Advertisement

ಬೈಕ್ ಅಪಘಾತ: ಗಾಯಗೊಂಡ ಸ್ಪಿನ್ ದಿಗ್ಗಜ ಶೇನ್ ವಾರ್ನ್

08:49 AM Nov 29, 2021 | Team Udayavani |

ಸಿಡ್ನಿ: ಆಸ್ಟ್ರೇಲಿಯಾದ ಮಾಜಿ ಆಟಗಾರ, ಲೆಗ್ ಸ್ಪಿನ್ ದಿಗ್ಗಜ ಶೇನ್ ವಾರ್ನ್ ಅವರು ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದಾರೆ. ಮಗನೊಂದಿಗೆ ಬೈಕ್ ನಲ್ಲಿ ತೆರಳುತ್ತಿದ್ದಾಗ ಬಿದ್ದು ವಾರ್ನ್ ಗಾಯಗೊಂಡಿದ್ದಾರೆ ಎಂದು ಸಿಡ್ನಿ ಮಾರ್ನಿಂಗ್ ಹೆರಾಲ್ಡ್ ವರದಿ ಮಾಡಿದೆ.

Advertisement

ಸುದ್ದಿ ಸಂಸ್ಥೆಗೆ ಪ್ರತಿಕ್ರಿಯೆ ನೀಡಿರುವ ಶೇನ್ ವಾರ್ನ್, “ ಅಪಘಾತದಲ್ಲಿ ಸ್ವಲ್ಪ ಗಾಯಗೊಂಡಿದ್ದೇನೆ. ದೇಹ ಬಹಳ ನೋಯುತ್ತಿದೆ” ಎಂದಿದ್ದಾರೆ. 52 ವರ್ಷದ ಪ್ರಾಯದ ಶೇನ್ ವಾರ್ನ್ ಅವರು ಪುತ್ರ ಜ್ಯಾಕ್ಸನ್ ಜೊತೆಗೆ ಬೈಕ್ ನಲ್ಲಿ ತೆರಳುತ್ತಿದ್ದರು. ಈ ವೇಳೆ ಬೈಕ್ ಬಿದ್ದು ಸುಮಾರು 15 ಮೀಟರ್ ನಷ್ಟು ಬೈಕ್ ಜಾರಿದೆ ಎಂದು ವರದಿ ತಿಳಿಸಿದೆ.

ಇದನ್ನೂ ಓದಿ:ಯುನಿವರ್ಸ್‌ ಬಾಸ್‌’ ಖ್ಯಾತಿಯ ಕ್ರಿಸ್‌ ಗೇಲ್‌ ತವರಲ್ಲೇ ವಿದಾಯ!

ಶೇನ್ ವಾರ್ನ್ ಅವರು ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೂ ಡಿಸೆಂಬರ್ 8ರಿಂದ ಆರಂಭವಾಗಲಿರುವ ಆ್ಯಶಸ್ ಸರಣಿಯ ವೀಕ್ಷಕ ವಿವರಣೆಯಲ್ಲಿ ಭಾಗಿಯಾಗುವ ವಿಶ್ವಾಸದಲ್ಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next