Advertisement

ಕೋವಿಡ್ : ಚೀನದಲ್ಲಿ ಪುನಃ ಆನ್‌ಲೈನ್‌ ತರಗತಿ

11:17 PM Dec 18, 2022 | Team Udayavani |

ಶಾಂಘೈ: ಚೀನದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಶಾಂಘೈ ಸೇರಿದಂತೆ ಹಲವೆಡೆ ಶಾಲಾ-ಕಾಲೇಜುಗಳಿಗೆ ರಜೆ ನೀಡಿದ್ದು, ಪುನಃ ಆನ್‌ಲೈನ್‌ ತರಗತಿಗಳನ್ನು ಆರಂಭಿಸಲಾಗಿದೆ.

Advertisement

ಕೊರೊನಾ ನಿಯಂತ್ರಣಕ್ಕೆ ಸರಕಾರದ ಎಲ್ಲ ಕ್ರಮಗಳ ಹೊರತಾಗಿಯೂ ಕೊರೊನಾ ಸೋಂಕು ಹರಡುವುದು ಅಧಿಕವಾಗಿದೆ. ನರ್ಸರಿ ಮತ್ತು ಶಿಶುಪಾಲನಾ ಕೇಂದ್ರಗಳನ್ನು ಸೋಮವಾರದಿಂದ ಸಂಪೂರ್ಣ ಬಂದ್‌ ಮಾಡಲಾಗುತ್ತಿದೆ. ಆಸ್ಪತ್ರೆಗಳಲ್ಲಿ ಬೆಡ್‌ಗಳ ಸಂಖ್ಯೆ ಅಧಿಕಗೊಳಿಸಲಾಗಿದೆ.

ಶಾಂಘೈ ನಗರ ಒಂದರಲ್ಲೇ ಹೆಚ್ಚುವರಿಯಾಗಿ 2.3 ಲಕ್ಷ ಬೆಡ್‌ಗಳ ವ್ಯವಸ್ಥೆ ಮಾಡಲಾಗಿದೆ ಎಂದು ಬಿಬಿಸಿ ವರದಿ ಮಾಡಿದೆ.

ಶವ ಹೂಳಲು 3 ದಿನ ಕಾಯಬೇಕು: ಇನ್ನೊಂದೆಡೆ, ನಾಗರಿ ಕರ ಪ್ರತಿರೋಧದ ಹಿನ್ನೆಲೆಯಲ್ಲಿ ಚೀನದಲ್ಲಿ ಕೊರೊನಾ ನಿರ್ಬಂಧ ತೆರವುಗೊಳಿಸಿದ ನಂತರ ಅಲ್ಲಿನ ಆರೋಗ್ಯ ಸಚಿವಾಲಯ ಕೊರೊನಾ ಸಾವಿನ ಪ್ರಕರಣಗಳ ಸಂಖ್ಯೆಯ ವರದಿಯನ್ನೇ ಬಿಡುಗಡೆಗೊಳಿಸುತ್ತಿಲ್ಲ.

ದಿನೇ ದಿನೆ ಕೊರೊನಾ ಸಾವುಗಳು ಅಧಿಕವಾಗುತ್ತಿದ್ದು, ಸ್ಮಶಾನಗಳಲ್ಲಿ ಶವಗಳನ್ನು ಹೂಳಲು ಮೂರು ದಿನ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಮೂಲಗಳು ತಿಳಿಸಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next