Advertisement

ಶಾನ್ವಿ ನಟನೆಯ ‘ಕಸ್ತೂರಿ ಮಹಲ್‌’ಬಿಡುಗಡೆಗೆ ತಯಾರಿ ಜೋರು

02:21 PM Jan 10, 2022 | Team Udayavani |

ದಿನೇಶ್‌ ಬಾಬು ನಿರ್ದೇಶನದ ಹಾಗೂ ಬಹುಭಾಷಾ ನಟಿ ಶಾನ್ವಿ ಶ್ರೀವಾಸ್ತವ್‌ ಮುಖ್ಯ ಪಾತ್ರದಲ್ಲಿ ನಟಿಸಿರುವ “ಕಸ್ತೂರಿ ಮಹಲ್‌’ ಚಿತ್ರದ ಪ್ರಥಮಪ್ರತಿ ಸಿದ್ಧವಾಗಿದ್ದು, ಸದ್ಯದಲ್ಲೇ ಪ್ರಾದೇಶಿಕ ಸೆನ್ಸಾರ್‌ ಮಂಡಳಿ ಚಿತ್ರವನ್ನು ವೀಕ್ಷಿಸಲಿದೆ. ಪ್ರಸ್ತುತ ಚಿತ್ರಮಂದಿರಗಳಿಗೆ ಐವತ್ತರಷ್ಟು ಮಾತ್ರ ಪ್ರವೇಶಕ್ಕೆ ಅವಕಾಶವಿದೆ. ಸರ್ಕಾರದ ಮುಂದಿನ ನಿಲುವನ್ನು ನೋಡಿಕೊಂಡು ಬಿಡುಗಡೆಯ ದಿನಾಂಕ ತಿಳಿಸುವುದಾಗಿ ನಿರ್ಮಾಪಕರು ತಿಳಿಸಿದ್ದಾರೆ.

Advertisement

ದಿನೇಶ್‌ ಬಾಬು ನಿರ್ದೇಶನದ 50ನೇ ಚಿತ್ರ ಕಸ್ತೂರಿ ಮಹಲ್. ಚಿತ್ರದ ಟೀಸರ್‌ ಅನ್ನು ಪವರ್‌ ಸ್ಟಾರ್‌ ಪುನೀತ್‌ ರಾಜಕುಮಾರ್‌ ಬಿಡುಗಡೆ ಮಾಡಿದ್ದರು. ಶಾನ್ವಿ ನಾಯಕಿಯಾಗಿ ನಟಿಸಿರುವ ಈ ಚಿತ್ರದ ತಾರಾಬಳಗದಲ್ಲಿ ಸ್ಕಂದ ಅಶೋಕ್‌, ರಂಗಾಯಣ ರಘು, ಶೃತಿ ಪ್ರಕಾಶ್‌, ಕಾಶಿಮ ರಫಿ, ನೀನಾಸಂ ಅಶ್ವಥ್‌, ಅಕ್ಷರ್‌ ಮುಂತಾದವರಿದ್ದಾರೆ.

ಇದನ್ನೂ ಓದಿ:ಹಂಬಲ್‌ ಪೊಲಿಟಿಷಿಯನ್‌ ನೊಗ್‌ರಾಜ್‌:  ನಕ್ಕು ನಗಿಸುವ ರಾಜಕೀಯ ವಿಡಂಬನೆ

ಹಾರಾರ್‌ ಥ್ರಿಲ್ಲರ್‌ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ದಿನೇಶ್‌ ಬಾಬು ಅವರೆ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ಶ್ರೀಭವಾನಿ ಆಟ್ಸ್‌ ಲಾಂಛನದಲ್ಲಿ ರವೀಶ್‌ ಆರ್‌. ಸಿ ನಿರ್ಮಿಸಿರುವ ಈ ಚಿತ್ರಕ್ಕೆ ನವೀನ್‌ ಆರ್‌. ಸಿ ಹಾಗೂ ಅಕ್ಷಯ್‌ ಸಿ.ಎಸ್‌ ಅವರ ಸಹ ನಿರ್ಮಾಣವಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next