Advertisement

ಶಾಂತಜ್ಜಿಗೆ ನಿರ್ಮಾಣವಾಯಿತು ಸ್ವಂತ‌ ಸೂರು

10:27 PM Nov 13, 2020 | mahesh |

ಕುಂದಾಪುರ: ಶಂಕರ ನಾರಾಯಣ ಗ್ರಾ.ಪಂ. ವ್ಯಾಪ್ತಿಯ ಕುಳ್ಳುಂಜೆ ಗ್ರಾಮದ ಮಾವಿನಕೊಡ್ಲು ಬಳಿಯ ಕೋವಿನ ಗುಡ್ಡೆಯಲ್ಲಿ ಅನೇಕ ವರ್ಷಗಳಿಂದ ಟರ್ಪಾಲಿನ ಜೋಪಡಿಯಲ್ಲಿದ್ದ ದಿನ ಕಳೆಯುತ್ತಿದ್ದ ಶಾಂತಾಬಾಯಿ ಅಜ್ಜಿಗೆ ಸೂರು ನಿರ್ಮಾಣಗೊಂಡಿದೆ. ಕುಂದಾಪುರ ತಾ.ಪಂ. ಸದಸ್ಯ ಉಮೇಶ್‌ ಶೆಟ್ಟಿ ಕಲ್ಗದ್ದೆ ಅವರ ಮುಂದಾಳ್ವತದಲ್ಲಿ ಮನೆ ನಿರ್ಮಾಣವಾಗಿದ್ದು, ನ. 23ರಂದು ಬೆಳಗ್ಗೆ 10.30 ಕ್ಕೆ ಗೃಹಪ್ರವೇಶ ನಡೆಯಲಿದೆ.

Advertisement

2015-16ನೇ ಸಾಲಿನಲ್ಲಿ ಅಂಬೇಡ್ಕರ್‌ ಯೋಜನೆಯಡಿ ಮನೆ ಮಂಜೂರಾಗಿ ದ್ದರೂ, ಮನೆ ಕಟ್ಟಲು ಆರಂಭವಾದ ಅನಂತರ ಹಣ ಮಂಜೂರಾಗುವುದರಿಂದ ಮನೆ ಕಟ್ಟಲು ಆರಂಭಿಸುವಷ್ಟು ಅನು ಕೂಲ ಇವರಲ್ಲಿರಲಿಲ್ಲ. ಅಜ್ಜಿಯೊಂದಿಗೆ ಪುತ್ರಿ ಸೀತಾ ಬಾಯಿ ಹಾಗೂ ಅವರ 10 ವರ್ಷದ ಪುತ್ರಿಯಿದ್ದಾರೆ.

ನೆರವಾದ ತಾ.ಪಂ. ಸದಸ್ಯ
“ಉದಯವಾಣಿ’ ವರದಿಗೆ ಸ್ಪಂದಿಸಿದ ತಾ.ಪಂ. ಸದಸ್ಯ ಉಮೇಶ್‌ ಶೆಟ್ಟಿ ಕಲ್ಗದ್ದೆ ಈ ಅಜ್ಜಿಗೆ ಮನೆ ಕಟ್ಟಿಕೊಡುವ ಮಹತ್ತರ ಕಾರ್ಯಕ್ಕೆ ಮುಂದಾದರು. ಮನೆಗೆ ಸುಮಾರು 10 ಲಕ್ಷ ರೂ.ವರೆಗೆ ಖರ್ಚಾಗಿದ್ದು, ಈ ಪೈಕಿ 1.20 ಲಕ್ಷ ರೂ. ಆಶ್ರಯ ಯೋಜನೆಯಡಿ (ಅದರಲ್ಲಿ 30 ರೂ. ಬಾಕಿ ಇದೆ), 1.20 ಲಕ್ಷ ರೂ. ಅನೇಕ ಮಂದಿ ದೇಣಿಗೆ ರೂಪದಲ್ಲಿ ನೀಡಿದ್ದು, ಬೈಂದೂರು ಶಾಸಕ ಬಿ.ಎಂ. ಸುಕುಮಾರ್‌ ಶೆಟ್ಟಿ ಮನೆಗೆ ಬೇಕಾದ ಎಲ್ಲ ಹಂಚನ್ನು ಕೊಟ್ಟಿದ್ದಾರೆ. ಉಳಿದ ಹಣವನ್ನು ಉಮೇಶ್‌ ಶೆಟ್ಟಿಯವರೇ ಸ್ವತಃ ಭರಿಸಿದ್ದಾರೆ.

ಸುದಿನ ವರದಿ
ಶಾಂತಾ ಬಾಯಿ ಅಜ್ಜಿಯ ಸಂಕಷ್ಟದ ಕಥೆಯ ಬಗ್ಗೆ “ಉದಯವಾಣಿ ಸುದಿನ’ವು 2018ರ ಜೂ. 28ರಂದು “ಶಾಂತಜ್ಜಿಯ ಗೋಳು ಕೇಳುವವರೇ ಇಲ್ಲ’ ಎನ್ನುವುದಾಗಿ ಮೊದಲ ಬಾರಿಗೆ ವಿಸ್ತೃತ ವರದಿಯನ್ನು ಪ್ರಕಟಿಸಿ, ಗಮನಸೆಳೆದಿತ್ತು.

ಸಂತೃಪ್ತಿಯ ಭಾವ
ಅಜ್ಜಿಯ ಸಂಕಷ್ಟದ ಬದುಕು ನೋಡಿ ಆ ಅಜ್ಜಿಗೊಂದು ಮನೆ ಕಟ್ಟಿಕೊಡಬೇಕು ಎನ್ನುವುದು ಕನಸಾಗಿತ್ತು. ಶಾಸಕರು, ಒಂದಿಷ್ಟು ಸಹೃದಯಿ ಸ್ನೇಹಿತರ ಸಹಕಾರದಿಂದ ಈಡೇರಿದೆ. ಈಗ ಅಜ್ಜಿಯ ಮುಖದಲ್ಲಿನ ನಗು ಸಂತೃಪ್ತಿಯ ಭಾವ ಮೂಡಿಸಿದೆ.
– ಉಮೇಶ್‌ ಶೆಟ್ಟಿ ಕಲ್ಗದ್ದೆ, ತಾ.ಪಂ. ಸದಸ್ಯರು

Advertisement

 

Advertisement

Udayavani is now on Telegram. Click here to join our channel and stay updated with the latest news.

Next