Advertisement

ಶಂಭುಲಿಂಗೇಶ್ವರ ದೇಗುಲ ಪ್ರವೇಶಕ್ಕೆ ಮುಕ್ತ ಅವಕಾಶ

03:48 PM Jun 07, 2023 | Team Udayavani |

ಭಾರತೀನಗರ: ಸಮೀಪದ ಅರೆಚಾಕನಹಳ್ಳಿ ಗ್ರಾಮದಲ್ಲಿ ಸೋಮವಾರ ಶ್ರೀ ಶಂಭುಲಿಂಗೇಶ್ವರ ದೇಗುಲದಲ್ಲಿ ಪರಿಶಿಷ್ಟರಿಗೆ ಪೂಜೆ ಮಾಡಲು ಹಾಗೂ ಪ್ರವೇಶಕ್ಕೆ ನಿರಾಕರಿಸಿದ ಹಿನ್ನೆಲೆಯಲ್ಲಿ ವಿವಿಧ ಇಲಾಖೆ ಅಧಿಕಾರಿಗಳು, ಗ್ರಾಮದಲ್ಲಿ ಶಾಂತಿಸಭೆ ನಡೆಸಿ ಮುಕ್ತ ಪ್ರವೇಶಕ್ಕೆ ಅನುವು ಮಾಡಿಕೊಡಲಾಯಿತು.

Advertisement

ತಾಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ನಾಗಲಕ್ಷ್ಮೀ, ಕೆ.ಎಂ.ದೊಡ್ಡಿ ಪೊಲೀಸ್‌ ಠಾಣೆ ಸಿಪಿಐ ಆನಂದ್‌, ಕಂದಾಯ ನಿರೀಕ್ಷಕ ಮಹೇಶ್‌ ನೇತೃತ್ವದಲ್ಲಿ ದಲಿತ ಹಾಗೂ ಸವರ್ಣೀಯರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಒಮ್ಮತದ ತೀರ್ಮಾನ ಕೈಗೊಂಡು ಪರಿಶಿಷ್ಟರನ್ನು ದೇವಸ್ಥಾನಕ್ಕೆ ಪ್ರವೇಶ ಮಾಡಿ, ಪೂಜೆ ಸಲ್ಲಿಕೆಗೆ ಮುಕ್ತ ಪ್ರವೇಶ ಕಲ್ಪಿಸುವಂತೆ ತೀರ್ಮಾನ ಕೈಗೊಳ್ಳಲಾಯಿತು.

ಒಗ್ಗಟ್ಟಿನಿಂದ ಹಬ್ಬ ಆಚರಿಸಿ: ಕೆ. ಎಂ.ದೊಡ್ಡಿ ಠಾಣೆ ಸಿಪಿಐ ಆನಂದ್‌ ಮಾತನಾಡಿ, ಗ್ರಾಮದಲ್ಲಿ ಶ್ರೀಶಂಭುಲಿಂಗೇಶ್ವರ, ಭೈರವೇಶ್ವರ ಕೊಂಡೋತ್ಸವದಲ್ಲಿ ಪರಿಶಿಷ್ಟರಿಗೆ ದೇಗುಲ ಪ್ರವೇಶ ಹಾಗೂ ಪೂಜೆಗೆ ನಿರಾಕರಿಸಿದ ಘಟನೆ ನಾಗರಿಕ ಸಮಾಜ ತಲೆ ತಗ್ಗಿಸುವಂತೆ ಮಾಡಿದೆ. ಸಂವಿಧಾನದ ಆಶಯದಂತೆ ದಲಿತರು ಮುಕ್ತವಾಗಿ ದೇಗುಲ ಪ್ರವೇಶಕ್ಕೆ ಅವಕಾಶ ನೀಡಿದ್ದರೂ, ಗ್ರಾಮದಲ್ಲಿ ಕೆಲ ಕಟ್ಟುಪಾಡುಗಳಿಗೆ ಒಳಗಾಗಿ, ಅವಕಾಶ ನೀಡದಿರುವುದು ಕಾನೂನು ಬಾಹಿರವಾಗಿದೆ. ಗ್ರಾಮದಲ್ಲಿ ಸರ್ವ ಸಮುದಾಯಗಳು ಒಗ್ಗಟ್ಟು, ಭಿನ್ನಾಭಿಪ್ರಾಯಗಳಿಲ್ಲದೆ ಹಬ್ಬ ಆಚರಣೆ ಮಾಡಬೇಕು. ಕಾನೂನಿಗೆ ಗೌರವ ಸಲ್ಲಿಸಬೇಕು. ಅಲ್ಲದೆ, ಗ್ರಾಮದಲ್ಲಿ ಈ ರೀತಿ ಘಟನೆ ನಡೆದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸಮಾಜ ಕಲ್ಯಾಣ ಇಲಾಖೆ ಕಚೇರಿ ಅಧೀಕ್ಷಕ ಶ್ರೀನಿವಾಸ, ಮುಖಂಡರಾದ ಶಿವಲಿಂಗಯ್ಯ, ಚಿಕ್ಕಸ್ವಾಮಿ, ಜಾನಪದ ಕಲಾವಿದ ಸುಂದ್ರೇಶ, ಗ್ರಾಪಂ ಸದಸ್ಯ ಸತೀಶ್‌, ಜವರಾಯಿ, ಗುಜ್ಜೆàಗೌಡ, ಚಿದಂಬರ ಮೂರ್ತಿ, ನಾಡಗೌಡರಾದ ಕುಳ್ಳೆಗೌಡ, ಶಿವಲಿಂಗೇಗೌಡ, ಗೂಳಿಗೌಡ, ಗ್ರಾಮ ಲೆಕ್ಕಿಗ ಅಕ್ಷಯ್‌ ಕೀರ್ತಿ, ಪೊಲೀಸ್‌ ಶ್ರೀಧರ್‌ ರಾವ್‌ ಹಾಜರಿದ್ದರು

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next