Advertisement

ಬಸ್‌ ಹತ್ತಲು ಪ್ರಯಾಣಿಕರ ಪರದಾಟ!

03:54 PM Jun 13, 2023 | Team Udayavani |

ರಾಮನಗರ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಶಕ್ತಿ ಯೋಜನೆ ಜಾರಿಯಾದ ಎರಡನೇ ದಿನವೇ ಜಿಲ್ಲೆ ಯಲ್ಲಿ ಬಸ್‌ಗಾಗಿ ಪ್ರಯಾಣಿಕರು ಪರದಾಡುವ ಪರಿಸ್ಥಿತಿ ನಿರ್ಮಾಣಗೊಂಡಿದ್ದು, ಸೂಕ್ತ ಬಸ್‌ ವ್ಯವಸ್ಥೆ ಕಲ್ಪಿಸದ ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ಹಿಡಿಶಾಪ ಹಾಕಿದ್ದಾರೆ.

Advertisement

ವಾರಾಂತ್ಯದ ರಜೆ ಮುಗಿದ ಹಿನ್ನೆಲೆಯಲ್ಲಿ ಸೋಮವಾರ ಬೆಳಗ್ಗೆ ಕೆಲಸಕ್ಕೆ ಹೋಗುವವರು ಹಾಗೂ ರಜೆ ಹಿನ್ನೆಲೆಯಲ್ಲಿ ಸ್ವಗ್ರಾಮಕ್ಕೆ ಬಂದಿದ್ದವರು, ವಿದ್ಯಾ ರ್ಥಿ ಗಳು ಬೆಂಗಳೂರಿಗೆ ಪ್ರಯಾಣಿಸಲು ಸೋಮವಾರ ಮುಂಜಾ ನೆ ವೇಳೆ ಬಸ್‌ ನಿಲ್ದಾಣಕ್ಕೆ ಹೆಚ್ಚಿನ ಸಂಖ್ಯೆ ಯಲ್ಲಿ ಬಂದಿ ದ್ದರು. ಆದರೆ, ಈ ಸಮಯದಲ್ಲಿ ಕೆಲವೇ ಕೆಲವು ಬಸ್‌ ಬೆಂ-ಮೈ ಮಾರ್ಗದಲ್ಲಿ ಸಂಚರಿಸುತ್ತಿದ್ದ ಕಾರಣ ಪ್ರಯಾ ಣಿ ಕರ ಸಂಚಾರಕ್ಕೆ ಸಮಸ್ಯೆಯಾಗಿ ಪರಿಣಮಿಸಿತು.

ಎಲ್ಲಾ ಬಸ್ಸು ರಶ್‌: ಚನ್ನಪಟ್ಟಣ, ರಾಮನಗರ ಬಸ್‌ ನಿಲ್ದಾಣದಿಂದ ಹೊರಟ ಎಲ್ಲಾ ಬಸ್‌ಗಳ ಸೀಟುಗಳು ಭರ್ತಿಯಾಗಿದ್ದವು. ಬಸ್‌ಗಳಲ್ಲಿ ಕೂರುವುದಕ್ಕಿರಲಿ, ನಿಲ್ಲುವುದಕ್ಕೂ ಜಾಗವಿಲ್ಲದೆ ಕೆಲ ಪ್ರಯಾಣಿಕರು ಬಸ್‌ ಬಾಗಿಲು ಬಳಿಯ ಪುಟ್‌ ಬೋರ್ಡ್‌ ಮೇಲೆ ನಿಂತು ಪ್ರಯಾಣಿಸಿದ ದೃಶ್ಯ ಸಾಮಾನ್ಯವೆನಿಸಿತ್ತು. ಇನ್ನು ಬೆಳಗ್ಗೆ 6 ಗಂಟೆಯಿಂದಲೇ ಪ್ರಯಾಣಿಕರು ಬಸ್‌ ನಿಲ್ದಾಣ ದಲ್ಲಿ ಎಲ್ಲಾ ಬಸ್‌ಗಳು ರಶ್‌ ಆಗಿ ಬಂದ ಪರಿಣಾಮ ತಾಸುಗಟ್ಟಲೆ ಕಾಯುವಂತಾಯಿತು. ಕೆಲಸಕ್ಕೆ ಹೋಗಲೇ ಬೇಕಾದ ಕಾರಣ ಕಷ್ಟಪಟ್ಟು ಬಸ್‌ ಹತ್ತಿಕೊಂಡು ಹೋಗುವ ಅನಿವಾರ್ಯತೆ ನಿರ್ಮಾಣಗೊಂಡಿತ್ತು.

ಕೆಎಸ್‌ಆರ್‌ಟಿಸಿ ವಿರುದ್ಧ ಕಿಡಿ: ಬಸ್‌ ಅವ್ಯವಸ್ಥೆ ಯಿಂದ ಬೇ ಸತ್ತ ಜನರು ಸರ್ಕಾರ ಕೇವಲ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿಕೊಟ್ಟರೆ ಸಾಲದು, ಸರಿಯಾಗಿ ಬಸ್‌ ವ್ಯವಸ್ಥೆ ಕಲ್ಪಿಸಬೇಕು. ಈ ರೀತಿ ಹತ್ತಲೂ ಜಾಗ ವಿಲ್ಲದಿದ್ದರೆ, ಉಚಿತ ನೀಡಿ ಏನು ಪ್ರಯೋ ಜನ ಎಂದು ಪ್ರಯಾಣಿ ಕರು ಹಿಡಿಶಾಪ ಹಾಕಿದ ದೃಶ್ಯ ಕಂಡು ಬಂದಿತು. ಇನ್ನು ಈ ಬಗ್ಗೆ ಪ್ರಶ್ನೆ ಮಾಡಲು ಕೆಎಸ್‌ಆರ್‌ಟಿಸಿ ಅಧಿಕಾರಿಗಳ ದೂರವಾಣಿಗೆ ಕರೆ ಮಾಡಿದರೆ ಯಾರು ಕರೆ ಸ್ವೀಕರಿಸದಿ ರುವುದು ಜನರ ಆಕ್ರೋಶವನ್ನು ಹೆಚ್ಚು ಮಾಡಿತು.

ಖಾಸಗಿ ಬಸ್‌ ಮೊರೆ: ಸಾರಿಗೆ ಸಂಸ್ಥೆ ಬಸ್‌ಗಳ ಕೊರತೆಯಿಂದ ಕೆಲ ಪ್ರಯಾಣಿಕರು ಖಾಸಗಿ ಬಸ್‌ಗಳನ್ನು ಅವಲಂಬಿಸುವಂತಾಯಿತು. ಕೆಎಸ್‌ಆರ್‌ಟಿಸಿಯಲ್ಲಿ ಉಚಿತವಾಗಿ ಸಂಚರಿಸಬಹುದಾಗಿದ್ದರೂ, ಬಸ್‌ ಸೌಲ ಭ್ಯ ಇಲ್ಲ ದ ಕಾರಣ ಕೆಲ ಮಹಿಳೆಯರು ಖಾಸಗಿ ಬಸ್‌ ಗಳನ್ನೇ ಅವಲಂಬಿಸಿದರು. ಇನ್ನು ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಉಚಿತ ಪ್ರಯಾಣ ಎಂದು ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ರೈಲಿನಲ್ಲಿ ದಿನನಿತ್ಯ ಪ್ರಯಾಣಿಸುತ್ತಿದ್ದ ಮಹಿಳಾ ಪ್ರಯಾಣಿಕರು ಮತ್ತು ಖಾಸಗಿ ಬಸ್‌ಗೆ ಹೋಗು ತ್ತಿದ್ದ ಪ್ರಯಾಣಿಕರು ಕೆಎಸ್‌ಆರ್‌ಟಿಸಿ ಕಡೆ ಮುಖಮಾಡಿರುವ ಹಿನ್ನೆಲೆಯಲ್ಲಿ ಸಮಸ್ಯೆ ಯಾಗಿದೆ ಎಂದು ಸಾರಿಗೆ ಸಂಸ್ಥೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Advertisement

ಮೊದಲ ದಿನ 11 ಸಾವಿರ ಮಹಿಳಾ ಪ್ರಯಾಣಿಕರು : ರಾಮನಗರ: ಶಕ್ತಿಯೋಜನೆ ಜಾರಿಯಾದ ಮೊದಲ ದಿನ ಜಿಲ್ಲೆಯ 6 ಘಟಕಗಳ ವ್ಯಾಪ್ತಿಯಲ್ಲಿ 11,081 ಮಂದಿ ಮಹಿಳಾ ಪ್ರಯಾಣಿಕರು ಸಂಚಾರ ಮಾಡಿದ್ದಾರೆ ಎಂದು ಸಾರಿಗೆ ಸಂಸ್ಥೆಯ ಮೂಲಗಳು ಮಾಹಿತಿ ನೀಡಿವೆ. ಜಿಲ್ಲೆಯಲ್ಲಿ 5 ಘಟಕ ಮತ್ತು ಆನೇಕಲ್ಲು ಘಟಕ ರಾಮನಗರ ಜಿಲ್ಲಾ ವಿಭಾಗಕ್ಕೆ ಸೇರಿದ್ದು, ಈ ಎಲ್ಲಾ ಘಟಕಗಳ ಬಸ್‌ಗಳಲ್ಲಿ 11,081 ಮಂದಿ ಮಹಿಳೆಯರು ಸಂಚಾರ ಮಾಡಿದ್ದು, ಇವರ 3,19,013 ರೂ. ಟಿಕೆಟ್‌ ಉಚಿತವಾಗಿ ನೀಡಲಾಗಿದೆ ಎಂದು ಇಲಾಖಾ ಮಾಹಿತಿ ತಿಳಿಸಿದೆ. ಜಿಲ್ಲಾ ವ್ಯಾಪ್ತಿಯ 6 ಘಟಕಗಳಿಂದ ಪ್ರತಿನಿತ್ಯ 429 ಸಾರಿಗೆ ಸಂಸ್ಥೆಯ ಬಸ್‌ಗಳು ಸಂಚರಿಸುತ್ತಿದ್ದು, 1.34 ಲಕ್ಷ ಮಂದಿ ಪ್ರಯಾಣಿಸುತ್ತಿದ್ದಾರೆ. ಇದರಲ್ಲಿ 65 ಸಾವಿರ ಮಹಿಳಾ ಪ್ರಯಾಣಿಕರು ಎಂದು ಅಂದಾಜಿಸಲಾಗಿದೆ.

ಭಾನುವಾರ ಮಧ್ಯಾಹ್ನದ ಬಳಿಕ ಯೋಜನೆ ಜಾರಿಯಾಗಿರುವ ಹಿನ್ನೆಲೆಯಲ್ಲಿ 11 ಸಾವಿರ ಮಂದಿ ಮಹಿಳೆಯರು ಸಂಚರಿಸಿದ್ದು, ಮುಂದಿನ ದಿನಗಳಲ್ಲಿ ಈ ಪ್ರಮಾಣ ಹೆಚ್ಚಾಗಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬಸ್‌ನಲ್ಲಿ ಶೇ.50ರಷ್ಟು ಮೀಸಲಾತಿ ಎಲ್ಲಿ?: ಆಕ್ರೋಶ: ಸರ್ಕಾರ ಬಸ್‌ನಲ್ಲಿ ಶೇ.50ರಷ್ಟು ಸೀಟು ಪುರುಷರಿಗೆ ಮಾತ್ರ ಮೀಸಲು ಎಂದು ಹೇಳಿತ್ತು. ಆದರೆ, ಬಸ್‌ನಲ್ಲಿ ಪುರುಷರಿಗೆ ಎಲ್ಲಿ ಆಸನಗಳನ್ನು ಮೀಸಲಿಟ್ಟಿದ್ದೀರಿ ಎಂದು ಪ್ರಯಾಣಿಕರು ಪ್ರಶ್ನಿಸಿದ ಪ್ರಸಂಗಗಳು ನಡೆದವು. ಸಾರಿಗೆ ಸಂಸ್ಥೆಯ ಬಸ್‌ನಲ್ಲಿ ಒಂದು ಆಸನ ವಿಶೇಷ ಚೇತನರಿಗೆ, ಎಂಎಲ್‌ಎ ಮತ್ತು ಎಂಪಿಗಳಿಗೆ ಒಂದು ಆಸನ, ಮಹಿಳೆಯರಿಗೆ 5 ಆಸನ, 1 ಅಸನ ಹಿರಿಯ ನಾಗರೀಕರಿಗೆ ಮೀಸಲಿಸಲಾಗಿದೆ. ಆದರೆ, ಪುರಷರಿಗೆ ಯಾವುದೇ ಆಸನ ಮೀಸಲಿರದ ಕಾರಣ ಪುರುಷ ಪ್ರಯಾಣಿಕರು ಕಾಸು ನೀಡಿದರೂ ನಿಂತು ಪ್ರಯಾಣಿಸಬೇಕಾಗಿದೆ. ಕಾಸು ನೀಡಿದರೂ ನಿಂತೇ ಪ್ರಯಾಣಿಸಬೇಕು ಎಂದು ಪುರುಷರು ಮೂಗು ಮುರಿಯುತ್ತಿದ್ದಾರೆ.

ಪ್ರತಿ ಸೋಮವಾರ ಇದೇ ಸಮಸ್ಯೆ: ಜಿಲ್ಲೆಯಲ್ಲಿ ಪ್ರತಿ ಸೋಮವಾರ ಬೆಂಗಳೂರಿಗೆ ಹೋಗುವ ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿರುತ್ತಾರೆ. ಆದರೆ, ಬಸ್ಸುಗಳ ಸಂಖ್ಯೆ ಕಡಿಮೆ ಇರುವ ಕಾರಣ ಪ್ರಯಾಣಿಕರು ಪರದಾಡುತ್ತಿದ್ದಾರೆ. ಸೋಮವಾರ ಮುಂಜಾನೆ ವೇಳೆ ಹೆಚ್ಚುವರಿ ಬಸ್‌ ವ್ಯವಸ್ಥೆ ಮಾಡಲು ಕೆಎಸ್‌ ಆರ್‌ಟಿಸಿ ಅಧಿಕಾರಿಗಳು ಮುಂದಾಗದ ಪರಿಣಾಮ, ಕೆಲಸಕ್ಕೆ ಹೋಗುವವರ ಪಾಡು ದೇವರಿಗೇ ಪ್ರೀತಿ ಎಂಬಂತಾಗಿದೆ. ಇನ್ನು ಭಾನುವಾರ ಸಂಜೆ ಸಹ ಇದೇ ಪರಿಸ್ಥಿತಿ ಇದೆ.

ಕಾಸು ಕೊಟ್ಟವರಿಗೆ ಸೀಟು ಕೊಡ್ರಿ: ರಾಮನಗರ: ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಜಾರಿಯಾಗಿರುವ ಹಿನ್ನೆಲೆ, ಬಸ್‌ಗಳ ತುಂಬಾ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಸಂಚರಿಸುತ್ತಿದ್ದು, ಬಹುತೇಕ ಸೀಟುಗಳು ಮಹಿಳೆಯರಿಂದ ಭರ್ತಿಯಾಗುತ್ತಿದ್ದು, ಹಣ ಕೊಟ್ಟು ನಿಂತು ಕೊಂಡೇ ಪ್ರಯಾಣಿಸಬೇಕು ಎಂದು ಪುರುಷರು ಮೂಗು ಮುರಿಯುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next