Advertisement

ಡಬಲ್‌ ಡೋಸ್‌ ಕಾಮಿಡಿ; ಹೊಸ ಅವತಾರದಲ್ಲಿ ಶರಣ್‌

09:05 AM May 06, 2022 | Team Udayavani |

ಕೆಲವು ಸಿನಿಮಾಗಳು ಆರಂಭದಿಂದಲೇ ಕುತೂಹಲ ಕೆರಳಿಸುತ್ತಾ ಬರುತ್ತವೆ. ಆ ಸಾಲಿಗೆ ಸೇರುವ ಸಿನಿಮಾ “ಅವತಾರ್‌ ಪುರುಷ’. ಸಿಂಪಲ್‌ ಸುನಿ ನಿರ್ದೇಶನ, ಶರಣ್‌ ನಾಯಕರಾಗಿರುವ ಈ ಸಿನಿಮಾ ಆರಂಭದಿಂದಲೂ ಕುತೂಹಲ ಕೆರಳಿಸುತ್ತಲೇ ಬಂದಿದ್ದು, ಇಂದು ತೆರೆಕಾಣುತ್ತಿದೆ. ಈಗಾಗಲೇ ಬಿಡುಗಡೆಯಾಗಿರುವ ಟ್ರೇಲರ್‌ ಹಿಟ್‌ಲಿಸ್ಟ್‌ ಸೇರುವ ಮೂಲಕ ಚಿತ್ರತಂಡದ ಮೊಗದಲ್ಲಿ ನಗುಮೂಡಿದೆ.

Advertisement

ಶರಣ್‌ ಸಿನಿಮಾ ಎಂದರೆ ಅಲ್ಲಿ ಕಾಮಿಡಿಗೆ ಬರವಿರುವುದಿಲ್ಲ. ಅದು “ಅವತಾರ ಪುರುಷ’ ಚಿತ್ರದಲ್ಲಿ ಡಬಲ್‌ ಆಗಿದೆ. ಈಗಾಗಲೇ ಟ್ರೇಲರ್‌ ನೋಡಿದವರಿಂದ ಒಂದು ಅಭಿಪ್ರಾಯ ವ್ಯಕ್ತವಾಗುತ್ತಿದೆ. ಅದೇನೆಂದರೆ ಇದು ಕೇವಲ ಕಾಮಿಡಿ ಸಿನಿಮಾವಲ್ಲ, ಬದಲಾಗಿ ಗಟ್ಟಿ ಕಥಾಹಂದರವೊಂದಿರುವ ಚಿತ್ರ ಎಂಬುದು. ಅದಕ್ಕೆ ಸಾಕ್ಷಿಯಾಗಿ ಟ್ರೇಲರ್‌ನಲ್ಲಿ ಸಾಕಷ್ಟು ಗಂಭೀರ ದೃಶ್ಯಗಳನ್ನು ನೀಡಲಾಗಿದೆ. ಶರಣ್‌ ಕೂಡಾ ಈ ಸಿನಿಮಾ ಮೇಲೆ ವಿಶ್ವಾಸವಿಟ್ಟಿದ್ದಾರೆ. ದೊಡ್ಡ ಗ್ಯಾಪ್‌ನ ನಂತರ ತೆರೆಮೇಲೆ ಬರುತ್ತಿರುವ ತನ್ನ ಚಿತ್ರವನ್ನು ಅಭಿಮಾನಿಗಳು ಇಷ್ಟಪಡುತ್ತಾರೆ ಎಂಬ ವಿಶ್ವಾಸವೂ ಇದೆ.

ಚಿತ್ರದ ಬಗ್ಗೆ ಮಾತನಾಡುವ ನಟ ಶರಣ್‌, “ಇಲ್ಲಿಯವರೆಗೆ ನೀವು ನೋಡಿರದ ಹೊಸ ಶರಣ್‌ನನ್ನು ಈ ಚಿತ್ರದಲ್ಲಿ ನೋಡುತ್ತೀರಿ. ನನ್ನ ಹಿಂದಿನ ಚಿತ್ರಗಳಂತೆ ಇದು ಕೂಡ ಔಟ್‌ ಆ್ಯಂಡ್‌ ಔಟ್‌ ಕಾಮಿಡಿ ಚಿತ್ರವಾಗಿದ್ದು, ಇದರಲ್ಲಿ ಪುಷ್ಕರ್‌ ಸ್ಟೈಲ್‌, ಶರಣ್‌ ಮ್ಯಾನರಿಸಂ, ಸುನಿ ಫ್ಲೇವರ್‌ ಕಾಣಬಹುದು. ಚಿತ್ರದಲ್ಲಿ ಒಂದು ಸೂಕ್ಷ್ಮ ವಿಚಾರವಿದೆ. ಅದೇನು ಅಂತ ಈಗಲೇ ಹೇಳಿದ್ರೆ ಅದರ ಸ್ವಾರಸ್ಯ ಕಡಿಮೆಯಾಗಬಹುದು. ಹಾಗಾಗಿ ಆ ಗುಟ್ಟು ಮಾತ್ರ ಬಿಟ್ಟು ಕೊಡಲಾರೆ. ಒಟ್ಟಾರೆ ಇದರಲ್ಲಿ ಕಾಮಿಡಿ, ರೊಮ್ಯಾನ್ಸ್‌ ಸೇರಿದಂತೆ ಮನರಂಜಿಸಲು ಬೇಕಾದ ಅಂಶಗಳಿಗಂತೂ ಕೊರತೆ ಇಲ್ಲ. ನಾನು ಇಲ್ಲಿಯವರೆಗೆ ಮಾಡಿದ ಚಿತ್ರಗಳಿಗಿಂತ ಇದು ಭಿನ್ನವಾದ ಚಿತ್ರ. ನೋಡುಗರಿಗೂ ಈ ಕಾನ್ಸೆಪ್ಟ್ ಇಷ್ಟವಾಗುವುದೆಂಬ ನಂಬಿಕೆ ನನಗಿದೆ’ ಎನ್ನುತ್ತಾರೆ ಶರಣ್‌.

ಚಿತ್ರದ ತಾರಾಬಳಗ ಕೂಡಾ ದೊಡ್ಡದಾಗಿದೆ. ಶರಣ್‌, ಆಶಿಕಾ, ಶ್ರೀನಗರ ಕಿಟ್ಟಿ, ಸಾಯಿ ಕುಮಾರ್‌, ಆಶುತೋಷ್‌ ರಾಣಾ, ಸುಧಾರಾಣಿ ಮುಂತಾದ ಕಲಾವಿದರ ಬಳಗ ಈ ಚಿತ್ರದಲ್ಲಿದೆ.

ಗೆಲ್ಲೋ ವಿಶ್ವಾಸ: ವಿಭಿನ್ನ ಸಿನಿಮಾಗಳನ್ನು ನಿರ್ಮಿಸುತ್ತಾ ಬಂದಿರುವ ಪುಷ್ಕರ್‌ ಈ ಸಿನಿಮಾ ಮೇಲೆ ಸಿಕ್ಕಾಪಟ್ಟೆ ವಿಶ್ವಾಸವಿಟ್ಟಿದ್ದಾರೆ. ಅದಕ್ಕೆ ಕಾರಣ ಚಿತ್ರದ ಕಥೆ ಹಾಗೂ ಮೂಡಿಬಂದಿರುವ ರೀತಿ. “ಅವತಾರ್‌ ಪುರುಷ ಪಕ್ಕಾ ಮನರಂಜನೆ ನೀಡುವ ಸಿನಿಮಾ. ಕಾಮಿಡಿ ಹಿನ್ನೆಲೆಯಲ್ಲಿ ಸಾಗುವ ಚಿತ್ರದಲ್ಲಿ ಒಂದು ಹೊಸ ಲೋಕವೇ ತೆರೆದುಕೊಳ್ಳಲದೆ. ಕೋವಿಡ್‌ ಬಳಿಕ ಔಟ್‌ ಅಂಡ್‌ ಔಟ್‌ ನಗುವಿನ ಸಿನಿಮಾವಾಗಿ “ಅವತಾರ್‌ ಪುರುಷ’ ಪ್ರೇಕ್ಷಕರನ್ನು ರಂಜಿಸಲಿದೆ’ ಎನ್ನುವುದು ಪುಷ್ಕರ್‌ ಮಾಡಿದೆ.

Advertisement

 ರವಿಪ್ರಕಾಶ್‌ ರೈ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next