ್ತಿಗಳು ಹಾಜರಿದ್ದರು