Advertisement

ಗುರುವಿನಲ್ಲಿ ಶಕ್ತಿ ಮತ್ತು ಭಕ್ತರಲ್ಲಿ ಭಕ್ತಿ ಇದ್ದರೆ ಮಾತ್ರ ಮಠಗಳು ಅಭಿವೃದ್ಧಿ

07:32 PM Dec 21, 2021 | Team Udayavani |

ರಬಕವಿ-ಬನಹಟ್ಟಿ: ಗುರುವಾದರು ಪ್ರತಿಯೊಬ್ಬರನ್ನು ಸಮಾನತೆಯಿಂದ ಕಾಣಬೇಕು. ಗುರುವಿನಲ್ಲಿ ಶಕ್ತಿ ಮತ್ತು ಭಕ್ತರಲ್ಲಿ ಭಕ್ತಿ ಇದ್ದರೆ ಮಾತ್ರ ಮಠಗಳು ಅಭಿವೃದ್ಧಿಯಾಗುತ್ತವೆ. ಆದ್ದರಿಂದ ಭಕ್ತರು ಮಠಗಳಲ್ಲಿ ನಡೆಯುವ ಧಾರ್ಮಿಕ ಮತ್ತು ಆಧ್ಯಾತ್ಮಿಕ ಚಿಂತನೆಯ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು. ಇದರಿಂದ ಪ್ರತಿಯೊಬ್ಬರು ಧರ್ಮ ಮಾರ್ಗದಲ್ಲಿ ನಡೆಯಲು ಸಾಧ್ಯವಾಗುತ್ತದೆ ಎಂದು ಜಮಖಂಡಿಯ ಮುತ್ತಿನಕಂತಿಮಠದ ಶಿವಲಿಂಗ ಪಂಡಿತಾರಾಧ್ಯ ಶಿವಾಚಾರ್ಯರು ನುಡಿದರು.

Advertisement

ಅವರು ಬನಹಟ್ಟಿಯ ಶ್ರೀ ಹಿರೇಮಠದಲ್ಲಿ ಶಾಂತವೀರ ಶಿವಾಚಾರ್ಯರ 31ನೇ ಚಿರಲಿಂಗಾಂಗ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಪ್ರವಚನಗಳನ್ನು ಕೇಳುವುದರಿಂದ ಮನಸ್ಸು ಶುಚಿ ಮತ್ತು ಶುದ್ಧಿಯಾಗುತ್ತದೆ. ಪ್ರವಚನ ನುಡಿಗಳನ್ನು ನಮ್ಮ ದಿನ ನಿತ್ಯದ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಮನಸ್ಸಿನ ಶುದ್ಧಿಗಾಗಿ ಜಪ ತಪ ಮತ್ತು ಧ್ಯಾನಗಳಲ್ಲಿ ತೊಡಗಬೇಕು ಎಂದು ಶಿವಲಿಂಗಪಂಡಿತಾರಾಧ್ಯ ಶಿವಾಚಾರ್ಯರು ತಿಳಿಸಿದರು.

ಇದೇ ಸಂದರ್ಭದಲ್ಲಿ ಮಹಾಲಿಂಗಪುರದ ಡಾ.ಎ.ಆರ್.ಬೆಳಗಲಿ ಮಾತನಾಡಿ, ಆಧ್ಯಾತ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ಜೀವನದಲ್ಲಿ ನೆಮ್ಮದಿಯನ್ನು ಕಂಡುಕೊಳ್ಳಬಹುದಾಗಿದೆ. ಮಠ ಮಾನ್ಯಗಳಲ್ಲಿ ಇಂಥ ಕಾರ್ಯಕ್ರಮಗಳು ನಡೆಯುವುದರಿಂದ ಭಕ್ತರಿಗೆ ಅನುಕೂಲವಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಮಾಜಿ ಸಚಿವೆ ಉಮಾಶ್ರೀ, ಬೆಂಗಳೂರಿನ ಹಿರೇಮಠದ ಅನ್ನದಾನ ಸ್ವಾಮೀಜಿ  ಮತ್ತು ಹಿರೇಮಠದ ಶರಣಬಸವ ಶಿವಾಚಾರ್ಯರು ಮಾತನಾಡಿದರು. ವೇದಿಕೆಯ ಮೇಲೆ ಶ್ರೀಶೈಲ ಧಬಾಡಿ, ಪಿಎಸೈ ಸುರೇಶ ಮಂಟೂರ ಇದ್ದರು.

Advertisement

ಗೀತಾ ಎಸ್. ಪ್ರಾರ್ಥಿಸಿದರು. ಗಂಗಾಧರ ಹಿರೇಮಠ ಸ್ವಾಗತಿಸಿದರು. ವಿಶ್ವಜ ಕಾಡದೇವ ನಿರೂಪಿಸಿದರು. ಶ್ರೀಶೈಲ ಮಠಪತಿ ವಂದಿಸಿದರು. ಕಾರ್ಯಕ್ರಮದಲ್ಲಿ ಪವನ ಅಮಟಿ, ಕಲ್ಲಯ್ಯಾ ಮಠಪತಿ, ಸಂಜಯ ಕೊಂತಿ, ಡಾ.ಪಂಡಿತ ಪಟ್ಟಣ, ಕಾಡಪ್ಪ ಬಾಬಾನಗರ, ಶಶಿಕಾಂತ ಹುನ್ನೂರ, ದಾನಪ್ಪ ಹುಲಜತ್ತಿ ಸೇರಿದಂತೆ ಅನೇಕರು ಇದ್ದರು

Advertisement

Udayavani is now on Telegram. Click here to join our channel and stay updated with the latest news.

Next