Advertisement
ಮೇ 4-5ರಂದು ಗೋವಾದಲ್ಲಿ ಶಾಂಘೈ ಸಹಕಾರ ಸಮಾವೇಶದ ಅಂಗವಾಗಿ ವಿದೇಶಾಂಗ ಸಚಿವರ ಸಭೆ ನಡೆಯಲಿದೆ. ಇದರಲ್ಲಿ ತನ್ನ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಭಾಗವಹಿಸಲಿದ್ದಾರೆ ಎಂದು ಪಾಕ್ ಘೋಷಿಸಿತ್ತು. ಆಗ ಜೈಶಂಕರ್-ಬಿಲಾವಲ್ ನಡುವೆ ಮಾತುಕತೆ ನಡೆಯಬಹುದು ಎಂಬ ಆಶಾಭಾವ ಹುಟ್ಟಿಕೊಂಡಿತ್ತು. ಇತ್ತೀಚೆಗಷ್ಟೇ ಜೈಶಂಕರ್ ಪಾಕ್ ಉಗ್ರಗಾಮಿ ಕೃತ್ಯಗಳ ಬಗ್ಗೆ ಪರೋಕ್ಷವಾಗಿ ಕಿಡಿಕಾರಿರುವುದರಿಂದ ಮಾತುಕಕತೆ ಕಷ್ಟ ಎಂಬ ವದಂತಿಗಳು ಶುರುವಾಗಿವೆ. ಈ ಸಂಬಂಧಿಸಿದಂತೆ ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಗಿc ಅವರಿಗೆ ಪಾಕ್ ಜತೆಗೆ ದ್ವಿಪಕ್ಷೀಯ ಸಭೆ ಏನಾದರೂ ನಡೆಯಲಿದೆಯೇ ಎಂದು ಮಾಧ್ಯಮಗಳು ಪ್ರಶ್ನಿಸಿವೆ.ಈ ಕುರಿತು ಪ್ರತಿಕ್ರಿಯಿಸಿರುವ ಅವರು, ನಾವು ಒಟ್ಟಾರೆ ಸಭೆಯನ್ನು ಯಶಸ್ವಿಗೊಳಿಸುವುದರ ಬಗ್ಗೆ ಗಮನಹರಿಸುತ್ತಿದ್ದೇವೆ. ಯಾವುದೇ ನಿರ್ದಿಷ್ಟ ರಾಷ್ಟ್ರಗಳ ಬಗ್ಗೆ ಕೇಂದ್ರೀಕರಿಸಿಲ್ಲ ಎಂದಿದ್ದಾರೆ. ಈ ಹೇಳಿಕೆಯಿಂದಲೂ ಗೊಂದಲವುಂಟಾಗಿದೆ.