ಅಯೋಧ್ಯಾ:ಮುಂದಿನ ವರ್ಷಾರಂಭದಲ್ಲಿ ಅಯೋಧ್ಯೆಯಲ್ಲಿ ಭವ್ಯ ಶ್ರೀರಾಮನ ದೇಗುಲ ತಲೆಯೆತ್ತಲಿದೆ. ಇದಕ್ಕಾಗಿ ಮೂರು ಅಡಿ ಎತ್ತರದ ಶ್ರೀರಾಮ, ಸೀತೆಯರ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಗುವುದು. ಇವನ್ನು ನೇಪಾಳದ ಕಾಳಿಗಂಡಕಿ ನದಿಯಲ್ಲಿ ಸಿಗುವ ಸಾಲಿಗ್ರಾಮ ಶಿಲೆಯಿಂದ ನಿರ್ಮಿಸಲಾಗುವುದು. ತಲಾ 25 ಮತ್ತು 15 ಟನ್ ತೂಕವಿರುವ ಈ ಕಲ್ಲುಗಳನ್ನು ಜ.30ರಂದು ನೇಪಾಳದಿಂದ ಭಾರತಕ್ಕೆ ಕಳುಹಿಸಲಾಗಿದೆ.
ನೇಪಾಳ ಸರ್ಕಾರ ಸ್ವತಃ ಆಸಕ್ತಿ ವಹಿಸಿ ಈ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದೆ. ಶ್ರೀರಾಮ ವಿಷ್ಣುವಿನ ಅವತಾರ. ಗಂಡಕಿ ನದಿಯಲ್ಲಿ ಸಿಗುವ ಸಾಲಿಗ್ರಾಮವನ್ನು ವಿಷ್ಣುವೆಂದೇ ಭಾವಿಸಿ ಪೂಜಿಸಲಾಗುತ್ತದೆ. ಹೀಗಾಗಿ ಈ ನದಿಯ ಶಿಲೆಯನ್ನು ಬಳಸಲು ನಿರ್ಧರಿಸಲಾಯಿತು. ಅಯೋಧ್ಯಾ ಶ್ರೀರಾಮನ ದೇವಸ್ಥಾನದಲ್ಲಿ ಮೂಲ ರಾಮಲಲ್ಲಾ ವಿಗ್ರಹಗಳನ್ನು ಹಾಗೆಯೇ ಉಳಿಸಿಕೊಳ್ಳಲಾಗುತ್ತದೆ. ಅದರ ಜೊತೆಗೆ ಮುಖ್ಯಮಂದಿರದಲ್ಲಿ ಸಾಲಿಗ್ರಾಮ ಮೂರ್ತಿಯನ್ನು ಸ್ಥಾಪಿಸಲಾಗುತ್ತದೆ.
ಜೂನ್ಗೆ ಅಯೋಧ್ಯಾ ಅಂ.ರಾ. ವಿಮಾನನಿಲ್ದಾಣ: ಒಂದು ಕಡೆ ರಾಮಮಂದಿರ ನಿರ್ಮಾಣ ಭರದಿಂದ ಸಾಗಿರುವಂತೆಯೇ, ಅಯೋಧ್ಯೆಯಲ್ಲಿ ಅಂತಾರಾಷ್ಟ್ರೀಯ ವಿಮಾನನಿಲ್ದಾಣವನ್ನು ಈ ವರ್ಷ ಜೂನ್ ಹೊತ್ತಿಗೆ ಮುಗಿಸಲು ಯೋಗಿ ಆದಿತ್ಯನಾಥ್ ಸರ್ಕಾರ ತೀವ್ರ ಆಸಕ್ತಿವಹಿಸಿಎ. ಕಾಮಗಾರಿಗಳು ಅಷ್ಟೇ ತ್ವರಿತವಾಗಿ ನಡೆಯುತ್ತಿವೆ.