Advertisement

ಶಾರದಾ ಆರ್ಟ್ಸ್ ಐಸಿರಿ: ಮುಂಬಯಿ ಪ್ರವಾಸದ ಸಮಾರೋಪ

04:25 PM Dec 05, 2017 | Team Udayavani |

ಮುಂಬಯಿ: ಊರಿನ ರಂಗ ತಂಡಗಳನ್ನು ಮುಂಬಯಿಗೆ ಆಹ್ವಾನಿಸಿ ಪ್ರದರ್ಶನ ನೀಡಲು ಅವಕಾಶ ಕಲ್ಪಿಸಿಕೊಡುವ ದೊಡ್ಡ ಕೆಲಸವನ್ನು ಕಲಾ ಸಂಘಟಕರು, ಕಲಾಭಿಮಾನಿಗಳು ಮಾಡುತ್ತಿದ್ದಾರೆ. ಕಲಾವಿದರು ನಮ್ಮನ್ನು ನಕ್ಕು ನಲಿಸುತ್ತಾರೆ. ಆದರೆ ಈ ಕಲಾವಿದರ ಬಣ್ಣದ ಬದುಕು ತುಂಬಾ ಕಷ್ಟಕರವಾಗಿದೆ. ನಮ್ಮನ್ನು ಸಂತೋಷಪಡಿಸುವ ಕಲಾವಿದರನ್ನು ಪ್ರೋತ್ಸಾಹಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಭಂಡಾರಿ ಸೇವಾ ಸಂಘ ಮುಂಬಯಿ ಅಧ್ಯಕ್ಷ ನ್ಯಾಯವಾದಿ ಶೇಖರ್‌ ಭಂಡಾರಿ ಅವರು ನುಡಿದರು.

Advertisement

ಭಂಡಾರಿ ಸೇವಾ ಸಂಘ ಮುಂಬಯಿ ವತಿ ಯಿಂದ ಕಲಾ ಸಂಘಟಕ ಪ್ರಕಾಶ್‌ ಎಂ. ಶೆಟ್ಟಿ ಅವರ ಸಂಚಾಲಕತ್ವದಲ್ಲಿ ಶಾರದಾ ಆರ್ಟ್ಸ್ ಐಸಿರಿ ಕಲಾವಿದೆರ್‌ ಮಂಜೇಶ್ವರ ಇವರ ಮುಂಬಯಿ ಪ್ರವಾಸದಲ್ಲಿ ಪ್ರದರ್ಶನಗೊಂಡ ಅಂಚಗೆ-ಇಂಚಗೆ ನಾಟಕದ ಸಮಾರೋಪದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮುಂಬಯಿ ಕಲಾಭಿಮಾನಿಗಳು ಹೃದಯ ವಂತರಾಗಿದ್ದು, ಊರಿನಿಂದ ಬರುವ ಎಲ್ಲಾ ಕಲಾ ತಂಡಗಳನ್ನು, ಕಲಾವಿದರನ್ನು ಗೌರವಿಸುವ ಕಾರ್ಯದಲ್ಲಿ ತೊಡಗುತ್ತಿರುವುದು ಅಭಿನಂದನೀಯವಾಗಿದೆ ಎಂದು ನುಡಿದು ಕಲಾವಿದರಿಗೆ ಶುಭಹಾರೈಸಿದರು.

ಸಮಾರಂಭದಲ್ಲಿ ಐಸಿರಿ ತಂಡದ ಕಲಾವಿದರನ್ನು ಗೌರವಿಸಲಾಯಿತು. ಅಲ್ಲದೆ ಚಲನಚಿತ್ರ ನಟ, ಹಾಸ್ಯ ಕಲಾವಿದ ಸುಂದರ್‌ ರೈ ಮಂದಾರ ಅವರನ್ನು ಗಣ್ಯರ ಸಮ್ಮುಖದಲ್ಲಿ ಸಮ್ಮಾನಿಸಲಾಯಿತು. ಐಸಿರಿ ತಂಡದ ಪರವಾಗಿ ಪ್ರಕಾಶ್‌ ಎಂ. ಶೆಟ್ಟಿ ಸುರತ್ಕಲ್‌ ಅವರನ್ನು ಅಭಿನಂದಿಸಲಾಯಿತು.

ಅತಿಥಿಯಾಗಿ ಪಾಲ್ಗೊಂಡ ಜಿ. ಎಸ್‌. ಟಿ. ಇಂಟರ್‌ನ್ಯಾಷನಲ್‌ ಸ್ಕೂಲ್‌ ಭಾಂಡೂಪ್‌ ಇದರ ಸಂಚಾಲಕ ಶಂಕರ್‌ ಶೆಟ್ಟಿ ಅವರು ಮಾತನಾಡಿ, ಯಕ್ಷಗಾನ, ನಾಟಕದ ಮೇಲೆ ನನಗೆ ಆಸಕ್ತಿ, ಅಭಿಮಾನವಿದೆ. ನಾಟಕ, ಯಕ್ಷಗಾನವು ನಮ್ಮ ಮನಸ್ಸನ್ನು ಉಲ್ಲಸಿತಗೊಳಿಸುತ್ತದೆ. ಅಂತಹ ಕಲೆಗಳು ಮುಂಬಯಿಯಲ್ಲಿ ನಿರಂತರವಾಗಿ ಪ್ರದರ್ಶನಗೊಳ್ಳುತ್ತಿರಲಿ. ಕಲಾವಿದರ ಮೇಲೆ ಕಲಾಭಿಮಾನಿಗಳ ಆಶೀರ್ವಾದ ಇರಲಿ ಎಂದರು.

ಯಕ್ಷಗಾನ ಕಲಾವಿದ ವಾಸುದೇವ ಮಾರ್ನಾಡ್‌ ಅವರು ಮಾತನಾಡಿ, ಮನುಷ್ಯನಾದವನು ಯಾವ ವಿಧಾನದಲ್ಲಾದರೂ ಇತರರಿಗೆ ಸಂತೋಷವನ್ನು ಕೊಡುವುದು ದೇವರ ಪೂಜೆಗೆ ಸಮಾನ. ಜನರನ್ನು ಸಂತೋಷಪಡಿಸುವ ಕೆಲಸವನ್ನು ಐಸಿರಿ ತಂಡದಂತಹ ರಂಗಕಲಾವಿದರು ಮಾಡುತ್ತಿದ್ದಾರೆ. ಈ ಕಲಾವಿದರಿಗೆಲ್ಲಾ ದೇವರ ಅನುಗ್ರಹ, ಶ್ರೀರಕ್ಷೆ ಸದಾಯಿರಲಿ ಎಂದು ಶುಭಹಾರೈಸಿದರು.

Advertisement

ವೇದಿಕೆಯಲ್ಲಿ ಕನ್ನಡ ಸೇವಾ ಸಂಘ ಪೊವಾಯಿ ಅಧ್ಯಕ್ಷ ಕರುಣಾಕರ ವಿ. ಶೆಟ್ಟಿ, ಲಲಿತ್‌ ಟ್ರೇಡರ್ ನ ಮಾಧವ ಶೆಟ್ಟಿ, ಶ್ರೀ ಗೀತಾಂಬಿಕಾ ದೇವಸ್ಥಾನದ ಉಪಾಧ್ಯಕ್ಷ ಸತೀಶ್‌ ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಧರ್ಮಪಾಲ ಕೋಟ್ಯಾನ್‌, ಘಾಟ್‌ಕೋಪರ್‌ ಕನ್ನಡ ವೆಲ್ಫೆàರ್‌ ಅಸೋಸಿಯೇಶನ್‌ ಅಧ್ಯಕ್ಷ ನವೀನ್‌ ಶೆಟ್ಟಿ ಇನ್ನಬಾಳಿಕೆ, ಕಲಾ ಪೋಷಕ ಶೈಲೇಶ್‌ ಶೆಟ್ಟಿ ಕೋಡಿಬೈಲ್‌, ಲೋಕನಾಥ ಶೆಟ್ಟಿ ವಿಟ್ಲ. ಐಸಿರಿ ತಂಡದ ಕೃಷ್ಣ ಜಿ. ಮಂಜೇಶ್ವರ ಮೊದಲಾದವರು ಉಪಸ್ಥಿತರಿದ್ದರು. ಆದ್ಯಪಾಡಿ ಬಾಲಕೃಷ್ಣ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಸುನೀಲ್‌ ಅಮೀನ್‌ ವಂದಿಸಿದರು. ಕಲಾಭಿಮಾನಿಗಳು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next