ತೆಕ್ಕಟ್ಟೆ : ದಿನದಿಂದ ದಿನಕ್ಕೆ ಏರುತ್ತಿರುವ ತಾಪಮಾನದಿಂದ ಗ್ರಾಮೀಣ ಭಾಗದಲ್ಲಿನ ಮದಗ, ಕೆರೆ, ಹಳ್ಳ ಕೊಳ್ಳಗಳಲ್ಲಿ ನೀರಿನ ಮಟ್ಟ ಸಂಪೂರ್ಣ ಇಳಿಮುಖವಾಗಿ ಜಲ ಮೂಲಗಳು ಬತ್ತಿ ಹೋಗುತ್ತಿದ್ದು ಕುಡಿಯುವ ನೀರಿಗೆ ತತ್ವಾರ ಎದುರಾಗುವ ಸಾಧ್ಯತೆ ಹೆಚ್ಚಾಗಿದೆ. ಈ ನಡುವೆ ಕೆದೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಶಾನಾಡಿ ಮದಗದಲ್ಲಿ ಪರಿಸರದ ಯುವಕರ ತಂಡವು ಮೀನಿಗಾಗಿ ಬಲೆ ಬೀಸುತ್ತಿರುವುದು ಮಾ.31ರಂದು ಕಂಡು ಬಂದಿದೆ.
ಯುವಕರ ತಂಡವು ಮೀನಿನ ಬೇಟೆಗಾಗಿ ಗೋರ್ ಬಲೆಯನ್ನು ಬಿಸಿ ಕಾರ್ಯಚರಿಸುತ್ತಿದ್ದು, ಐರ್, ಮುಯ್ಡಾ ಜಾತಿಗೆ ಸೇರಿದ ಅಪಾರ ಪ್ರಮಾಣದ ಮೀನುಗಳನ್ನು ಬೇಟೆಯಾಡಿದ್ದಾರೆ.
ಕೆಳಸ್ತರದಲ್ಲಿ ಹದ್ದುಗಳ ಹಾರಾಟ ಬತ್ತಿ ಹೋಗಿರುವ ಮದಗದಲ್ಲಿ ಎರಡು ತಂಡಗಳು ಮೀನಿಗಾಗಿ ಬಲೆ ಬೀಸಿದರೆ ಪರಿಸರದ ಸುತ್ತಮುತ್ತಲಿನ ಆಗಸದಲ್ಲಿ ನೂರಾರು ಹದ್ದುಗಳು ಸುತ್ತುವರಿದು ನೀರಿನಲ್ಲಿರುವ ಮೀನುಗಾಗಿ ಅತ್ಯಂತ ಕೆಳಸ್ತರದಲ್ಲಿ ಹಾರಾಡಿ ಮೀನನ್ನು ಹೊತ್ತೂ ಯ್ಯುವ ದೃಶ್ಯಗಳು ಸಾಮಾನ್ಯವಾಗಿತ್ತು.
ಶಾನಾಡಿ ಮದಗದಲ್ಲಿ ಅಪಾರ ಪ್ರಮಾಣದ ಮೀನುಗಳಿದ್ದು, ರವಿವಾರ ಬಿಡುವಾದ್ದರಿಂದ ಯುವಕರ ತಂಡವು ಸಾಂಪ್ರದಾಯಿಕ ಗೋರ್ ಬಲೆ ಬೀಸಿದ್ದು ಐರ್, ಮುಯ್ಡಾ ಜಾತಿಗೆ ಸೇರಿದ ಅಪಾರ ಪ್ರಮಾಣದ ಮೀನು ದೊರೆತಿದೆ ಎಂದು ಬಲೆ ಬೀಸಿದವರಲ್ಲಿ ಒಬ್ಬರಾದ ಉದಯ ಕೆದೂರು ತಿಳಿಸಿದ್ದಾರೆ.