Advertisement

ದೆಹಲಿ ಸಿಂಹಾಸನಕ್ಕೆ ತಲೆ ಬಾಗುವುದಿಲ್ಲ: ಶರದ್‌ ಪವಾರ್‌

11:56 PM Sep 25, 2019 | Team Udayavani |

ಮುಂಬೈ: ದೆಹಲಿಯ ಸಿಂಹಾಸನದ ಮುಂದೆ ತಲೆಬಾಗುವುದಿಲ್ಲ. ಅಗತ್ಯ ಬಿದ್ದರೆ ಜೈಲಿಗೂ ಹೋಗುವೆ ಎಂದು ಎನ್‌ಸಿಪಿ ಅಧ್ಯಕ್ಷ ಶರದ್‌ ಪವಾರ್‌ ಹೇಳಿದ್ದಾರೆ. ಬುಧವಾರ ಮುಂಬೈನಲ್ಲಿ ಮಾತನಾಡಿದ ಅವರು, 25 ಸಾವಿರ ಕೋಟಿ ರೂ. ಮೌಲ್ಯದ ಮಹಾರಾಷ್ಟ್ರ ಸಹಕಾರಿ ಬ್ಯಾಂಕ್‌ ಹಗರಣಕ್ಕೆ ಸಂಬಂಧಿಸಿದಂತೆ ಇ.ಡಿ.ದಾಖಲಿಸಿ ಕೊಂಡಿರುವ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿ, ಸೆ.27ರಂದು ಇ.ಡಿ.ಸೂಚನೆಯಂತೆ ವಿಚಾರಣೆಗೆ ಹಾಜರಾಗಿ, ಅಧಿಕಾರಿಗಳು ಕೇಳುವ ಮಾಹಿತಿ, ದಾಖಲೆ ನೀಡುವೆ ಎಂದಿದ್ದಾರೆ. ಮಹಾರಾಷ್ಟ್ರ ಶಿವಾಜಿ ಮಹಾರಾಜ್‌ ಅವರ ತತ್ವಗಳನ್ನು ಅನುಸರಿಸುತ್ತಿದೆ ಎಂದಿದ್ದಾರೆ. ವಿಧಾನಸಭೆ ಚುನಾವಣೆ ಸನಿಹದಲ್ಲಿಯೇ ಇಂಥ ಕ್ರಮ ರಾಜಕೀಯ ಸೇಡಿನ ಕ್ರಮವೆಂದಿದ್ದಾರೆ. ಅದಕ್ಕೆ ಪ್ರತಿಕ್ರಿಯೆ ನೀಡಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫ‌ಡ್ನವಿಸ್‌ ರಾಜಕೀಯ ದ್ವೇಷದ ಕ್ರಮದಿದ ಇಂಥ ಕ್ರಮ ಕೈಗೊಳ್ಳಲಾಗಿಲ್ಲ ಎಂದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next