Advertisement

ಏಷ್ಯಾ ಕಪ್, ಟಿ20 ವಿಶ್ವಕಪ್‌: ಶಕಿಬ್‌ ಅಲ್‌ ಹಸನ್‌ ಬಾಂಗ್ಲಾ ನಾಯಕ

10:32 PM Aug 13, 2022 | Team Udayavani |

ಢಾಕಾ: ಮುಂಬರುವ ಏಷ್ಯಾ ಕಪ್‌, ನ್ಯೂಜಿ ಲ್ಯಾಂಡ್‌ ತ್ರಿಕೋನ ಸರಣಿ ಮತ್ತು ಟಿ20 ವಿಶ್ವಕಪ್‌ಗಾಗಿ ಬಾಂಗ್ಲಾದೇಶ ಟಿ20 ಕ್ರಿಕೆಟ್‌ ತಂಡದ ನಾಯಕರನ್ನಾಗಿ ಶಕಿಬ್‌ ಅಲ್‌ ಹಸನ್‌ ಅವರನ್ನು ಹೆಸರಿಸಲಾಗಿದೆ.

Advertisement

ಬಾಂಗ್ಲಾದೇಶ ಕ್ರಿಕೆಟ್‌ ಮಂಡಳಿ (ಬಿಸಿಬಿ) ಶಕಿಬ್‌ ಅವರ ಹೆಸರನ್ನು ಪ್ರಕಟಿಸುವ ಮೂಲಕ ಕಳೆದೊಂದು ವಾರದಿಂದ ಇದ್ದ ಊಹಪೋಹಗಳಿಗೆ ತೆರೆಬಿದ್ದಿದೆ. ಶಕಿಬ್‌ ಅವರನ್ನು ಕಳೆದ ಜೂನ್‌ನಲ್ಲಿ ಟೆಸ್ಟ್‌ ನಾಯಕನನ್ನಾಗಿ ಹೆಸರಿಸಲಾಗಿತ್ತು. ಹೀಗಾಗಿ ಅವರು ದೀರ್ಘ‌ ಅವಧಿಯವರೆಗೆ ನಾಯಕರಾಗಿ ಮುಂದುವರಿಯುವ ಸಾಧ್ಯತೆಯಿದೆ.

17 ಸದಸ್ಯರ ತಂಡ
ಏಷ್ಯಾ ಕಪ್‌ಗಾಗಿ 17 ಸದಸ್ಯರ ತಂಡವನ್ನು ಕೂಡ ಬಿಸಿಬಿ ಪ್ರಕಟಿಸಿದೆ. ಏಷ್ಯಾ ಕಪ್‌ ಯುಎಇನಲ್ಲಿ ಆ. 27ರಿಂದ ಆರಂಭವಾಗಲಿದೆ. ಶಬ್ಬೀರ್‌ ರೆಹಮಾನ್‌ ತಂಡಕ್ಕೆ ಮರಳಿದ್ದಾರೆ. ಮುಶ್ಫಿಕರ್‌ ರಹೀಮ್‌ ಕೂಡ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಆದರೆ ಶೋರಿಫ‌ುಲ್‌ ಇಸ್ಲಾಮ್‌, ಮುನಿಮ್‌ ಶಹರಿಯಾರ್‌ ಮತ್ತು ನಜ್ಮುಲ್‌ ಹೊಸೈನ್‌ ಶಾಂಟೊ ಅವರನ್ನು ಹೊರಗಿಡಲಾಗಿದೆ.

ನ್ಯೂಜಿಲ್ಯಾಂಡಿನಲ್ಲಿ ನಡೆಯಲಿರುವ ಟಿ20 ತ್ರಿಕೋನ ಸರಣಿಯಲ್ಲಿ ಪಾಕಿಸ್ಥಾನ ಕೂಡ ಆಡಲಿದೆ. ಈ ಸರಣಿ ಅ. 7ರಿಂದ ಆರಂಭವಾಗಲಿದೆ. ಇದು ವಿಶ್ವಕಪ್‌ಗೆ ಮೊದಲು ಬಾಂಗ್ಲಾದೇಶ ಆಡಲಿರುವ ಕೊನೆಯ ಸರಣಿಯಾಗಲಿದೆ. ವಿಶ್ವಕಪ್‌ ಆಸ್ಟ್ರೇಲಿಯದಲ್ಲಿ ಅಕ್ಟೋಬರ್‌-ನವೆಂಬರ್‌ನಲ್ಲಿ ನಡೆಯಲಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next