Advertisement
ಮಣ್ಣು ಪಾಲಾಗುತ್ತಿವೆ…
Related Articles
Advertisement
ಭಾರೀ ಮಳೆ ಸುರಿದಿದ್ದರಿಂದ ಶಂಕರಪುರ ಮಲ್ಲಿಗೆ ಗಿಡ ಮತ್ತು ಬೆಳೆ ಹಾಳಾಗಿದೆ. ಮಲ್ಲಿಗೆ ಹೂವು ಮಾರುಕಟ್ಟೆಗೆ ಬರುವ ಪ್ರ ಮಾ ಣ ಮಾಮೂಲಿಗಿಂತ ಅರ್ಧಕ್ಕರ್ಧ ಕಡಿಮೆಯಾಗಿದೆ ಎಂದು ಶಂಕರಪುರ ಮಲ್ಲಿಗೆ ಹೂವಿನ ವ್ಯಾಪಾರಿ ವಿನ್ಸೆಂಟ್ ರಾಡ್ರಿಗಸ್ ಅವರು ಬೇಸರ ವ್ಯಕ್ತಪಡಿಸಿದರು.
ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಮಲ್ಲಿಗೆ ಬೆಳೆಗಾರರ ಸಂಕಟಕ್ಕೆ ಕೈ ಜೋಡಿಸುವಂತೆ ಬೆಳೆಗಾರರು ಆಗ್ರಹಿಸಿದ್ದಾರೆ.
ಈ ಬಗ್ಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತೇವೆ. ಮೇಲಧಿಕಾರಿಯ ಮಾರ್ಗಸೂಚಿಯಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು.–ಅಮಿತ್ ಸಿಂಪಿ, ಸಹಾಯಕ ತೋಟಗಾರಿಕಾ ಅಧಿಕಾರಿ
ಈ ಬಾರಿ ಮಳೆ ವಿಪರೀತ ಆಗಿದ್ದರಿಂದ ಮಲ್ಲಿಗೆ ಹೂವು ಕೊಳೆತು ಹೋಗುತ್ತಿವೆ. ಮಲ್ಲಿಗೆ ಗಿಡಗಳು ರೋಗ ಬಾಧಿತವಾಗಿದೆ. ಇದರಿಂದ ಗಿಡದಲ್ಲಿ ಚಿಗುರು ಬರುತ್ತಿಲ್ಲ. ಸುಮಾರು 8 -10 ಚೆಂಡು ಹೂವು ಪಡೆಯುತ್ತಿದ್ದು ಇದೀಗ ಕೇವಲ 300, 400 ಬಿಡಿ ಹೂವು ಮಾತ್ರ ಸಿಗುತ್ತದೆ. –ಬಿಬಿಯಾನ್ ಹಿಲ್ಡಾ ಲೋಬೋ, ಮಲ್ಲಿಗೆ ಬೆಳೆಗಾರರು ಶಂಕರಪುರ
ಮಲ್ಲಿಗೆ ಹೂವಿನ ಗಿಡದ ಬೆಳವಣಿಗೆ ಕುಂಠಿತವಾಗಿದೆ. ಸಿರಿ ತುಂಡಾಗಿ ಕೆಳಗೆ ಬೀಳುತ್ತಿದೆ. ಕೆಲವು ಗಿಡಗಳು, ಮಲ್ಲಿಗೆ ಮೊಗ್ಗು ಸತ್ತಿದೆ. ಇದೀಗ 200ರಷ್ಟು ಬಿಡಿ ಹೂವು ಮಾತ್ರ ಕೈ ಸೇರುತ್ತಿದೆ. ಕುಟುಂಬ ನಿರ್ವಹಣೆಗೆ ಮಲ್ಲಿಗೆ ಹೂವನ್ನೇ ನೆಚ್ಚಿಕೊಂಡಿದ್ದು ಈಗ ಏನು ಮಾಡುವುದೆಂದು ದಿಕ್ಕೇ ತೋಚುತ್ತಿಲ್ಲ. –ಭವಾನಿ, ಮಲ್ಲಿಗೆ ಬೆಳೆಗಾರರು ಸುಭಾಸ್ ನಗರ, ಕುರ್ಕಾಲು