ಚಿಕ್ಕಮಗಳೂರು: ಕಾಶ್ಮೀರದ ನೀಲಂ ನದಿ ಪಾತ್ರದಲ್ಲಿರುವ ತಿತ್ವಾಲ್ ನಲ್ಲಿ ನಿರ್ಮಾಣವಾಗಿರುವ ನೂತನ ಶಾರದಾಂಬೆ ದೇಗುಲಕ್ಕೆ ಶೃಂಗೇರಿ ಜಗದ್ಗುರು ವಿಧುಶೇಖರ ಶ್ರೀಗಳು ಭೇಟಿ ನೀಡಿ ಪೂಜೆ ಸಲ್ಲಿಸಿದರು.
ಶೃಂಗೇರಿಯಿಂದ 4000 ಕಿ.ಮೀ. ದೂರದಲ್ಲಿರುವ ತಿತ್ವಾಲ್ ನಲ್ಲಿ ಶಂಕರಾಚಾರ್ಯರು ಶಾರದಾಂಬೆ ದೇಗುಲವನ್ನು ನಿರ್ಮಿಸಿದ್ದರು. ಇದು ದಕ್ಷಿಣ ಏಷ್ಯಾದ 18 ಅತ್ಯಂತ ಪೂಜ್ಯ ದೇವಾಲಯಗಳಲ್ಲಿ ಒಂದಾಗಿದೆ. ದೇಶ ವಿಭಜನೆ ಮತ್ತು ಬುಡಕಟ್ಟು ದಾಳಿಯ ಕಾರಣದಿಂದ ಪಾಳು ಬಿದ್ದಿತ್ತು. 1948ರ ಬಳಿಕ ತೀರ್ಥಯಾತ್ರಿಗಳಿಗೂ ಅವಕಾಶ ನೀಡಿರಲಿಲ್ಲ. ಇದೀಗ 25 ವರ್ಷಗಳ ಬಳಿಕ ತಿತ್ವಾಲ್ ನ ಶಾರದಾಂಬೆ ದೇಗುಲವನ್ನು ಮರು ನಿರ್ಮಾಣ ಮಾಡಲಾಗುತ್ತಿದೆ.
ಜನವರಿ 24ರಂದು ಪಂಚಲೋಹದ ಶಾರದಾಂಬೆ ಮೂರ್ತಿಯನ್ನು ಶೃಂಗೇರಿಯಿಂದ ಕಳುಹಿಸಲಾಗಿತ್ತು. ಶೃಂಗೇರಿ ಗುರುವತ್ರಯರು ಪೂಜೆ ಸಲ್ಲಿಸಿ ರಥಯಾತ್ರೆಗೆ ಚಾಲನೆ ನೀಡಿದ್ದರು. ಇದೀಗ ವಿಧುಶೇಖರ ಶ್ರೀಗಳು ವಿಶೇಷ ವಿಮಾನದಲ್ಲಿ ಕಾಶ್ಮೀರ ತಲುಪಿ, ತಿತ್ವಾಲ್ ಗೆ ಭೇಟಿ ನೀಡಿದ್ದಾರೆ.
Related Articles
ತಿತ್ವಾಲ್ ಕುಪ್ವಾರದಲ್ಲಿದ್ದು, ಮತ್ತು ಶಾರದಾ ಪೀಠವು ಈ ಗ್ರಾಮದಿಂದ ಕೇವಲ ಕಿಲೋ ಮೀಟರ್ ದೂರದಲ್ಲಿದೆ.