Advertisement

ಅಹ್ಮದಾಬಾದ್‌ ಟೆಸ್ಟ್‌ನಲ್ಲಿ ಭಾರತಕ್ಕೆ ಮೊಹಮ್ಮದ್‌ ಶಮಿ ಬಲ

11:04 PM Mar 04, 2023 | Team Udayavani |

ಹೊಸದಿಲ್ಲಿ: ಇಂದೋರ್‌ ಟೆಸ್ಟ್‌ ಪಂದ್ಯದಿಂದ ಹೊರಗುಳಿದಿದ್ದ ಅನುಭವಿ ವೇಗಿ ಮೊಹಮ್ಮದ್‌ ಶಮಿ ಅಹ್ಮದಾಬಾದ್‌ನಲ್ಲಿ ನಡೆಯುವ ಅಂತಿಮ ಮುಖಾಮುಖಿಗಾಗಿ ಆಡುವ ಬಳಗಕ್ಕೆ ಮರಳಲಿದ್ದಾರೆ. ಮೊಹಮ್ಮದ್‌ ಸಿರಾಜ್‌ಗೆ ವಿಶ್ರಾಂತಿ ನೀಡುವ ಸಾಧ್ಯತೆ ಇದೆ.

Advertisement

ಮುಂಬರುವ ಏಕದಿನ ಸರಣಿ, ಅನಂತರದ ಐಪಿಎಲ್‌, ವರ್ಷಾಂತ್ಯದ ಏಕದಿನ ವಿಶ್ವಕಪ್‌ಗ್ಳೆಲ್ಲದರಲ್ಲೂ ಪಾಲ್ಗೊಳ್ಳುವ ಸಂಭಾವ್ಯ ಪೇಸ್‌ ಬೌಲರ್‌ಗಳಿಗೆ ಆಗಾಗ ವಿಶ್ರಾಂತಿಯ ಅಗತ್ಯವಿದೆ ಎಂದು ವೈದ್ಯಕೀಯ ತಂಡ ಸೂಚನೆ ನೀಡಿತ್ತು. ಈ ಕಾರಣಕ್ಕಾಗಿ ಮೊಹಮ್ಮದ್‌ ಶಮಿ ಅವರನ್ನು ಇಂದೋರ್‌ ಟೆಸ್ಟ್‌ನಿಂದ ಕೈಬಿಟ್ಟು ಉಮೇಶ್‌ ಯಾದವ್‌ಗೆ ಅವಕಾಶ ನೀಡಲಾಯಿತು. ಮುಂದಿನ ಪಂದ್ಯದಲ್ಲಿ ಯಾದವ್‌ ಅವರನ್ನು ಉಳಿಸಿಕೊಂಡು ಸಿರಾಜ್‌ಗೆ ವಿಶ್ರಾಂತಿ ನೀಡುವುದು ತಂಡದ ಯೋಜನೆಯಾಗಿದೆ ಎಂದು ತಿಳಿದು ಬಂದಿದೆ.
ಮೊದಲ ಮೂರೂ ಟೆಸ್ಟ್‌ಗಳನ್ನು ಆಡಿರುವ ಸಿರಾಜ್‌ಗೆ ಲಭಿಸಿದ್ದು 24 ಓವರ್‌ ಮಾತ್ರ.

Advertisement

Udayavani is now on Telegram. Click here to join our channel and stay updated with the latest news.

Next