Advertisement

Shakib Al Hasan: ಇಸಿಬಿ ಆಟಗಳಲ್ಲಿ ಬೌಲಿಂಗ್‌ ಮಾಡದಂತೆ ಶಕೀಬ್‌ ಅಲ್‌ ಹಸನ್‌ ಗೆ ನಿಷೇಧ

04:05 PM Dec 14, 2024 | Team Udayavani |

ಲಂಡನ್:‌ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಯು ಬಾಂಗ್ಲಾದೇಶದ ಆಲ್‌ರೌಂಡರ್ ಶಕೀಬ್ ಅಲ್ ಹಸನ್ (Shakib Al Hasan) ಅವರನ್ನು ಇಸಿಬಿ ಆಯೋಜಿಸಿದ ಎಲ್ಲಾ ಸ್ಪರ್ಧೆಗಳಲ್ಲಿ ಬೌಲಿಂಗ್ ಮಾಡುವುದರಿಂದ ಅಮಾನತು ಮಾಡಿದೆ.

Advertisement

ಶಕೀಬ್ ಅವರ ಬೌಲಿಂಗ್ ಕ್ರಮವನ್ನು ಕಾನೂನುಬಾಹಿರವೆಂದು ಪರಿಗಣಿಸಿದ ನಂತರ ಬೌಲಿಂಗ್‌ ನಡೆಸುವುದನ್ನು ಅಮಾನತು ಮಾಡಿದೆ.

ಟೌಂಟನ್‌ ನಲ್ಲಿ ನಡೆದ ಸಾಮರ್‌ಸೆಟ್ ವಿರುದ್ಧದ ಕೌಂಟಿ ಪಂದ್ಯದಲ್ಲಿ ಸೆಪ್ಟಂಬರ್‌ನಲ್ಲಿ ಸರ್ರೆ ಪರ ಆಡಿದ ಸಂದರ್ಭದಲ್ಲಿ ಎಡಗೈ ಸ್ಪಿನ್ನರ್ ಶಕೀಬ್‌ ಬೌಲಿಂಗ್‌ ಬಗ್ಗೆ ಸಂಶಯ ವ್ಯಕ್ತಪಡಿಸಲಾಗಿತ್ತು. ಆನ್-ಫೀಲ್ಡ್ ಅಂಪೈರ್‌ ಗಳಾದ ಸ್ಟೀವ್ ಒ’ಶೌಗ್ನೆಸ್ಸಿ ಮತ್ತು ಡೇವಿಡ್ ಮಿಲ್ಸ್ ಅವರು ಆ ಆಟದಲ್ಲಿ ಒಂಬತ್ತು ವಿಕೆಟ್‌ಗಳನ್ನು ಪಡೆದ ಶಕೀಬ್ ಅವರ ಬೌಲಿಂಗ್ ಕ್ರಿಯೆಯಲ್ಲಿ ದೋಷ ಪತ್ತೆ ಮಾಡಿದರು. ಅಲ್ಲದೆ ಬಳಿಕ ಶಕೀಬ್‌ ಅವರು ಬೌಲಿಂಗ್‌ ಶೈಲಿ ಪರೀಕ್ಷೆಗೆ ಒಳಗಾದರು.

712 ಅಂತಾರಾಷ್ಟ್ರೀಯ ವಿಕೆಟ್‌ ಪಡೆದಿರುವ ಶಕೀಬ್‌ ಅಲ್‌ ಹಸನ್‌ ಅವರ 17 ವರ್ಷಗಳ ಸುದೀರ್ಘ ವೃತ್ತಿಜೀವನದಲ್ಲಿ ಇದೇ ಮೊದಲ ಬಾರಿಗೆ ಬೌಲಿಂಗ್‌ ಶೈಲಿಯ ಬಗ್ಗೆ ಶಂಕೆ ವ್ಯಕ್ತವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next