ಬೇಲೂರು: ರಾಷ್ಟ್ರೀಯ ಜನ ಸಂಘದ ಸಂಸ್ಥಾಪಕ ಶಾಮ್‌ಪ್ರಕಾಶ್ ಮುಖರ್ಜಿ ಅವರ ಪುಣ್ಯಸ್ಮರಣೆ ದಿನವನ್ನು ಇಲ್ಲಿನ ಬಿಜೆಪಿ ಕಚೇರಿಯಲ್ಲಿ ಆಚರಿಸಲಾಯಿತು. ಶಾಮ್‌ಪ್ರಕಾಶ್ ಮುಖರ್ಜಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಬಿಜೆಪಿ ರಾಜ್ಯ ರೈತ ಮೋರ್ಚ ಕಾರ್ಯದರ್ಶಿ ರೇಣುಕುಮಾರ್, ಬಿಜೆಪಿ ಹಲವು ರಾಜ್ಯ, ದೇಶದಲ್ಲಿ ಅಧಿಕಾರದಲ್ಲಿ ಇದೆ ಎಂದರೆ ಅದಕ್ಕೆ ಕಾರಣರಾದ ನಾಯಕರಲ್ಲಿ ಶಾಮ್‌ಪ್ರಕಾಶ್ ಮುಖರ್ಜಿ ಮೊದಲ ಸ್ಥಾನದಲ್ಲಿ ಇದ್ದಾರೆ. ಇವರಿಗೆ ಮದ್ದು ಗುಂಡು ಪ್ರಯೋಗಿಸಿ ದೇಶ ಕಟ್ಟುವಂತ ಭಾವನೆ ಇರಲಿಲ್ಲ. ಎಲ್ಲರ ಮನಸ್ಸನ್ನು ಗೆದ್ದು ದೇಶ ಕಟ್ಟಬೇಕೆನ್ನುವ ಆಲೋಚನೆ ಉಳ್ಳವರಾಗಿದ್ದರು ಎಂದರು.
ಶಿಕ್ಷಣ ತಜ್ಞರು, ಚಿಂತಕರು, ನ್ಯಾಯವಾದಿಗಳು ಆಗಿದ್ದವರು. ಅಧಿಕಾರದ ಆಸೆ ಹೊಂದಿದವರಲ್ಲ. ಮಂತ್ರಿ ಆಗಿದ್ದವರು, ದೇಶದಲ್ಲಿ ಒಂದೇ ಕಾನೂನು ಇರಬೇಕು,
ಒಂದೇ ಭಾವುಟ ಹೊಂದಿರಬೇಕು ಎಂಬ ಹಠದಿಂದಾಗಿ ಸಚಿವ ಸ್ಥಾನ ತೊರೆದು ಹೊರ ಬಂದವರು. ಅಂದು ಇವರು ತೆಗೆದುಕೊಂಡ ನಿರ್ಧಾರ ಇಂದು ಅನುಷ್ಠಾನಗೊಳ್ಳುತ್ತಿದ್ದು ಕಾಶ್ಮೀರದಲ್ಲಿನ 370 ವಿಧಿ ರದ್ಧತಿ ಇವರ ಚಿಂತನೆಯ ಫಲ ಎಂದರು.
ಬಿಜೆಪಿ ತಾಲೂಕು ಅಧ್ಯಕ್ಷ ಅಡಗೂರು ಆನಂದ್ ಮಾತನಾಡಿ, ಶಾಮ್ ಪ್ರಕಾಶ್ ಮುಖರ್ಜಿ ಅವರ ಉದ್ದೇಶ ಇಂದು ಪ್ರಧಾನಿ ನರೇಂದ್ರಮೋದಿ ಈಡೇರಿಸಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು. ಈ ವೇಳೆ ಚನ್ನಕೇಶವ ದೇಗುಲದ ಸಮಿತಿ ಸದಸ್ಯ ರವಿಶಂಕರ್, ಬೇಲೂರು ಹಳೇಬೀಡು ಪ್ರಾಧಿಕಾರದ ಸದಸ್ಯ ಶ್ರೀನಿವಾಸ್, ತೆಂಡೇ ಕೆರೆ ರಮೇಶ್, ಎಸ್.ಸಿ.ಮೋರ್ಚ ಅಧ್ಯಕ್ಷ ವಸಂತ್, ದೇವಿಹಳ್ಳಿಮಲ್ಲಿಕ ಇದ್ದರು.