Advertisement

ಶಾಂತಿವನ: ಆನ್‌ಲೈನ್‌ ಬುಕ್ಕಿಂಗ್‌ ವ್ಯವಸ್ಥೆಗೆ ಚಾಲನೆ

12:18 PM Dec 18, 2018 | |

ಬೆಳ್ತಂಗಡಿ: ಧರ್ಮಸ್ಥಳದ ಎಸ್‌ಡಿಎಂ ಯೋಗ ಮತ್ತು ಪ್ರಕೃತಿ ಚಿಕಿತ್ಸಾಲಯ ಶಾಂತಿವನದಲ್ಲಿ ಚಿಕಿತ್ಸೆ ಪಡೆಯಲಿಚ್ಛಿಸುವವರಿಗೆ ಅನುಕೂಲವಾಗುವ ಹಿನ್ನೆಲೆಯಲ್ಲಿ ಆರಂಭಗೊಂಡ ಆನ್‌ಲೈನ್‌ ಬುಕ್ಕಿಂಗ್‌ ವ್ಯವಸ್ಥೆಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಅವರು ಚಾಲನೆ ನೀಡಿದರು.

Advertisement

ಆನ್‌ಲೈನ್‌ ಬುಕಿಂಗ್‌ ವ್ಯವಸ್ಥೆಗೆ ಸಂಬಂಧಿಸಿ ತಾಂತ್ರಿಕ ನಿರ್ವಹಣೆಯ ಜವಾಬ್ದಾರಿಯನ್ನು ಧರ್ಮಸ್ಥಳ‌ದ ಶ್ರೇಯಸ್‌ಕುಮಾರ್‌ ಹಾಗೂ ನಿಶ್ಚಲ್‌ ಡಿ. ಅವರ ಮಾರ್ಗದರ್ಶನದಲ್ಲಿ ವೈರ್‌ಕ್ಯಾಂಪ್‌ ಸಂಸ್ಥೆ ನಿರ್ವಹಿಸಿದೆ. ಇಲ್ಲಿ ಚಿಕಿತ್ಸೆ ಪಡೆಯಲು ಇಚ್ಛಿಸುವವರಿಗೆ ಆರೋಗ್ಯ ಸಂಬಂಧಿತ ವಿವರವನ್ನು ನೀಡಿ ಚಿಕಿತ್ಸೆಯ ದಿನಾಂಕ ಮತ್ತು ಲಭ್ಯತೆಯ ವಿವರಗಳನ್ನು ಪಡೆಯಬಹುದಾಗಿದೆ.

ಹತ್ತು ದಿನಗಳಿಂದ ಆರು ತಿಂಗಳವರೆಗಿನ ಅವಧಿಯ ಚಿಕಿತ್ಸೆಗಾಗಿ ಬುಕಿಂಗ್‌ ಮಾಡುವ ಅವಕಾಶವಿದೆ. ಚಿಕಿತ್ಸಾಲಯದ ವೆಬ್‌ಸೈಟ್‌ www.naturecure.org.in ಗೆ ಭೇಟಿ ನೀಡಿ ಚಿಕಿತ್ಸೆ ಪಡೆಯಲಿಚ್ಛಿಸುವ ದಿನಾಂಕ ನಮೂದಿಸಿ ಲಭ್ಯ ಕೊಠಡಿಗಳ ವಿವರಗಳನ್ನು ಪಡೆಯಬಹುದಾಗಿದೆ. ಬಳಿಕ ಚಿಕಿತ್ಸೆ ಪಡೆಯಲಿರುವ ವ್ಯಕ್ತಿಯ ಆರೋಗ್ಯ ಸಂಬಂಧಿತ ಹಿಂದಿನ ದಾಖಲೆಗಳನ್ನು ಅಪ್‌ಲೋಡ್‌ ಮಾಡಬೇಕು. ಸಂಬಂಧಿಸಿದ ತಜ್ಞ ವೈದ್ಯರು ಈ ದಾಖಲೆಗಳನ್ನು ಪರಿಶೀಲಿಸಿ ಚಿಕಿತ್ಸೆಯ ಸಮ್ಮತಿ ಸೂಚಿಸುತ್ತಾರೆ.

ಇದರ ದೃಢೀಕೃತ ಪ್ರತಿಯನ್ನು ಚಿಕಿತ್ಸೆ ಆರಂಭವಾಗುವ ದಿನದಂದು ಸಲ್ಲಿಸಬೇಕಾಗುತ್ತದೆ. ಆರಂಭಿಕ ಒಂದು ತಿಂಗಳು ಆನ್‌ಲೈನ್‌ ಬುಕ್ಕಿಂಗ್‌ ಪ್ರಕ್ರಿಯೆಯು ಪ್ರಾಯೋಗಿಕವಾಗಿ ಕಾರ್ಯನಿರ್ವಹಿಸಲಿದೆ. ಆನ್‌ಲೈನ್‌ ಬುಕ್ಕಿಂಗ್‌ ವ್ಯವಸ್ಥೆಗೆ ಚಾಲನೆಯ ಸಂದರ್ಭ ಹೇಮಾವತಿ ವೀ.ಹೆಗ್ಗಡೆ, ಡಿ.ಹಷೇಂದ್ರ ಕುಮಾರ್‌, ಸುಪ್ರಿಯಾ ಹಷೇಂದ್ರ ಕುಮಾರ್‌, ಪೂರಣ್‌ ವರ್ಮಾ, ಸೀತಾರಾಮ ತೋಳ್ಪಡಿತ್ತಾಯ, ಡಾ.ಪ್ರಶಾಂತ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next